ಬಳ್ಳಾರಿ, ಅ11 ನಗರದ ಡಾ. ಬಾಬು ಜಗಜೀವನ ರಾಮ್ ಭವನದಲ್ಲಿ ನಮ್ಮ ಕರುನಾಡು ವೇದಿಕೆಯ ಉದ್ಘಾಟನೆ ಹಾಗೂ ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ಪದಾಧಿಕಾರಿಗಳ ಸಮಾರಂಭ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಗಣ್ಯರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ, ಲಿಡ್ಕರ್ ಅಧ್ಯಕ್ಷ ಮುಂಡಗಿ ನಾಗರಾಜ್, ಯುವ ನಾಯಕ ಎನ್. ಸಂದೀಪ್, ಜಿ.ಕೆ. ಫೌಂಡೇಶನ್‌ನ ಜಿ.ಕೆ. ಸ್ವಾಮಿ, ಪಿ.ಜಗನ್ನಾಥ, ಗೋವಿಂದರಾಜುಲು, ಎಸ್. ಸುಂಕಣ್ಣ, ಜನತಾ ಬಜಾರ್ ಡೈರೆಕ್ಟರ್ ಪ್ರದೀಪ್ ರೆಡ್ಡಿ, ವಿ.ಕೆ. ಬಸಪ್ಪ, ಜೋಳದ ತಿಮ್ಮಪ್ಪ, ಪಿ.ಜಿ. ವೆಂಕಟೇಶ್, ಹೊನ್ನಳ್ಳಿ ಶಿವಣ್ಣ, ಕಟ್ಟೆಪ್ಪ, ಪೆದ್ದಣ್ಣ ಹೊನ್ನಳ್ಳಿ, ಬತ್ರಿ ಮುರಳಿ ಹಾಗೂ ಹೊನ್ನಳ್ಳಿ ಹಿರಿಯರು, ಸೇರಿದಂತೆ ಹಲವು ಗಣ್ಯರು ಹಾಗೂ ಮುಖಂಡರ ಉಪಸ್ಥಿತಿಯಲ್ಲಿದ್ದರು.
ಕಾರ್ಯಕ್ರಮದ ಅಂಗವಾಗಿ ಮಾಸ್ಟರ್ ಅಭಿಷೇಕ್ ಅವರ ತಂಡದಿಂದ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು. ನಂತರ ಮಾತನಾಡಿದ ಹಿರಿಯ ಮುಖಂಡರು, ನಾಡಿನ ನಡೆ-ನುಡಿ, ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಯುವಜನತೆ ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಯುವಕರು, ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.
ನಮ್ಮ ಕರುನಾಡು ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಫೋರ್ಟ್ ಪಂಪಾ, ರಾಜ್ಯ ಉಪಾಧ್ಯಕ್ಷ ಎ.ಎಂ. ನರೇಂದ್ರ, ಬಳ್ಳಾರಿ ಜಿಲ್ಲಾಧ್ಯಕ್ಷ ಹೊನ್ನಳ್ಳಿ ಸೂರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ವೀರಭದ್ರ (ಕುಡುತಿನಿ), ಎಸ್. ಸುಂಕಣ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಂಘಟಕರಾದ ರುದ್ರಮಣಿ, ದಿಲೀಪ್, ವಿಜಯಕುಮಾರ್ ಸೇರಿದಂತೆ ಹಲವು ಯುವಕರು ಮತ್ತು ಸಂಘಟಕರು ಉಪಸ್ಥಿತರಿದ್ದರು.