Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಇಂದು ವಿದ್ಯುತ್‌ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಮುಂದುವರೆದ ರೈತ ಭಾರತ ಪಕ್ಷದ ಹೋರಾಟದಲ್ಲಿ ರಾಜ್ಯಾಧ್ಯಕ್ಷ ಕೆಂಗನಾಳ ಖಡಕ್‌ ಎಚ್ಚರಿಕೆ

ಹಸಿರು ಕ್ರಾಂತಿ ವರದಿ ವಿಜಯಪುರ
ವಿದ್ಯುತ್‌ ಇಲಾಖೆಯಿಂದ ಜನರಿಗೆ ಆಗುವ ತೊಂದರೆಗಳನ್ನು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಹೆಸ್ಕಾಂ ವಿಭಾಗೀಯ ಕಚೇರಿಯ ಆವರಣದಲ್ಲಿ ರೈತ ಭಾರತ ಪಕ್ಷ ನಡೆಸುತ್ತಿರುವ ಅನಿರ್ದಿಷ್ಟ ಹೋರಾಟ ಬುಧವಾರ ಮುಂದುವರೆದಿದೆ. ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ವಿನೋದ್ ಖೇಡ್ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಹೋರಾಟದ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸದಿದ್ದರೇ ನ.5 ರಂದು 1 ಗಂಟೆಗೆ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವ ಎಚ್ಚರಿಕೆಯನ್ನು ರೈತ ಭಾರತ ಪಕ್ಷ ನೀಡಿದೆ.

ಹೆಸ್ಕಾಂ ಅಧೀಕ್ಷಕ ಅಭಿಯಂತರ ಮೂಲಕ ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಿಗೆ ಮಂಗಳವಾರ ಮನವಿ ಸಲ್ಲಿಸಿ ಕಚೇರಿಗೆ ಬೀಗ ಜಡಿಯುವ ಎಚ್ಚರಿಕೆ ನೀಡಿದ ರೈತ ಭಾರತ ಪಕ್ಷವು ಈಗಾಗಲೇ ಹಲವಾರು ಬಾರಿ ವಿದ್ಯುತ್‌ ಇಲಾಖೆಗೆ ಮನವಿ ಮಾಡಿ ಹೋರಾಟಗಳನ್ನು ಮಾಡಿದ್ದರೂ ಇಲಾಖೆಯಿಂದ ಯಾವುದೇ ಸ್ಪಂದನೆ ದೊರೆಯದ ಕಾರಣ ಇಲಾಖೆಯ ವಿರುದ್ಧ ಉಗ್ರ ಹೋರಾಟಕ್ಕೆ ರೈತ ಭಾರತ ಪಕ್ಷ ಮುಂದಾಗಿದೆ.

ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ, ಸೈಯದ್ ಯಾಸಿನ್ ಗುಲ್ಬರ್ಗ, ಹರೀಶ್ ಕುಲಕರ್ಣಿ, ರಾಜು ಅಳ್ಳಗಿ, ಹಾರುಣ್ ಶೇಕ್, ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ವಿನೋದ್ ಖೇಡ್ ಹಾಗೂ ಜಿಲ್ಲಾ ಸಮಿತಿಯ ಅಶೋಕ್ ವಾಲಿಕರ್, ಪರಶುರಾಮ್ ಗಾಯಕ್ವಾಡ್, ಅಂಬಣ್ಣ ಗುನ್ನಾಪುರ್, ಸಂತೋಷ್ ಕಲಗುಡಿ, ಸಂಜು ಬೆಳ್ಳನ್ನವರ್, ಸೌಮ್ಯ ನಾರಾಯಣಕರ್, ವಿಟ್ಟಲ್ ಕರಿಗಾರ್, ಶ್ರೀಶೈಲ್ ಜೋಗುರ್, ಲಘುಮಣ್ಣ ಹಿಪ್ಪರಗಿ ಸೇರಿದಂತೆ ಹಾಗೂ ಇತರರು ಉಪಸ್ಥಿತರಿದ್ದರು.


ಸ್ಥಳಕ್ಕೆ ಹೆಸ್ಕಾಂ ಎಂಡಿ, ಜಿಎಂ ತಾಂತ್ರಿಕ, ಜಿಎಂ ಅಡ್ಮಿನ್, ಆರ್ಥಿಕ ಸಲಹೆಗಾರರು, ಅಧೀಕ್ಷಕ ಅಭಿಯಂತರರು ಹೆಸ್ಕಾಂ ಆರ್‌ಎಪಿಡಿಆರ್‌ಪಿ ಮತ್ತು ಮುಖ್ಯ ವಿದ್ಯುತ್‌ ಪರ್ವೀಕ್ಷಕರು ಬರುವವರೆಗೆ ಹೋರಾಟ ನಿಲ್ಲಿಸುವುದಿಲ್ಲ.
-ಮಲ್ಲಿಕಾರ್ಜುನ ಕೆಂಗನಾಳ, ರಾಜ್ಯಾಧ್ಯಕ್ಷರು, ರೈತ ಭಾರತ ಪಕ್ಷ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೫೦ ಸಾವಿರ ನಗದು ಬಹುಮಾನದೊಂದಿಗೆ ಗೌರವ *ಇಲಾಖೆಯ ಹಿರಿಯ ಅಧಿಕಾರಿಗಳಿಂದ ಸನ್ಮಾನಹುರಕಡ್ಲಿ ಫೌಂಡೇಶನ್‌ನಿಂದ ಉಚಿತ ಕೃತಕ ಕೈ-ಕಾಲು ಅಳತೆ ಶಿಬಿರ; ೫೦ಕ್ಕೂ ಹೆಚ್ಚು ಫಲಾನುಭವಿಗಳಿಗೆ ನೆರವುಇಂದು ಬಳ್ಳಾರಿಗೆ ಲೋಕಾಯುಕ್ತರ ಭೇಟಿ ವಿವಿಧ ಇಲಾಖೆಗಳ ಮೇಲೆ ದಾಳಿ ಮಂತ್ರಾಲಯದಲ್ಲಿ ಗೋವು-ಮೇವು ದಾನ; ಅನಾಥ ಮಕ್ಕಳಿಗೆ ದಾಸೋಹ ಸೇವೆಪ್ರಮುಖರೊಂದಿಗೆ ಹೋಗಿ ಜಿ.ಸಿ.ಕೋಟಗಿಯವರಿಗೆ ಅಧಿಕೃತ ಆಹ್ವಾನ: ಡಾ.ಎಸ್.ಬಿ.ದಳವಾಯಿದೇಶದ ಅಭಿವೃದ್ಧಿಯಲ್ಲಿ ಯುವಕರ ಸಹಭಾಗಿತ್ವ ಅತ್ಯಂತ ಮುಖ್ಯ: ಡಾ. ಸುನಿಲ್ ಎಸ್. ಜಾಲಾಪುರೆಅಂಚೆಗೆ ಹೋಗದ ಪತ್ರ ಚಲನಚಿತ್ರ ಶೀಘ್ರದಲ್ಲಿ ತೆರೆಗೆ.ಚುನ್ನಪ್ಪ ಪೂಜಾರಿ, ಶಶಿಕಾಂತ ಗುರೂಜಿ ಬಂಧನ ಖಂಡಿಸಿ ನಾಲ್ಕು ಗಂಟೆಗೂ ಅಧಿಕ ಪ್ರತಿಭಟನೆ; ವಾಹನ ಸಂಚಾರ ಅಸ್ತವ್ಯಸ್ತರಾಮದುರ್ಗದಲ್ಲಿ ಉದ್ವಿಗ್ನತೆ: ರೈತ ಮುಖಂಡರ ಬಂಧನ ಖಂಡಿಸಿ ರಸ್ತೆ ತಡೆ, ಪೊಲೀಸರಿಂದ ಪ್ರತಿಭಟನಾಕಾರರ ವಶಡಾ.ಸ್ಮಿತಾ ಸುರೇಬಾನಕರ್‌ಗೆ ಇತಿಹಾಸ ಸಾಂಸ್ಕೃತಿಕ ಶ್ರೀ ಪ್ರಶಸ್ತಿ