ಹಸಿರು ಕ್ರಾಂತಿ ವರದಿ ಬೆಳಗಾವಿ
ಜ್ಯಾತತೀತ ಜನತಾದಳ ಪಕ್ಷದ ಬೆಳಗಾವಿ ಮಹಾನಗರ ಜಿಲ್ಲಾ ಅಧ್ಯಕ್ಷರನ್ನಾಗಿ ನಗರದ ಬ್ರಹ್ಮನಗರ ನಿವಾಸಿ, ಸಾಮಾಜಿಕ ಕಾರ್ಯಕರ್ತ ವಿಠ್ಠಲ ಮಾರುತಿ ಗಡ್ಡಿ ಅವರನ್ನು ಆಯ್ಕೆ ಮಾಡಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆದೇಶ ಪತ್ರ ನೀಡಿದ್ದಾರೆ.
ಪಕ್ಷದ ಸಂಘಟನೆಯ, ಬಲವಧನೆಗೆ ಆಶೀರ್ವದಿಸಿದ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು, ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ, ಯುವಜನತಾ ದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ವೀರಭದ್ರಪ್ಪ ಹಳಹರವಿ, ಹಿರಿಯ ಉಪಾಧ್ಯಕ್ಷ ಪ್ರಕಾಶ ಸೊನ್ವಾಲ್ಕರ, ಜಿಲ್ಲಾಧ್ಯಕ್ಷ ಶಂಕರ್ ಮಾಡಲಗಿ, ಪ್ರತಾಪಣ್ಣ ಪಾಟೀಲ್ ಹಾಗೂ ಪಕ್ಷ್ಯದ ಎಲ್ಲ ಹಿರಿಯ, ನಾಯಕರಿಗೆ ವಿಠ್ಠಲ ಮಾರುತಿ ಗಡ್ಡಿ ಕೃತಜ್ಞತೆ ಸಲ್ಲಿಸಿದ್ದಾರೆ.