Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಹುನಗುಂದ ಎಟಿಎಂಗಳಲ್ಲಿ ಹಣದ ಕೊರತೆ; ದೀಪಾವಳಿ ಹಬ್ಬಕ್ಕೆ ಸಾರ್ವಜನಿಕರ ಪರದಾಟ

 

ಹುನಗುಂದ: ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಪಟ್ಟಣದ ವಿವಿಧ ಎಟಿಎಂಗಳಲ್ಲಿ ಹಣದ ಕೊರತೆ ಉಂಟಾಗಿದ್ದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.
ಸೋಮವಾರ ಪಟ್ಟಣದ ಜನತೆ ದೀಪಾವಳಿ ಹಬ್ಬದ ನಿಮಿತ್ಯ ಎಲ್ಲ ಬಗೆಯ ಖರೀದಿಗೆ ಬೆಳಿಗ್ಗೆಯಿಂದ ಗ್ರಾಹಕರು ಬ್ಯಾಂಕಗಳ ತೆರಳಿದಾಗ ಬಹುತೇಕ ಎಟಿಎಂ ಗಳಲ್ಲಿ ಹಣ ಇರದೆ ಸಾಯಂಕಾಲದವರೆಗೂ ಜನರು ಹಣಕ್ಕಾಗಿ ಪರದಾಡುವ ಸ್ಥಿತಿ ನಡೆಯಿತು. ಪಟ್ಟಣದ ಹಲವು ಎಟಿಎಂಗಳಲ್ಲಿ ಹಣ ಪಡೆಯಲು ಬಂದ ಗ್ರಾಹಕರಿಗೆ ನಿರಾಸೆ ಎದುರಿಸಿ ಹಬ್ಬದ ನಿಮಿತ್ತ ಹೊಸ ಬಟ್ಟೆ ಖರೀದಿ, ಸಿಹಿ ಪದಾರ್ಥಗಳ ಖರೀದಿ, ಮನೆಗೆ ಬೇಕಾದ ಸಾಮಗ್ರಿಗಳು ಹಾಗೂ ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ನಗದು ಹಣದ ಅವಶ್ಯಕತೆ ಹೆಚ್ಚಾಗಿತ್ತು. ಆದರೆ ಎಟಿಎಂಗಳಲ್ಲಿ ಹಣ ಲಭ್ಯವಾಗದ ಕಾರಣ ಸಾರ್ವಜನಿಕರು ಒಂದು ಎಟಿಎಂನಿಂದ ಮತ್ತೊಂದು ಎಟಿಎಂಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಹಬ್ಬದ ಸಿದ್ಧತೆಗಾಗಿ ಹಣ ಪಡೆಯಲು ಬಂದವರು ಎಟಿಎಂಗಳ ಮುಂದೆ ಕಾಯಬೇಕಾಯಿತು. ಕೆಲವೆಡೆ ಹಣ ಸಿಗದೆ ನಿರಾಸೆಯಿಂದ ಹಿಂದಿರುಗಿದರೆ, ಇನ್ನು ಕೆಲವರು ಬೇರೆ ಎಟಿಎಂಗಳಲ್ಲಿ ಹಣ ದೊರೆಯಬಹುದೆಂಬ ನಿರೀಕ್ಷೆ ಇಟ್ಟರು. ಡಿಜಿಟಲ್ ಪಾವತಿ ವ್ಯವಸ್ಥೆ ಬಳಸದ ಅಥವಾ ನಗದು ಹಣವನ್ನೇ ಅವಲಂಬಿಸಿರುವ ಸಾರ್ವಜನಿಕರಿಗೆ ಈ ಸಮಸ್ಯೆ ಹೆಚ್ಚಿನ ತೊಂದರೆ ಉಂಟುಮಾಡಿತು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನರಿಗೆ ನಗದು ಹಣದ ಅಗತ್ಯ ಹೆಚ್ಚಿರುವುದನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್ ಅಧಿಕಾರಿಗಳು ಎಟಿಎಂಗಳಿಗೆ ಸಮರ್ಪಕವಾಗಿ ಹಣ ತುಂಬಿಸುವ ವ್ಯವಸ್ಥೆ ಮಾಡಬೇಕಿತ್ತು. ಆದರೆ ಹಣದ ಕೊರತೆಯಿಂದ ಸಾರ್ವಜನಿಕರು ಅನಗತ್ಯವಾಗಿ ಅಲೆದಾಡುವಂತಾಗಿತ್ತು. ಸಂಬಂಧಪಟ್ಟ ಬ್ಯಾಂಕ್‌ಗಳ ನಿರ್ವಹಣೆ ಕುರಿತು ಅಸಮಾಧಾನ ವ್ಯಕ್ತವಾಯಿತು.
ಹಬ್ಬದ ದಿನಗಳಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಟಿಎಂಗಳಲ್ಲಿ ಅಗತ್ಯ ಪ್ರಮಾಣದ ಹಣ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಬ್ಯಾಂಕ್ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಮರುಕಳಿಸದಂತೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಭಾಕ್ಸ್; ಸೋಮವಾರ ಬೆಳಿಗ್ಗೆಯಿಂದ ನಮ್ಮ ಬ್ಯಾಂಕ್ ಎಟಿಎಂ ಮಷಿನ್‌ದಲ್ಲಿ ಬೆಲ್ಟ್‌ನ ತಾಂತ್ರಿಕ ತೊಂದರೆ ಉಂಟಾಗಿದೆ. ಎಟಿಎಂದಲ್ಲಿ ದುಡ್ಡಿನ ಸಮಸ್ಯೆ ಇಲ್ಲ ಸ್ಟಾಕ್ ಇದೆ. ಹಬ್ಬದ ನಿಮಿತ್ಯ ಸಂಬಂಧಿಸಿದ ಎಟಿಎಂ ಮಷಿನ್ ರಿಪೇರಿ ಇಂಜನೀಯರ ಬರಲು ತಡವಾಗಿದೆ. ಇಂದು ಸಂಜೆಯೊಳಗೆ ರಿಪೇರಿ ಮಾಡಬಹುದು. ಮೊಹನ್ ಮೂರ್ತಿ ಎಸ್‌ಬಿಐ ಶಾಖಾ ವ್ಯವಸ್ಥಾಪಕರು ಹುನಗುಂದ.  

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಮದುರ್ಗ: ₹3.80 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಶೋಕ ಪಟ್ಟಣ ಭೂಮಿಪೂಜೆವಿವಿಧ ಸಂಸ್ಥೆಗಳಲ್ಲಿ ದೀಪಾವಳಿ ಲಕ್ಷ್ಮೀ ಪೂಜೆ: ಸಿಬ್ಬಂದಿಗೆ ಲಕ್ಷ್ಮೀ ಹೆಬ್ಬಾಳಕರ್ ಶುಭಾಶಯಜನನಿಬಿಡ ರಸ್ತೆಯಲ್ಲಿ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ : ಜಿ.ಪಿ. ಘೋರ್ಪಡೆಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಮತ್ತು ಕವಿಗೋಷ್ಠಿಗಳಿಗಾಗಿ ಲೇಖನಗಳ, ಕವಿತೆಗಳ ಆಹ್ವಾನ.      ರಾಯಬಾಗ: ಹೊನಲು ಬೆಳಕಿನ ರಾಷ್ಟ್ರಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ತೆರೆ – ದೇಶಿ ಕ್ರೀಡೆಗಳ ರಕ್ಷಣೆಗೆ ಪಿ. ರಾಜೀವ್ ಕರೆಹುನಗುಂದ: ದೀಪಾವಳಿ ಸಂಭ್ರಮದ ನಡುವೆ ಬೆಲೆ ಏರಿಕೆ ಬಿಸಿ - ತತ್ತರಿಸಿದ ಜನಸಾಮಾನ್ಯರುಹುನಗುಂದ ಎಟಿಎಂಗಳಲ್ಲಿ ಹಣದ ಕೊರತೆ; ದೀಪಾವಳಿ ಹಬ್ಬಕ್ಕೆ ಸಾರ್ವಜನಿಕರ ಪರದಾಟಕುಡುತಿನಿ ಕೈಗಾರಿಕಾ ಪ್ರದೇಶದ ಭೂಮಿಯನ್ನು ಅಕ್ರಮವಾಗಿ ಉತ್ತಮ ಗಾಲ್ವಾ ಕಂಪನಿಗೆ ಮಾಡಿರುವ ವರ್ಗಾವಣೆ ರದ್ದು ಪಡಿಸಲು ಭೂ ಸಂತ್ರಸ್ಥರ ಅಗ್ರಹಅಸುಂಡಿ ಹೊನ್ನೂರಪ್ಪ ಅವರಿಂದ  ನಾಮ ರತ್ನಯ್ಯ ಮತ್ತು ನಾಮ ಸಾವಿತ್ರಮ್ಮ  ಸ್ಮರಣಾರ್ಥ  ಆಸ್ಪತ್ರೆಗೆ  ಧನಸಹಾಯ ನವಂಬರ್ 14, 15 ರಂದು ಬಳ್ಳಾರಿ ಜಿಲ್ಲಾ 23 ನೇ ಕನ್ನಡ ಸಾಹಿತ್ಯ ಸಮ್ಮೇಳನ : ನಿಷ್ಠಿ ರುದ್ರಪ್ಪ