ಬಳ್ಳಾರಿ. ನ. 11 : ಇಂದು ಮುಂಜಾನೆಯ ಶುಭದಿನದಂದು ಭಕ್ತಿ, ಶ್ರದ್ಧೆ ಮತ್ತು ನಿಷ್ಠೆಯ ಸಂಕೇತವಾಗಿ ಅಯ್ಯಪ್ಪ ಸ್ವಾಮಿಯ ಪವಿತ್ರ ಮಾಲೆ ಧರಿಸಿ ಮಾಜಿ ಸಚಿವ ಬಿ. ಶ್ರೀರಾಮುಲು ರಾಘವೇಂದ್ರ ಕಾಲೋನಿ ಎರಡನೇ ಹಂತದಲ್ಲಿರುವ ಅಯ್ಯಪ್ಪ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಆಶೀರ್ವಾದ ಪಡೆದರು.
ಭಕ್ತಿಯ ಹಾದಿಯಲ್ಲಿ ಸಾಗುವ ಈ ಪವಿತ್ರ ಮಾಲಾಧಾರಣೆಯು ಅವರ ಜೀವನದಲ್ಲಿ ಹೊಸ ಚೈತನ್ಯ, ಶಾಂತಿ, ಸಂತೋಷ ಹಾಗೂ ಸಾರ್ಥಕತೆಯನ್ನು ತರಲಿ ಎಂದು ಈ ಸಂದರ್ಭದಲ್ಲಿ ಅರ್ಚಕರು ಶ್ರೀರಾಮುಲು ಅವರಿಗೆ ಶುಭ ಕೋರಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಿ, ಬಡವರ ಪಾಲಿನ ಆಶಾಕಿರಣವಾಗಿ, ಜನಸೇವೆಯ ಮೂಲಕ ಅಪಾರ ಪ್ರೀತಿ ಮತ್ತು ಕಾಳಜಿ ಹೊಂದಿರುವ ಶ್ರೀರಾಮುಲು ಅವರಿಗೆ ಅಯ್ಯಪ್ಪ ಸ್ವಾಮಿಯ ದಿವ್ಯ ಕೃಪಾಕಟಾಕ್ಷ ಸದಾ ಇರಲಿ ಮತ್ತು ಅವರಿಗೆ ಸ್ವಾಮಿ ಇನ್ನಷ್ಟು ಆಯುಷ್ಯ ಆರೋಗ್ಯವನ್ನು ಕೊಟ್ಟು ಬಡವರ ಸೇವೆಗಾಗಿ ಉನ್ನತವಾದ ಅಧಿಕಾರವನ್ನು ನೀಡಲಿ ಎಂದು ಹಾರೈಸಿದರು.