Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

12 ರಿಂದ 6ನೇ ಲಿಸಾಕಾನ್-2026 ಅಂತಾರಾಷ್ಟ್ರೀಯ ಸಮ್ಮೇಳನ

ಬೆಂಗಳೂರಿನಲ್ಲಿ ಎಲ್ಐಎಸ್‌ ಅಕಾಡೆಮಿಯ ರಾಷ್ಟ್ರೀಯ ಪ್ರಶಸ್ತಿಗಳ ಪ್ರದಾನ । ಸಮಾರಂಭದ ಉದ್ಘಾಟಕರಾಗಿ ಸಚಿವ ಮಧು ಬಂಗಾರಪ್ಪ ಆಗಮನ

ಹಸಿರು ಕ್ರಾಂತಿ ವರದಿ ಬೆಂಗಳೂರು

ಡಾ.ಮನಮೋಹನಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲಯ, ಎಲ್ಐಎಸ್‌ ಅಕಾಡೆಮಿ ಹಾಗೂ ಕರ್ನಾಟಕದ ಮಾಜಿ ಕುಲಪತಿಗಳ ವೇದಿಕೆ (ಎಫ್‌ವಿಸಿಕೆ) ಸಹಯೋಗದಲ್ಲಿ 6ನೇ ಲಿಸಾಕಾನ್-2026 ಅಂತಾರಾಷ್ಟ್ರೀಯ ಸಮ್ಮೇಳನವು ನ.12 ರಿಂದ 14ರವರೆಗೆ ಬೆಂಗಳೂರಿನ ಸೆಂಟ್ರಲ್‌ ಕಾಲೇಜು ಆವರಣದಲ್ಲಿರುವ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರುಗಲಿದೆ.

ನ.12 ರಂದು ಬೆಳಗ್ಗೆ 11 ಗಂಟೆಗೆ 6ನೇ ಲಿಸಾಕಾನ್-2026ರ ಉದ್ಘಾಟನಾ ಸಮಾರಂಭ ನಡೆಯಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು.

 ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಮೇಶ.ಬಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂದರ್ಭದಲ್ಲಿ ಸಮ್ಮೇಳನದ ತಜ್ಞರ ಸಮಿತಿ ಸಿದ್ಧಪಡಿಸಿರುವ ಕರ್ನಾಟಕದ ಸಾರ್ವಜನಿಕ ಗ್ರಂಥಾಲಯಗಳನ್ನು ಅನುಭವ ಕೇಂದ್ರಗಳಾಗಿ ಪರಿವರ್ತಿಸುವ ನೀತಿ ಚೌಕಟ್ಟುನ್ನು ಪ್ರೊ.ರಮೇಶ್‌.ಬಿ ಸ್ವೀಕರಿಸಲಿದ್ದಾರೆ. ಮುಂಬೈನ ಟಾಟಾ ಮೆಮೋರಿಯಲ್‌ ಸೆಂಟರ್‌ ನ್ಯಾಷನಲ್‌ ಕ್ಯಾನ್ಸರ್‌ ಗ್ರೀಡ್‌((NCG)ನ ಸಲಹೆಗಾರರು (ಮಾಹಿತಿ ಸೇವೆಗಳು) ಹಾಗೂ ಟಾಟಾ ಮೆಮೋರಿಯಲ್‌ ಆಸ್ಪತ್ರೆಯ (ಪರಮಾಣು ಶಕ್ತಿ ಇಲಾಖೆ) ಗ್ರಂಥಾಲಯ ವಿಜ್ಞಾನ ವಿಭಾಗದ ಮಾಜಿ ಮುಖ್ಯಸ್ಥ ಡಾ.ಮೇಧಾ ಜೋಶಿ ಮುಖ್ಯ ಭಾಷಣ ಮಾಡಲಿದ್ದಾರೆ. ಗೌರವ ಅತಿಥಿಗಳಾಗಿ ಕೋಲ್ಕತ್ತಾದ ರಾಷ್ಟ್ರೀಯ ಗ್ರಂಥಾಲಯದ ಮಹಾನಿರ್ದೇಶಕ ಡಾ.ಪ್ರೋಜೆಸ್‌ ರಾಯ್, ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳ ಇಲಾಖೆಯ ಆಯುಕ್ತೆ ಸುಷ್ಮಾ ಗೋಡಬೋಲೆ(ಐಎಎಸ್), ಎಫ್‌ವಿಸಿಕೆ ಅಧ್ಯಕ್ಷ ಡಾ.ಎಸ್.ಚಂದ್ರಶೇಖರಶೆಟ್ಟಿ, ಲಿಸಾಕಾನ್-2026 ಸಂಘಟನಾ ಅಧ್ಯಕ್ಷ ಪ್ರೊ.ಟಿ.ಡಿ.ಕೆಂಪರಾಜು ಆಗಮಿಸುವರು.

ಇದೇ ಸಂದರ್ಭದಲ್ಲಿ ಎಲ್ಐಎಸ್‌ ಅಕಾಡೆಮಿಯ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಡಾ.ಎಸ್.ಆರ್.ರಂಗನಾಥನ್‌ ಜೀವಮಾನ ಸಾಧನೆ ಪ್ರಶಸ್ತಿಗೆ ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ವಿಜ್ಞಾನ ವಿಭಾಗದ ಮಾಜಿ ಪ್ರಾಧ್ಯಾಪಕ ಪ್ರೊ.ಎ.ವೈ.ಅಸುಂಡಿ ಹಾಗೂ ಇನ್ಫಾರ್ಮ್ಯಾಟಿಕ್ಸ್‌ ಇಂಡಿಯಾ ಲಿಮಿಟೆಡ್ (Informatics Publishing Limited) ಸಂಸ್ಥಾಪಕ ಅಧ್ಯಕ್ಷ ಎನ್.ವಿ.ಸತ್ಯನಾರಾಯಣರನ್ನು ಆಯ್ಕೆ ಮಾಡಲಾಗಿದೆ.

 ಪ್ರೊ.ಪಿ.ವಿ.ಕೊಣ್ಣೂರ ರಾಷ್ಟ್ರೀಯ ಅತ್ಯುತ್ತಮ ಗ್ರಂಥಪಾಲಕ ಪ್ರಶಸ್ತಿಗೆ ಕೋಲ್ಕತ್ತಾ ಭಾರತೀಯ ಸಾಂಖ್ಯಿಕ ಸಂಸ್ಥೆಯ ಮುಖ್ಯ ಗ್ರಂಥಪಾಲಕ ಡಾ.ಕಿಶೋರ್‌ಚಂದ್ರ ಸತ್ಪತಿಗೆ ಆಯ್ಕೆಯಾಗಿದ್ದಾರೆ.

ಶಾರದಾ ರಂಗನಾಥನ್‌ ಅತ್ಯುತ್ತಮ ಮಹಿಳಾ ಗ್ರಂಥಪಾಲಕಿ ಪ್ರಶಸ್ತಿಗೆ ಮುಂಬೈ ನ್ಯಾಷನಲ್‌ ಕ್ಯಾನಸ್‌ ರ್ಗ್ರಿಡ್-ಟಾಟಾ ಮೆಮೋರಿಯಲ್‌ ಸೆಂಟರ್‌ನ ಸಲಹೆಗಾರರು (ಮಾಹಿತಿ ಸೇವೆಗಳು) ಡಾ.ಮೇಧಾ ಜೋಶಿ, ಡಾ.ಟಿ.ಬಿ.ರಾಜಶೇಖರ್‌ ಅತ್ಯುತ್ತಮ ಯುವ ಗ್ರಂಥಪಾಲಕ ಪ್ರಶಸ್ತಿಗೆ ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ವಿಶ್ವವಿದ್ಯಾಲಯದ ಸಹಾಯಕ ಗ್ರಂಥಪಾಲಕ ಸಿದ್ದು ಹುಡೇದ್‌, ಪ್ರೊ.ಎಂ.ಎ.ಗೋಪಿನಾಥ್‌ ಅತ್ಯುತ್ತಮ ಎಲ್ಐಎಸ್‌ ಶಿಕ್ಷಕ ಪ್ರಶಸ್ತಿಗೆ ನವದೆಹಲಿಯ ದೆಹಲಿ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಮಾರ್ಗಂ ಮಧುಸೂದನ್‌ ಅವರನ್ನು ಆಯ್ಕೆ ಮಾಡಲಾಗಿದೆ.

 ಗ್ರಂಥಪಾಲಕರು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವೃತ್ತಿಪರರು, ಶಿಕ್ಷಣ ತಜ್ಞರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಲಿಸಾಕಾನ್-2026ನ ಸಂಘಟನಾ ಕಾರ್ಯದರ್ಶಿ ಡಾ.ಟಿ.ಎನ್.ತಾಂಡವಗೌಡ ಪ್ರಕಟಣೆಯಲ್ಲಿ ಕೋರಿದ್ದಾರೆ.


ಅನ್ವೇಷಿಸಿ, ತೊಡಗಿಸಿಕೊಳ್ಳಿ, ವಿಕಸಿಸಿ ಎಂಬ ಘೋಷವಾಕ್ಯದೊಂದಿಗೆ ಗ್ರಂಥಾಲಯಗಳು ಅನುಭವ ಕೇಂದ್ರಗಳು ಎಂಬ ವಿಷಯದ ಕುರಿತು ಸಮ್ಮೇಳನವನ್ನು ಆಯೋಜಿಸಲಾಗಿದೆ. ಕೃತಕ ಬುದ್ಧಿಮತ್ತೆ ಹಾಗೂ ಉದಯೋನ್ಮುಖ ಡಿಜಿಟಲ್‌ ತಂತ್ರಜ್ಞಾನಗಳ ಈ ಯುಗದಲ್ಲಿ ಸೃಜನಶೀಲತೆ, ಸಹಯೋಗ, ನಾವೀನ್ಯತೆ ಮತ್ತು ಜೀವನ ಪರ್ಯಂತ ಕಲಿಕೆಯನ್ನು ಉತ್ತೇಜಿಸುವ ಚೈತನ್ಯಶೀಲ ಜ್ಞಾನ ಪರಿಸರ ವ್ಯವಸ್ಥೆಗಳಾಗಿ ಗ್ರಂಥಾಲಯಗಳನ್ನು ಮರುರೂಪಿಸುವ ಉದ್ದೇಶಿತ ಈ ಆವೃತ್ತಿಯನ್ನು ಲಿಸಾಕಾನ್ ಹೆಸರಿನಲ್ಲಿ ಎಲ್ಐಎಸ್‌ ಅಕಾಡೆಮಿಯ ಪ್ರಮುಖ ದ್ವೈವಾರ್ಷಿಕ ಅಂತಾರಾಷ್ಟ್ರೀಯ ಸಮ್ಮೇಳನ ಸರಣಿಯಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ.
-ಪ್ರೊ.ಪಿ.ವಿ.ಕೊಣ್ಣೂರ, ಅಧ್ಯಕ್ಷರು, ಎಲ್‌ಐಎಸ್‌ ಅಕಾಡೆಮಿ ಬೆಂಗಳೂರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೀರಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹ: ರಾಜಕಾರಣಿಗಳ ವಿರುದ್ಧ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಆಕ್ರೋಶಪುಡಕಲಕಟ್ಟಿಯಲ್ಲಿ ಮೃಣಾಲ್ ಶುಗರ್ಸ್ ನೂತನ ಕಾರ್ಖಾನೆ ಲೋಕಾರ್ಪಣೆತಾಳಿಕೋಟೆಯಲ್ಲಿ ನಂದಿ ರೆಡಿಮೆಡ್ ಗಾರ್ಮೆಂಟ್ಸ್ ಫ್ಯಾಕ್ಟರಿ ಉದ್ಘಾಟನೆ12 ರಿಂದ 6ನೇ ಲಿಸಾಕಾನ್-2026 ಅಂತಾರಾಷ್ಟ್ರೀಯ ಸಮ್ಮೇಳನಹಿಂದುಸ್ತಾನಿ ವಾದ್ಯ ಸಂಗೀತದಲ್ಲಿ ಜಿಲ್ಲೆಗೆ ವರುಣ್ ಪ್ರಥಮರನ್ನ ಬೆಳಗಲಿ ಭಜಂತ್ರಿ ಗಲ್ಲಿಯಲ್ಲಿ ವೈಭವದ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವಬಳ್ಳಾರಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಸ್ಥಾನಗಳಿಗೆ ನವೆಂಬರ್ 13 ರಂದು ಚುನಾವಣೆಬಳ್ಳಾರಿಯಲ್ಲಿ 4 ಎಕರೆ ಸರ್ಕಾರಿ ಜಮೀನು ವಶಕ್ಕೆ ಪಡೆದ ಜಿಲ್ಲಾಡಳಿತನಮ್ಮ ಕರುನಾಡು ವೇದಿಕೆ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಮಾಜಿ ಸಚಿವ ಶ್ರೀರಾಮುಲು