Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಚುನ್ನಪ್ಪ ಪೂಜಾರಿ, ಶಶಿಕಾಂತ ಗುರೂಜಿ ಬಂಧನ ಖಂಡಿಸಿ ನಾಲ್ಕು ಗಂಟೆಗೂ ಅಧಿಕ ಪ್ರತಿಭಟನೆ; ವಾಹನ ಸಂಚಾರ ಅಸ್ತವ್ಯಸ್ತ

ನಾಲತವಾಡ: ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಗುರ್ಲಾಪುರದಿಂದ ಬೆಳಗಾವಿಯ ಹಿಂಡಲಗಾ ಜೈಲಿನವರೆಗೆ ಜೈಲ್ ಚಲೋ ಪಾದಯಾತ್ರೆ ನಡೆಸುತ್ತಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಮತ್ತು ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರನ್ನು ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ನಾಲತವಾಡದಲ್ಲಿ ರೈತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಅವರ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ನಾಲತವಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಮಧ್ಯಾಹ್ನದ ವೇಳೆಗೆ ಒಂದಾಗಿ ಮುದ್ದೇಬಿಹಾಳ ಮತ್ತು ನಾರಾಯಣಪುರ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಆರಂಭಿಸಿದರು. ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ನಡೆದ ರಸ್ತೆ ತಡೆಯಿಂದಾಗಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮುದ್ದೇಬಿಹಾಳ ಸಿಪಿಐ ಮೊಹಮ್ಮದ್ ಫಸಿಯುದ್ದೀನ್, ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ಪ್ರತಿಭಟನೆ ಹಿಂಪಡೆಯುವಂತೆ ರೈತರ ಮನವೊಲಿಸಲು ಹರಸಾಹಸಪಟ್ಟರು.
ಈ ವೇಳೆ ರೈತ ಮುಖಂಡ ಶಶಿಧರಗೌಡ ಬಂಗಾರಿ ಮಾತನಾಡಿ, ಕಬ್ಬು ಬೆಳೆಗಾರರ ಹೋರಾಟದ ನೇತೃತ್ವ ವಹಿಸಿರುವ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಹಾಗೂ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರನ್ನು ಸರ್ಕಾರ ಬಂಧಿಸಿರುವುದು ಖಂಡನೀಯ. ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಬದಲು ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರೆ ರಾಜ್ಯಾದ್ಯಂತ ಇನ್ನಷ್ಟು ತೀವ್ರ ಹೋರಾಟ ನಡೆಸಲಾಗುವುದು. ಚುನ್ನಪ್ಪ ಪೂಜಾರಿ ಅವರನ್ನು ಬಿಡುಗಡೆ ಮಾಡುವವರೆಗೂ ಹೋರಾಟ ಹಿಂಪಡೆಯುವುದಿಲ್ಲ. ನಮ್ಮನ್ನೂ ಜೈಲಿಗೆ ಕಳುಹಿಸಿದರೂ ಹೆದರುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಯುವ ರೈತ ಸಂಗಮೇಶ ಜವಳಗೇರಿ ಮಾತನಾಡಿ, ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಬರಗಾಲದ ಸಂಕಷ್ಟದ ನಡುವೆಯೂ ರೈತರು ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ ಎರಡು ತಿಂಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಬೇಡಿಕೆ ಈಡೇರಿಸದೆ ಕಾಲಹರಣ ಮಾಡುತ್ತಿದೆ. ಇದೇ ಧೋರಣೆ ಮುಂದುವರಿದರೆ ರಾಜ್ಯದಲ್ಲಿ ರೈತರ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದರು.
ಪೊಲೀಸರ ಹರಸಾಹಸ: ಪ್ರತಿಭಟನೆ ಹಿಂಪಡೆಯುವಂತೆ ಪೊಲೀಸ್ ಅಧಿಕಾರಿಗಳು ಎರಡು ಗಂಟೆಗೂ ಅಧಿಕ ಕಾಲ ರೈತರ ಮನವೊಲಿಸಲು ಪ್ರಯತ್ನಿಸಿದರೂ ರೈತರು ಪಟ್ಟು ಸಡಿಲಿಸಲಿಲ್ಲ. ಬಳಿಕ ಸಿಪಿಐ ಹಾಗೂ ಪಿಎಸ್ಐ ಅವರು ಜಿಲ್ಲಾಧ್ಯಕ್ಷ ಸಂಗಮೇಶ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಜಿಲ್ಲಾಧ್ಯಕ್ಷರ ಮನವಿಗೆ ಸ್ಪಂದಿಸಿದ ರೈತರು ಕೊನೆಗೆ ರಸ್ತೆ ತಡೆ ಹೋರಾಟವನ್ನು ಹಿಂಪಡೆದರು.
ರಸ್ತೆ ತೆರೆಯುವಂತೆ ವಾಗ್ವಾದ: ಒಂದೇಡೆ ರೈತರು ರಸ್ತೆ ಬಂದು ಮಾಡಿ ಹೋರಾಟ ನಡೆಸಿದರೆ. ರಸ್ತೆಯಲ್ಲಿ ವಾಹನ ಹಚ್ಚಿ ರಸ್ತೆ ಬಂದ ಮಾಡಿರುವದನ್ನು ಖಂಡಿಸಿ ಕೆಲವರು ಪೋಲೀಸರೊಂದಿಗೆ ವಾಗ್ವಾದ ಇಳಿದರು, ರಸ್ತೆ ಬಂದ ಮಾಡಿರುವದರಿಂದ ಸಾಕಷ್ಟು ನಮಗೆ ತೊಂದರೆಯಾಗಿದೆ ಕೂಡಲೆ ತರವು ಮಾಡಬೇಕು ಎಂದು ಪಟ್ಟ ಹಿಡಿದರು. ಈ ವೇಳೆ ರೈತರು ಹಾಗೂ ಸ್ಥಳಿಯರ ಮಧ್ಯ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು. ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಪೋಲೀಸ್ ಅಧಿಕಾರಿಗಳು ಇಬ್ಬರಿಗೆ ಸಮಾಧಾನ ಪಡಿಸಿದರು.
ಈ ಪ್ರತಿಭಟನೆಯಲ್ಲಿ ನಾಲತವಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆರ್‌ಎಸ್‌ಎಸ್ 101ನೇ ವರ್ಷ ಹಾಗೂ ವಿಜಯದಶಮಿ: ಇಂಡಿಯಲ್ಲಿ ಭವ್ಯ ಪಥ ಸಂಚಲನ, ಪುಷ್ಪವೃಷ್ಟಿ ಸ್ವಾಗತಇಂಡಿ: 40 ಲಕ್ಷ ವೆಚ್ಚದ ನೂತನ ಒಳಚರಂಡಿ ತ್ಯಾಜ್ಯ ಸ್ವಚ್ಛತಾ ಯಂತ್ರಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಚಾಲನೆಮಕ್ಕಳ ಸುಪ್ತ ಪ್ರತಿಭೆ ಗುರುತಿಸಿ ಬೆಳೆಸಲು ಪ್ರತಿಭಾ ಕಾರಂಜಿ ಸಹಕಾರಿ: ಎಸ್.ಎಂ. ಮುಗೆನ್ನವರ೫೦ ಸಾವಿರ ನಗದು ಬಹುಮಾನದೊಂದಿಗೆ ಗೌರವ *ಇಲಾಖೆಯ ಹಿರಿಯ ಅಧಿಕಾರಿಗಳಿಂದ ಸನ್ಮಾನಹುರಕಡ್ಲಿ ಫೌಂಡೇಶನ್‌ನಿಂದ ಉಚಿತ ಕೃತಕ ಕೈ-ಕಾಲು ಅಳತೆ ಶಿಬಿರ; ೫೦ಕ್ಕೂ ಹೆಚ್ಚು ಫಲಾನುಭವಿಗಳಿಗೆ ನೆರವುಇಂದು ಬಳ್ಳಾರಿಗೆ ಲೋಕಾಯುಕ್ತರ ಭೇಟಿ ವಿವಿಧ ಇಲಾಖೆಗಳ ಮೇಲೆ ದಾಳಿ ಮಂತ್ರಾಲಯದಲ್ಲಿ ಗೋವು-ಮೇವು ದಾನ; ಅನಾಥ ಮಕ್ಕಳಿಗೆ ದಾಸೋಹ ಸೇವೆಪ್ರಮುಖರೊಂದಿಗೆ ಹೋಗಿ ಜಿ.ಸಿ.ಕೋಟಗಿಯವರಿಗೆ ಅಧಿಕೃತ ಆಹ್ವಾನ: ಡಾ.ಎಸ್.ಬಿ.ದಳವಾಯಿದೇಶದ ಅಭಿವೃದ್ಧಿಯಲ್ಲಿ ಯುವಕರ ಸಹಭಾಗಿತ್ವ ಅತ್ಯಂತ ಮುಖ್ಯ: ಡಾ. ಸುನಿಲ್ ಎಸ್. ಜಾಲಾಪುರೆಅಂಚೆಗೆ ಹೋಗದ ಪತ್ರ ಚಲನಚಿತ್ರ ಶೀಘ್ರದಲ್ಲಿ ತೆರೆಗೆ.