Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bellary

ಅಸುಂಡಿ ಹೊನ್ನೂರಪ್ಪ ಅವರಿಂದ  ನಾಮ ರತ್ನಯ್ಯ ಮತ್ತು ನಾಮ ಸಾವಿತ್ರಮ್ಮ  ಸ್ಮರಣಾರ್ಥ  ಆಸ್ಪತ್ರೆಗೆ  ಧನಸಹಾಯ 

 ಬಳ್ಳಾರಿ. ನ. 08:: ಆರ್ಯವೈಶ್ಯ ಸಂಘದ ವತಿಯಿಂದ ನಾಮ  ರತ್ನಯ್ಯ ಮತ್ತು ನಾಮ-ಸಾವಿತ್ರಮ್ಮ ಸ್ಮಾರಣಾರ್ಥ  ನಿರ್ಮಿಸಲಾಗುತ್ತಿರುವ ಡಯಲಿಸಸ್  ಮತ್ತು  ಫಿಸಿಯೋ ತೆರಫಿ  ಸೆಂಟರ್  ಆಸ್ಪತ್ರೆಗೆ ಕಾಂಗ್ರೆಸ್ ಮುಖಂಡರಾದ ಅಸುಂಡಿ ಹೊನ್ನೂರಪ್ಪ ಅವರು ಧನ ಸಹಾಯವನ್ನು ನೀಡಿದರು.
 ಅವರು ನಗರದ ದತ್ತ ಸಾಯಿ ನಗರದ ಗೃಹದಲ್ಲಿ ಆರ್ಯವೈಶ್ಯ ಅಸೋಸಿಯೇಷನ್ ಬಳ್ಳಾರಿ ಸಂಘದ ಅಧ್ಯಕ್ಷರಾದ ನಾಮ ನಾಗರಾಜ ಮತ್ತು ಗೌರವ ಅಧ್ಯಕ್ಷರಾದ  ಡಾ ಡಿ ಎಲ್ ರಮೇಶ್ ಗೋಪಾಲ್  ಇವರಿಗೆ  ಆಸ್ಪತ್ರೆ ನಿರ್ಮಾಣಕ್ಕೆ ಧನಸಹಾಯದ ಕೊಡುಗೆ ನೀಡಿದರು. ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದ ರಮೇಶ್ ಗೋಪಾಲ್, ಅಸುಂಡಿ ಹೊನ್ನೂರಪ್ಪ ಅವರು ಆರ್ಯವೈಶ್ಯ ಅಸೋಸಿಯೇಷನ್ ವತಿಯಿಂದ ನಿರ್ಮಿಸಲಾಗುತ್ತಿರುವ  ಆಸ್ಪತ್ರೆ ನಿರ್ಮಾಣಕ್ಕೆ  ಧನಸಹಾಯ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ದೇವರು ಅವರಿಗೆ ಇದೇ ರೀತಿಯ ಸಮಾಜ ಸೇವೆಯನ್ನು ಮಾಡಲು ಸಕಲ ಐಶ್ವರ್ಯ ಅಧಿಕಾರ ಮತ್ತು ಆಯುಷ್ಯವನ್ನು ನೀಡಲಿ ಎಂದರು.
 ಈ ಸಂದರ್ಭದಲ್ಲಿ ಮಾತನಾಡಿದ ಅಸುಂಡಿ ಹೊನ್ನೂರಪ್ಪ   (ವಂಡ್ರಿ )  ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್ಯವೈಶ್ಯ ಸಂಸ್ಥೆಯವರು ಆಸ್ಪತ್ರೆಯನ್ನು ನಿರ್ಮಿಸುತ್ತಿದ್ದು ಇದನ್ನು ಮನಗಂಡ ನಾನು ಆಸ್ಪತ್ರೆ ನಿರ್ಮಾಣಕ್ಕಾಗಿ ನನ್ನ ಕೈಲಾದ ಧನಾಸಾಯವನ್ನು ನೀಡುತ್ತಿದ್ದೇನೆ ಮುಂದಿನ ದಿನಗಳಲ್ಲಿ ಈ ಸಂಘಟನೆ ಯಾವುದೇ ಸಮಾಜ ಸೇವೆ ಅಂತ ಕಾರ್ಯಕ್ರಮ ಹಮ್ಮಿಕೊಂಡಲ್ಲಿ ನಾನು ತನುಮಾನ ಧನದೊಂದಿಗೆ ಸಹಕಾರ ನೀಡುವುದಾಗಿ ತಿಳಿಸಿದರು.  
 ಈ ಸಂದರ್ಭದಲ್ಲಿ ಆರ್ಯ ವೈಶ್ಯ ಅಸೋಸಿಯೇಷನ್   ಉಪಾಧ್ಯಕ್ಷರಾದ  ಎಸ್ ಮಾರುತಿ ಪ್ರಸಾದ್, ಕಾರ್ಯದರ್ಶಿ ವಿಟ್ಟ ವೆಂಕಟೇಶ್ ಖಜಾಂಚಿ ರಾಮಕೃಷ್ಣ ರೇಣುಕುಂಡ್ಲಾ ಜಂಟಿ ಕಾರ್ಯದರ್ಶಿ ಎಚ್ ರಾಜೇಶ್ ಬಿಲ್ವ ಜಿಕೆ ಶಿವಪ್ರಸಾದ್ ಸೇರಿದಂತೆ ಇತರರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಮದುರ್ಗ: ₹3.80 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಶೋಕ ಪಟ್ಟಣ ಭೂಮಿಪೂಜೆವಿವಿಧ ಸಂಸ್ಥೆಗಳಲ್ಲಿ ದೀಪಾವಳಿ ಲಕ್ಷ್ಮೀ ಪೂಜೆ: ಸಿಬ್ಬಂದಿಗೆ ಲಕ್ಷ್ಮೀ ಹೆಬ್ಬಾಳಕರ್ ಶುಭಾಶಯಜನನಿಬಿಡ ರಸ್ತೆಯಲ್ಲಿ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ : ಜಿ.ಪಿ. ಘೋರ್ಪಡೆಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಮತ್ತು ಕವಿಗೋಷ್ಠಿಗಳಿಗಾಗಿ ಲೇಖನಗಳ, ಕವಿತೆಗಳ ಆಹ್ವಾನ.      ರಾಯಬಾಗ: ಹೊನಲು ಬೆಳಕಿನ ರಾಷ್ಟ್ರಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ತೆರೆ – ದೇಶಿ ಕ್ರೀಡೆಗಳ ರಕ್ಷಣೆಗೆ ಪಿ. ರಾಜೀವ್ ಕರೆಹುನಗುಂದ: ದೀಪಾವಳಿ ಸಂಭ್ರಮದ ನಡುವೆ ಬೆಲೆ ಏರಿಕೆ ಬಿಸಿ - ತತ್ತರಿಸಿದ ಜನಸಾಮಾನ್ಯರುಹುನಗುಂದ ಎಟಿಎಂಗಳಲ್ಲಿ ಹಣದ ಕೊರತೆ; ದೀಪಾವಳಿ ಹಬ್ಬಕ್ಕೆ ಸಾರ್ವಜನಿಕರ ಪರದಾಟಕುಡುತಿನಿ ಕೈಗಾರಿಕಾ ಪ್ರದೇಶದ ಭೂಮಿಯನ್ನು ಅಕ್ರಮವಾಗಿ ಉತ್ತಮ ಗಾಲ್ವಾ ಕಂಪನಿಗೆ ಮಾಡಿರುವ ವರ್ಗಾವಣೆ ರದ್ದು ಪಡಿಸಲು ಭೂ ಸಂತ್ರಸ್ಥರ ಅಗ್ರಹಅಸುಂಡಿ ಹೊನ್ನೂರಪ್ಪ ಅವರಿಂದ  ನಾಮ ರತ್ನಯ್ಯ ಮತ್ತು ನಾಮ ಸಾವಿತ್ರಮ್ಮ  ಸ್ಮರಣಾರ್ಥ  ಆಸ್ಪತ್ರೆಗೆ  ಧನಸಹಾಯ ನವಂಬರ್ 14, 15 ರಂದು ಬಳ್ಳಾರಿ ಜಿಲ್ಲಾ 23 ನೇ ಕನ್ನಡ ಸಾಹಿತ್ಯ ಸಮ್ಮೇಳನ : ನಿಷ್ಠಿ ರುದ್ರಪ್ಪ