ರನ್ನ ಬೆಳಗಲಿ: ನ. ೧೧: ಪಟ್ಟಣದ ಭಜಂತ್ರಿ ಗಲ್ಲಿಯಲ್ಲಿ ಯುಗಾದಿ ಪಾಡ್ಯ ಹಬ್ಬದ ನಿಮಿತ್ತ ಮಂಗಳವಾರ ಶ್ರೀ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವವು ಭಕ್ತಿಭಾವದಿಂದ ವೈಭವದಿಂದ ಜರುಗಿತು. ವೇದಿಕೆಯ ಮೇಲಿದ್ದ ಗಣ್ಯರು ಜ್ಯೋತಿ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಿದ್ದುಗೌಡ ಪಾಟೀಲ ಮಾತನಾಡಿ, ಜಾತ್ರೆ ಹಾಗೂ ಹಬ್ಬಗಳು ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವುದರ ಜೊತೆಗೆ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ವೇದಿಕೆಗಳಾಗಿವೆ ಎಂದರು.
ಮಹಾಲಿಂಗಪ್ಪ ಗುಂಜಿಗಾವಿ ಮಾತನಾಡಿ, ಭಜಂತ್ರಿ ಸಮುದಾಯವು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಪ್ರಗತಿ ಸಾಧಿಸಬೇಕು ಎಂದು ಕರೆ ನೀಡಿದರು.
ನಂತರ ಭಜಂತ್ರಿ ವಾದ್ಯಮೇಳದ ನಾದ ಹಾಗೂ ಸಾಂಪ್ರದಾಯಿಕ ಹಾಡುಗಳೊಂದಿಗೆ ಬೆಳ್ಳಿರಥದಲ್ಲಿ ನೂಲಿ ಚಂದಯ್ಯನವರು ಮತ್ತು ಮಹಾಲಕ್ಷ್ಮಿ ದೇವಿಯ ಭಾವಚಿತ್ರಗಳ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಂಗಪ್ಪ ಅಮಾತಿ, ಹಣಮಂತ ಕೊಣ್ಣೂರ, ಪ್ರವೀಣ ಪಾಟೀಲ, ಈರಪ್ಪ ಕಿತ್ತೂರ, ಮಹಾಲಿಂಗ ಪುರಾಣಿಕ, ಮುಬಾರಕ ಅತ್ತಾರ, ದೀಪಾ ಭಜಂತ್ರಿ, ನಾಗರಾಜ ಭಜಂತ್ರಿ, ರಾಜು ಭಜಂತ್ರಿ, ಸಾಗರ ಹವಾಲ್ದಾರ, ಯಮನಪ್ಪ ಪೂಜೇರಿ, ಸಂಗಪ್ಪ ರಾಮದುರ್ಗ, ಭೀಮಶಿ ಭಜಂತ್ರಿ, ಮಾರುತಿ ಭಜಂತ್ರಿ, ಪರಸಪ್ಪ ಭಜಂತ್ರಿ, ಯಮನಪ್ಪ ಭಜಂತ್ರಿ, ಸುರೇಶ ಭಜಂತ್ರಿ, ಮುತ್ತಪ್ಪ ಭಜಂತ್ರಿ, ಪತ್ರಕರ್ತ ರಾಘವೇಂದ್ರ ನೀಲಣ್ಣವರ ಹಾಗೂ ಗಸ್ತು ಪೊಲೀಸ್ ಅಧಿಕಾರಿ ಮಂಜುನಾಥ ಕಾರಜೋಳ ಸೇರಿದಂತೆ ಸಮಾಜದ ಮುಖಂಡರು ಮತ್ತು ಗಣ್ಯರು ಉಪಸ್ಥಿತರಿದ್ದರು.