Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ಜನನಿಬಿಡ ರಸ್ತೆಯಲ್ಲಿ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ : ಜಿ.ಪಿ. ಘೋರ್ಪಡೆ

ಸುರಕ್ಷತೆ ಇಲ್ಲದ ಜಿ.ವಿ.ಪಿ.ಆರ್. ಪೈಪ್‌ಲೈನ್ ಅಳವಡಿಕೆ ಸುಕಾಮಗಾರಿ * ಎಚ್ಚರಿಕೆ ಫಲಕಗಳ ಅಳವಡಿಕೆಗೆ ನಿರ್ಲಕ್ಷ್ಯ! 

ತಾಳಿಕೋಟೆ, ಪಟ್ಟಣದ ಅಭಿವೃದ್ಧಿಗಾಗಿ ಕೈಗೊಳ್ಳುವ ಕಾಮಗಾರಿಗಳು ಸಾರ್ವಜನಿಕರ ಅನುಕೂಲಕ್ಕೆ ಪೂರಕವಾಗಿರಬೇಕು. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಕಾಮಗಾರಿಗಳು ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವಂತಾಗಬಾರದು. ಆದರೆ ತಾಳಿಕೋಟೆ ಪಟ್ಟಣದಲ್ಲಿ ಜಲಧಾರೆ ಯೋಜನೆಯಡಿ ಜಿ.ವಿ.ಪಿ.ಆರ್. ಕಂಪನಿಯಿಂದ ನಡೆಯುತ್ತಿರುವ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯು ರಸ್ತೆ ಅಗೆತ ಸಾರ್ವಜನಿಕರ ಆಹುತಿಗೆ ಬಾಯ್ತೇರೆದು ನಡೆಯುತ್ತಿದೆ ಎಂದರೆ ತಪ್ಪಾಗಲಾರದು.
          ಪಟ್ಟಣದ ಮಹಾರಾಣಾ ಪ್ರತಾಪಸಿಂಹ ಸರ್ಕಲ್‌ನಿಂದ ಬಸವೇಶ್ವರ ಸರ್ಕಲ್‌ವರೆಗೆ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ಮಾರ್ಗದಲ್ಲಿ ಪ್ರತಿನಿತ್ಯ ನೂರಾರು ವಾಹನಗಳು, ದ್ವಿಚಕ್ರ ಸವಾರರು, ಪಾದಚಾರಿಗಳು ಹಾಗೂ ವ್ಯಾಪಾರಸ್ಥರು ಸಂಚರಿಸುತ್ತಾರೆ. ಜನಸಂಚಾರ ಮತ್ತು ವಾಹನ ದಟ್ಟಣೆ ಹೆಚ್ಚಿರುವ ಇಂತಹ ಪ್ರದೇಶದಲ್ಲಿ ಪೈಪ್‌ಲೈನ್ ಅಳವಡಿಕೆಗಾಗಿ ಬೃಹತ್ ಗಾತ್ರದ ತೆಗ್ಗುಗಳನ್ನು ತೋಡುವಾಗ ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಆದರೆ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಅಳವಡಿಸದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
       ರಸ್ತೆಯ ಮೇಲೆ ತೆಗ್ಗುಗಳನ್ನು ತೋಡಿದ ನಂತರ ಅವುಗಳ ಸುತ್ತಲೂ ಗಟ್ಟಿಯಾದ ಬ್ಯಾರಿಕೇಡ್‌ಗಳನ್ನು ಅಳವಡಿಸುವುದು, ದೂರದಿಂದಲೇ ವಾಹನ ಸವಾರರಿಗೆ ಕಾಣುವಂತೆ ಅಪಾಯದ ಸೂಚನಾ ಫಲಕಗಳನ್ನು ಹಾಕುವುದು, ರಾತ್ರಿ ವೇಳೆ ಪ್ರತಿಫಲಕ ದೀಪಗಳು ಹಾಗೂ ಎಚ್ಚರಿಕೆ ದೀಪಗಳನ್ನು ಅಳವಡಿಸುವುದು ಅತ್ಯಗತ್ಯ. ಪಾದಚಾರಿಗಳಿಗೆ ಪ್ರತ್ಯೇಕ ಸುರಕ್ಷಿತ ಮಾರ್ಗ ಕಲ್ಪಿಸುವುದರ ಜೊತೆಗೆ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನೂ ಮಾಡಬೇಕು. ಆದರೆ ಇಂತಹ ಮೂಲಭೂತ ಮುನ್ನೆಚ್ಚರಿಕೆ ಕ್ರಮಗಳೇ ಸಮರ್ಪಕವಾಗಿ ಕಂಡುಬರದೇ ಮನಸ್ಸಿಚ್ಚೆಯಂತೆ ಯದ್ವಾತದ್ವಾ ಕಾಮಗಾರಿ ನಡೆಯುತ್ತಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 
ಕಂಪನಿಯ ಜವಾಬ್ದಾರಿ ಏನು?
      ಜಿ.ವಿ.ಪಿ.ಆರ್. ಕಂಪನಿಯು ಪೈಪ್‌ಲೈನ್ ಅಳವಡಿಕೆ ಕಾಮಗಾರಿಯನ್ನು ಕೈಗೊಳ್ಳುವಾಗ ಕೇವಲ ಪೈಪ್‌ಗಳನ್ನು ಅಳವಡಿಸಿ ಕಾಮಗಾರಿ ಮುಗಿಸುವುದನ್ನೇ ಗುರಿಯಾಗಿಸಿಕೊಳ್ಳಬಾರದು. ಕಾಮಗಾರಿ ಆರಂಭಿಸುವ ಮೊದಲು ಪುರಸಭೆಯಿಂದ ಅಗತ್ಯ ಅನುಮತಿ ಪಡೆಯಬೇಕು. ಅನುಮೋದಿತ ನಕ್ಷೆ ಮತ್ತು ತಾಂತ್ರಿಕ ಮಾರ್ಗಸೂಚಿಗಳ ಪ್ರಕಾರವೇ ರಸ್ತೆ ಅಗೆಯಬೇಕು. ಕಾಮಗಾರಿ ನಡೆಯುವ ಪ್ರದೇಶದ ಜನಸಂದಣಿ, ವಾಹನಗಳ ಓಡಾಟ, ಅಂಗಡಿ-ಮುಂಗಟ್ಟುಗಳು ಹಾಗೂ ಮನೆಗಳ ಪ್ರವೇಶದ್ವಾರಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸದ ಯೋಜನೆ ರೂಪಿಸಬೇಕು. ಆದರೆ ಈ ಕಾಮಗಾರಿ ನಡೆಯುವ ಸ್ಥಳದಲ್ಲಿ ಯಾವುದೇ ಸುರಕ್ಷತೆ ಕಾಣುತ್ತಿಲ್ಲಾ.
        ಒಂದೇ ಬಾರಿಗೆ ಉದ್ದನೆಯ ರಸ್ತೆಯನ್ನು ಅಗೆದು ದಿನಗಟ್ಟಲೆ ತೆರೆದಿಡಲಾಗುತ್ತಿದೆ ಪೈಪ್‌ಲೈನ್ ಅಳವಡಿಸಿದ ತಕ್ಷಣ ತೆಗ್ಗುಗಳನ್ನು ಮುಚ್ಚಿ ರಸ್ತೆ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಬೇಕು. ಮತ್ತು ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕಾರ್ಮಿಕರಿಗೂ ಹೆಲ್ಮೆಟ್, ಸುರಕ್ಷತಾ ಬೂಟುಗಳು ಹಾಗೂ ಅಗತ್ಯ ರಕ್ಷಣಾ ಪರಿಕರಗಳನ್ನು ಒದಗಿಸಬೇಕು. ಇದೆಲ್ಲವನ್ನು ಅಧಿಕಾರಿಗಳು ಪರಿಶೀಲಿಸಿ ಕೆಲಸವನ್ನು ತೆಗೆದುಕೊಳ್ಳಬೇಕು ಅದ್ಯಾವುದು ಈ ಕಾಮಗಾರಿಯಲ್ಲಿ ನಡೆಯುತ್ತಿಲ್ಲಾ ಕಂಪನಿಯವರು ಬೇಜವಾಬ್ದಾರಿತನದಿಂದ ಕಾಮಗಾರಿ ನಿರ್ವಹಣೆ ಮಾಡುತ್ತಿದ್ದರೂ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರುಡತನಕ್ಕೆ ಜಾರಿದ್ದಾರೆ. 
     ಪಟ್ಟಣದ ರಸ್ತೆಗಳಲ್ಲಿ ಕಾಮಗಾರಿ ನಡೆಯಲು ಅನುಮತಿ ನೀಡಿದ ನಂತರ ಅದರ ಗುಣಮಟ್ಟ ಮತ್ತು ಸುರಕ್ಷತೆಯ ಮೇಲ್ವಿಚಾರಣೆ ನಡೆಸುವುದು ಪುರಸಭೆಯ ಪ್ರಮುಖ ಜವಾಬ್ದಾರಿಯಾಗಿದೆ. ಪುರಸಭೆಯ ಮುಖ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಎಂಜಿನಿಯರ್‌ಗಳು ಕಾಮಗಾರಿ ಸ್ಥಳಕ್ಕೆ ಆಗಾಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅನುಮೋದಿತ ನಕ್ಷೆಯ ಪ್ರಕಾರವೇ ಪೈಪ್‌ಲೈನ್ ಅಳವಡಿಸಲಾಗುತ್ತಿದೆಯೇ, ಕಾಮಗಾರಿಯ ತಾಂತ್ರಿಕ ಗುಣಮಟ್ಟ ಹೇಗಿದೆ, ಸುರಕ್ಷತಾ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆಯೇ, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆದರೆ ಕಾಮಗಾರಿ ಪ್ರಾರಂಭಗೊಂಡು ಸುಮಾರು ೨ ತಿಂಗಳು ಘತಿಸಿದರೂ ಯಾವೊಬ್ಬ ಅಧಿಕಾರಿಯು ಸ್ಥಳಕ್ಕೆ ಬೆಟ್ಟಿ ನೀಡಿ ಪರಿಶೀಲನೆ ನಡೆಸದಿರುವದು ಅಧಿಕಾರಿಗಳ ನಡೆಯ ಮೇಲೆ ಹಲವಾರು ಅನುಮಾನಗಳು ಶೃಷ್ಠಿಯಾಗಿವೆ.
ಜಿಲ್ಲಾ ಪಂಚಾಯಿತಿ ಸಿಇಒ ಗಮನಹರಿಸಲಿ
      ತಾಳಿಕೋಟೆ ನಗರದಲ್ಲಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿಯ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ವಿಶೇಷ ಗಮನಹರಿಸಬೇಕಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯ ಸುರಕ್ಷತಾ ವ್ಯವಸ್ಥೆ, ರಸ್ತೆ ಅಗೆತದ ವಿಧಾನ, ಕಾರ್ಮಿಕರ ರಕ್ಷಣೆ ಮತ್ತು ಸಾರ್ವಜನಿಕರ ಸಂಚಾರದ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಂಪನಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂಬುದು ಪಟ್ಟಣದ ಜನತೆಯ ಆಗ್ರಹವಾಗಿದೆ.
      ತಾಳಿಕೋಟೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ನಡೆಯುತ್ತಿರುವ ಈ ಯದ್ವಾ ತದ್ವಾ ಕಾಮಗಾರಿಯಿಂದ ಅನಾಹುತ ಸಂಭವಿಸಿದ ಬಳಿಕ ಹೊಣೆಗಾರರನ್ನು ಹುಡುಕುವ ಬದಲು, ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದ್ದು ಅಧಿಕಾರಿಗಳು ಇನ್ನಾದರೂ ಏಚ್ಚೆತ್ತುಕೊಳ್ಳುತ್ತಾರೋ ಕಾದು ನೋಡಬೇಕಾಗಿದೆ.
ಜಿವಿಪಿಆರ್ ಕಂಪನಿಯ ವತಿಯಿಂದ ನಡೆಯುತ್ತಿರುವ ಜಲಧಾರೆ ಯೋಜನೆ ಕಾಮಗಾರಿ ಜನರಿಗೆ ಒಳ್ಳೆಯದ್ದಾಗಿದ್ದರೂ ಕಾಮಗಾರಿ ನಿರ್ವಹಣೆಯಲ್ಲಿ ಯಾವುದೇ ಸುರಕ್ಷತೆ ಕಾಣುತ್ತಿಲ್ಲಾ ಬೃಹತ್ ಆಕಾರದು ಉದ್ದನೆಯ ತಗ್ಗು ತೋಡಿ ವಾರಗಟ್ಟೆಲೇ ಬಿಡಲಾಗುತ್ತಿದೆ ಈ ತಗ್ಗಿನಲ್ಲಿ ವಾಹನಗಳಾಗಲಿ ಜನರಾಗಲಿ ಬಿದ್ದರೆ ಅನಾಹುತ ತಪ್ಪಿದ್ದಲ್ಲಾ ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳ ವಿಕ್ಷಣೆ ಮಾಡಿ ಸಂಬಂದಿಸಿದವರಿಗೆ ಸೂಕ್ತ ನಿರ್ದೇಶನ ನೀಡಬೇಕು. 
ಜೈಸಿಂಗ್ ಮೂಲಿಮನಿ ಪುರಸಭಾ ಮಾಜಿ ಸದಸ್ಯರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಮದುರ್ಗ: ₹3.80 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಶೋಕ ಪಟ್ಟಣ ಭೂಮಿಪೂಜೆವಿವಿಧ ಸಂಸ್ಥೆಗಳಲ್ಲಿ ದೀಪಾವಳಿ ಲಕ್ಷ್ಮೀ ಪೂಜೆ: ಸಿಬ್ಬಂದಿಗೆ ಲಕ್ಷ್ಮೀ ಹೆಬ್ಬಾಳಕರ್ ಶುಭಾಶಯಜನನಿಬಿಡ ರಸ್ತೆಯಲ್ಲಿ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ : ಜಿ.ಪಿ. ಘೋರ್ಪಡೆಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಮತ್ತು ಕವಿಗೋಷ್ಠಿಗಳಿಗಾಗಿ ಲೇಖನಗಳ, ಕವಿತೆಗಳ ಆಹ್ವಾನ.      ರಾಯಬಾಗ: ಹೊನಲು ಬೆಳಕಿನ ರಾಷ್ಟ್ರಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ತೆರೆ – ದೇಶಿ ಕ್ರೀಡೆಗಳ ರಕ್ಷಣೆಗೆ ಪಿ. ರಾಜೀವ್ ಕರೆಹುನಗುಂದ: ದೀಪಾವಳಿ ಸಂಭ್ರಮದ ನಡುವೆ ಬೆಲೆ ಏರಿಕೆ ಬಿಸಿ - ತತ್ತರಿಸಿದ ಜನಸಾಮಾನ್ಯರುಹುನಗುಂದ ಎಟಿಎಂಗಳಲ್ಲಿ ಹಣದ ಕೊರತೆ; ದೀಪಾವಳಿ ಹಬ್ಬಕ್ಕೆ ಸಾರ್ವಜನಿಕರ ಪರದಾಟಕುಡುತಿನಿ ಕೈಗಾರಿಕಾ ಪ್ರದೇಶದ ಭೂಮಿಯನ್ನು ಅಕ್ರಮವಾಗಿ ಉತ್ತಮ ಗಾಲ್ವಾ ಕಂಪನಿಗೆ ಮಾಡಿರುವ ವರ್ಗಾವಣೆ ರದ್ದು ಪಡಿಸಲು ಭೂ ಸಂತ್ರಸ್ಥರ ಅಗ್ರಹಅಸುಂಡಿ ಹೊನ್ನೂರಪ್ಪ ಅವರಿಂದ  ನಾಮ ರತ್ನಯ್ಯ ಮತ್ತು ನಾಮ ಸಾವಿತ್ರಮ್ಮ  ಸ್ಮರಣಾರ್ಥ  ಆಸ್ಪತ್ರೆಗೆ  ಧನಸಹಾಯ ನವಂಬರ್ 14, 15 ರಂದು ಬಳ್ಳಾರಿ ಜಿಲ್ಲಾ 23 ನೇ ಕನ್ನಡ ಸಾಹಿತ್ಯ ಸಮ್ಮೇಳನ : ನಿಷ್ಠಿ ರುದ್ರಪ್ಪ