ಬೆಳಗಾವಿ ಜಿಲ್ಲೆಯ ಕಲಾವಿದರು, ನಟ, ನಿರ್ದೇಶಕರು, ಸಂಗೀತ, ಜಿಲ್ಲೆಯಲ್ಲಿಯೇ ಸಂಪೂರ್ಣ ಚಿತ್ರೀಕರಣ ಮಾಡಲಾದ,ಗ್ರಾಮೀಣ ಸೊಗಡಿನ ಅನಾವರಣ ಹೊಂದಿರುವ, ಗ್ರಾಮೀಣ ಕಥಾ ಹಂದರ ಹೊಂದಿರುವ, ಉತ್ತಮ ಡೈಲಾಗ, ಸಂಭಾಷಣೆ ಹೊಂದಿರುವ ಅಂಚೆಗೆ ಹೋಗದ ಪತ್ರ ಚಲನಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿ, ರಿಮಿಕ್ಸ್, ಧ್ವನಿ ಮುದ್ರಣ ಕಾರ್ಯ ಮುಗಿದು ಇನ್ನೇನು ರಾಜ್ಯಾಧ್ಯಂತ ಬಿಡುಗಡೆಗೆ ಸಿದ್ದವಾಗಿದೆ. ಕಳೆದ ತಿಂಗಳು 27-10-2026 ರಂದು ಚಿತ್ರದ ಟ್ರೇಲರ್ ಬೆಳಗಾವಿಯ ಕನ್ನಡ ಭವನದಲ್ಲಿ ರಾಜಕೀಯ ಮುಖಂಡರ, ಸಾಹಿತಿಗಳ, ಕಲಾವಿದರ ಸಮ್ಮುಖದಲ್ಲಿ ಬಿಡುಗಡೆ ಆಗಿದ್ದು, ಅದು ಎಲ್ಲರ ಜನ
ಮನ ಗೆದಿದ್ದು, ಶೀಘ್ರದಲ್ಲಿ ಪ್ರಿಮೀಯರ ಶೋ ಮಾಡಿ ಬಿಡುಗಡೆಗೆ ಸಿದ್ದವಾಗಿದೆ ಚಿತ್ರತಂದ. ಈ ಚಲನಚಿತ್ರದ ನಿರ್ದೇಶಕ- ನಟ - ಸಂಗೀತ - ಚಿತ್ರಕತೆಯನ್ನು ಪ್ರವೀಣ ಸುತಾರ ಮಾಡಿದ್ದು, ನವಗೃಹ ಫಿಕ್ಟರ ನಿರ್ಮಾಣ ಸಂಸ್ಥೆಯಲ್ಲಿ ಶ್ರೀಮತಿ ಶಕುಂತಲಾ ಮಂಜುನಾಥ ಹುಲಮನಿ ನಿರ್ಮಾಣ ಮಾಡಿದ್ದು, ನಾಯಕಿಯರಾಗಿ ಸಹನಾ ಪ್ರಕಾಶ, ಸೌಮ್ಯ ನಟನೆ ಮಾಡಿದ್ದಾರೆ. ಪ್ರೊಡಕ್ಷನ್ ಟೀಮನಲ್ಲಿ ಮಂಜುನಾಥ ಹುಲಮನಿ, ಪ್ರಕಾಶ ಮುಂಗರವಾಡಿ, ಮಹಾಂತೇಶ ಹಲಗಿಮರಡಿ, ಬಸವರಾಜ ಹಿರೇಮಠ, ಬರಮಾ ಮೋಟರೆ ಕಾರ್ಯನಿರ್ವಾಹಿಸಿದ್ದಾರೆ.