ಬೆಳಗಾವಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಕಲಾ ಪ್ರತಿಭೋತ್ಸವದಲ್ಲಿ ವರುಣ್ ಶೇಟ್ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ.15ರಿಂದ 18 ವರ್ಷ ವಯೋಮಾನದ ಕಿಶೋರ ವಿಭಾಗದಲ್ಲಿ ಹಿಂದುಸ್ತಾನಿ ವಾದ್ಯ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವರುಣ್, ತನ್ನ ಅದ್ಭುತ ಹಾರ್ಮೋನಿಯಂ ವಾದನದ ಮೂಲಕ ನಿರ್ಣಾಯಕರ ಮೆಚ್ಚುಗೆ ಗಳಿಸಿ ಪ್ರಥಮ ಸ್ಥಾನಕ್ಕೆ ಭಾಜನನಾಗಿದ್ದಾನೆ.
ವರುಣ್ ಅವರು ಖ್ಯಾತ ಸಂಗೀತ ಗುರು ಪಂಡಿತ್ ಸಂಜಯ್ ದೇಶಪಾಂಡೆ ಅವರ ಶಿಷ್ಯರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ.
ಸ್ಪರ್ಧೆಯ ನಿರ್ಣಾಯಕರಾಗಿ ರಾವ್, ಗೋರೆ ಹಾಗೂ ರೋಹಿಣಿ ಗಂಗಾಧರಯ್ಯ ಅವರು ಕಾರ್ಯನಿರ್ವಹಿಸಿದ್ದರು. ವರುಣ್ ಸಾಧನೆಗೆ ಸಂಗೀತಾಭಿಮಾನಿಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.