ಬಳ್ಳಾರಿ. ನ. 00: ಕನ್ನಡ ಸಾಹಿತ್ಯ ಪರಿಷತ್ ಅಖಂಡ ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ಇದೆ ನವೆಂಬರ್ ತಿಂಗಳ 14 ಮತ್ತು 15 ಶನಿವಾರ ಮತ್ತು ಭಾನುವಾರದಂದು ಡಾ. ರಾಜಕುಮಾರ್ ರಸ್ತೆಯ ರಾಘವಾ ಕಲಾಮಂದಿರದಲ್ಲಿ ಅಖಂಡ ಬಳ್ಳಾರಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳ್ಳಾರಿ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಿಷ್ಠಿರುದ್ರಪ್ಪ ತಿಳಿಸಿದರು.
ಈ ವಿಷಯದ ಕುರಿತು ಅವರು ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ ಜಿಲ್ಲಾ ಸಮ್ಮೇಳನದಲ್ಲಿ ಸಿ.ಜಿ. ಹಂಪಣ್ಣ ಸರ್ವಾಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದು ಆ ದಿನ ಮುಂಜಾನೆ 7:30ಕ್ಕೆ ಮಹಾನಗರ ಪಾಲಿಕೆ ಮೇಯರ್ ಪಿ ಗಾದೆಪ್ಪ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸುವರು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಚಿದಾನಂದಪ್ಪ ನಾಡದೋಜಾರೋಹಣ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪನವರು ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು ಈ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರು ಉಪಮಹಾಪೌರರು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ನಂತರ ಕನ್ನಡ ತಾಯಿ ಭುವನೇಶ್ವರಿ ಮತ್ತು ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಿ ನಾಗರಾಜ್ ಚಾಲನೆ ನೀಡುವರು ಮುಖ್ಯ ಅತಿಥಿಗಳಾಗಿ ನಗರದ ಕನ್ನಡಪರ ಹೋರಾಟಗಾರರು ಮತ್ತು ಕನ್ನಡ ಪರ ಸಂಘಟನೆಗಳ ಮುಖಂಡರುಗಳು ಕಲಾವಿದರು ವಿವಿಧ ಸಂಘಟನೆಗಳ ಮುಖಂಡರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಈ ಮೆರವಣಿಗೆಯು ದುರ್ಗಮ್ಮ ದೇವಸ್ಥಾನದಿಂದ ಆರಂಭಗೊಂಡು ಗಡಗಿ ಚೆನ್ನಪ್ಪ ಸರ್ಕಲ್ ಮೂಲಕ ರಾಘವಾ ಕಲಾಮಂದಿರಕ್ಕೆ ತಲುಪುವುದು ಎಂದರು.
ಕಾರ್ಯಕ್ರಮದ ವೇದಿಕೆಯ ಉದ್ಘಾಟನಾ ಸಮಾರಂಭವನ್ನು ಕನ್ನಡ ವಿಶ್ವವಿದ್ಯಾಲಯ ಹಂಪಿ ಕುಲಪತಿಗಳಾದ ಡಿವಿ ಪರಮಶಿವಮೂರ್ತಿ ಉದ್ಘಾಟಿಸುವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಶಾಸಕ ನಾರಾ ಭರತ್ ರೆಡ್ಡಿ ವಹಿಸಿಕೊಳ್ಳುವರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಗದ್ಗುರು ಶ್ರೀ ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಕೊಟ್ಟೂರು ಸಂಸ್ಥಾನ ಮಠ ಬಳ್ಳಾರಿ ಹೊಸಪೇಟೆ ಇವರುಗಳು ಮತ್ತು ಕಮ್ಮರು ಚೇಡು ಮಠದ ಕಲ್ಯಾಣ ಸ್ವಾಮಿಗಳು ಹಾಗೂ ಆರ್ಚ್ ಬಿಷಪ್ ಡಿಸೋಜ ಇವರುಗಳು ವಹಿಸಿಕೊಳ್ಳುವರು ಈ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆಯನ್ನು ಬಳ್ಳಾರಿ ಜಿಲ್ಲಾ ಸಂಸದರಾದ ಈ ತುಕಾರಾಂ ಬಿಡುಗಡೆಗೊಳಿಸುವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಿಷ್ಠೆ ರುದ್ರಪ್ಪ ಪ್ರಸ್ತಾಪಿಕ ನುಡಿಗಳನ್ನು ಆಡುವರು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖಂಡ ಬಳ್ಳಾರಿ ಜಿಲ್ಲೆಯ ಎಲ್ಲಾ ಸಂಸದರು ಶಾಸಕರು ನಿಗಮ ಮಂಡಳಿ ಅಧ್ಯಕ್ಷರುಗಳು ವಿಧಾನ ಪರಿಷತ್ ಸದಸ್ಯರು ಪಾಲಿಕೆ ಮೇಯರ್ ಮತ್ತು ವಿವಿಧ ಸಮಿತಿಗಳ ಅಧ್ಯಕ್ಷರು ಅಧಿಕಾರದ ಅಧ್ಯಕ್ಷರು ಮಾಜಿ ಸಚಿವರು ಶಾಸಕರುಗಳು ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಕಳ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರುಗಳು ವಿವಿಧ ಸಂಘ ಸಂಸ್ಥೆಯ ಮುಖಂಡರುಗಳು ಹಾಜರಿರಲಿದ್ದಾರೆ ಈ ಕಾರ್ಯಕ್ರಮದ ನಿರೂಪಣೆಯನ್ನು ಡಾ. ತಿಪ್ಪೆ ರುದ್ರ ಸಂಡೂರ್ ಮತ್ತು ಡಾಕ್ಟರ್ ಕೆ ಶಿವಲಿಂಗಪ್ಪ ಹಂದ್ಯಾಳ್ ಇವರು ಸ್ವಾಗತವನ್ನು ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಎಂದಿನಂತೆ ಕವಿಗೋಷ್ಠಿ ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದ್ದು ಹೆಸರಾಂತ ಸಾಹಿತಿಗಳು ಮತ್ತು ಸಾಮಾಜಿಕ ಹೋರಾಟಗಾರರು ಸೇರಿದಂತೆ ಅನೇಕ ಮಹನೀಯರು ಭಾಗವಹಿಸಲಿದ್ದಾರೆ ಜೊತೆಗೆ ಪ್ರತಿದಿನ ಸಂಜೆ ಸಾಂಸ್ಕೃತಿ ಕಾರ್ಯಕ್ರಮಗಳನ್ನು ವಿವಿಧ ಸಾಂಸ್ಕೃತಿಕ ವೇದಿಕೆ ಮತ್ತು ಸಂಘಟನೆಗಳಿಂದ ಹಮ್ಮಿಕೊಳ್ಳಲಾಗಿದೆ ಜೊತೆಗೆ ಪ್ರತ್ಯಕ್ಷ ಸಾಲಿನ ಸಾಹಿತ್ಯ ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಗೌರವ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನವಂಬರ್ 14ರ ಸಂಜೆ ಭಾನುವಾರ ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪ್ರಭು ಸ್ವಾಮಿಗಳು ವಿರಕ್ತ ಮಠ ಸಂಡೂರು ಮತ್ತು ಕಾಜಿ ಮೆಹಮದ್ ಸಿದ್ದಿಕಿ ಖಾಜಿ ಸಾಹೇಬರು ಬಳ್ಳಾರಿ ಇವರುಗಳು ವಹಿಸಿಕೊಳ್ಳುವರು ವೆಂಕಟಗಿರಿ ದಳವಾಯಿ ತಿಗಳು ಹೊಸಪೇಟೆ ಇವರು ಸಮರೋಪ ಭಾಷಣ ಮಾಡುವವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಶ್ರೀರಾಮುಲು ಮಾಜಿನಗರ ಶಾಸಕ ಸೋಮಶೇಖರ್ ರೆಡ್ಡಿ ರಾಘವ ಮೆಮೋರಿಯಲ್ ಅಧ್ಯಕ್ಷ ಕೋಟೇಶ್ವರರಾವ್ ಸೇರಿದಂತೆ ಹಲವು ಹಿರಿಯ ರಾಜಕಾರಣಿಗಳು ಖಾಸಗಿ ಶಾಲೆಯ ಮುಖ್ಯಸ್ಥರುಗಳು ಯೋಗ ಶಿಕ್ಷಕರು ವಿವಿಧ ಸಂಘಟನೆಯ ಅಧ್ಯಕ್ಷರು ಮತ್ತು ಮುಖಂಡರುಗಳು ಭಾಗವಹಿಸಲಿದ್ದಾರೆ ಈ ಕಾರ್ಯಕ್ರಮದ ನಿರೂಪಣೆಯನ್ನು ಅಮಾತಿ ಬಸವರಾಜ್ ನೆನೆಸಿ ಕೊಡುವರು ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ದೊಡ್ಡಬಸಪ್ಪ ಕಾಶಿನಾಥ್ ಶಿವಲಿಂಗಪ್ಪ ಹಂದಿಹಾಳ್ ಎಲ್ಲನಗೌಡ ಚಂದ್ರಶೇಖರ್ ಆಚಾರಿ ಸೇರಿದಂತೆ ಇತರ ಇದ್ದರು.