ತಾಳಿಕೋಟೆ: ಜನ್ಮದಿನವೆಂದರೆ ಕೇವಲ ಕೇಕ್ ಕತ್ತರಿಸಿ, ಹಾರ-ತುರಾಯಿಗಳೊಂದಿಗೆ ಸಂಭ್ರಮಿಸುವುದಕ್ಕೆ ಸೀಮಿತವಾಗದೆ, ಸಮಾಜದ ಅಸಹಾಯಕರಿಗೆ ನೆರವಾಗುವ ಮೂಲಕ ಅದನ್ನು ಅರ್ಥಪೂರ್ಣವಾಗಿ ಆಚರಿಸಬಹುದು ಎಂಬ ಸಂದೇಶವನ್ನು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಅವರ ಅಭಿಮಾನಿಗಳು ಸಾರಿದ್ದಾರೆ.
ಆರ್.ಎಸ್. ಪಾಟೀಲ ಕೂಚಬಾಳ ಅವರ ೫೪ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳ ಬಳಗದ ವತಿಯಿಂದ ವಿವಿಧ ಧಾರ್ಮಿಕ ಹಾಗೂ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಮನುಷ್ಯನ ಬದುಕಿನಲ್ಲಿ ಸೇವೆ, ಸಹಕಾರ ಮತ್ತು ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಮಹತ್ವವಿದೆ ಎಂಬ ಆಶಯದೊಂದಿಗೆ ರಾಜ್ಯದ ವಿವಿಧೆಡೆ ಗೋವುಗಳಿಗೆ ಮೇವು, ಅನಾಥ ಮಕ್ಕಳಿಗೆ ಉಪಾಹಾರ, ನಿರಾಶ್ರಿತರಿಗೆ ಪ್ರಸಾದ ಹಾಗೂ ದಾಸೋಹ ಸೇವೆಗಳನ್ನು ಸಲ್ಲಿಸಲಾಯಿತು.
ಮಂತ್ರಾಲಯದಲ್ಲಿ ಗೋದಾನ, ಮೇವು ದಾನ:
ಜನ್ಮದಿನದ ಅಂಗವಾಗಿ ಬೆಳಿಗ್ಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಅಭಿಮಾನಿಗಳಿಂದ ಗೋದಾನ, ಮೇವು ದಾನ ಹಾಗೂ ಸಂಕಲ್ಪ ಸೇವೆ ಸಲ್ಲಿಸಲಾಯಿತು. ಧಾರ್ಮಿಕ ಶ್ರದ್ಧೆಯೊಂದಿಗೆ ಕೈಗೊಂಡ ಈ ಸೇವಾ ಕಾರ್ಯದ ಮೂಲಕ ಗೋಸಂರಕ್ಷಣೆಯ ಮಹತ್ವವನ್ನು ಸಾರಲಾಯಿತು. ಈ ಸಂದರ್ಭದಲ್ಲಿ ಬಸನಗೌಡ ಮಾಲಿಪಾಟೀಲ, ನಾಗರಾಜ ಬಳಗರ, ಕಿಶೋರ್ ಬಡಿಗೇರ, ಕಾಶಿನಾಥ ಗಾಯಕವಾಡ ಸೇರಿದಂತೆ ಅಭಿಮಾನಿಗಳು ಉಪಸ್ಥಿತರಿದ್ದರು.
ಅನಾಥ ಮಕ್ಕಳಿಗೆ ಉಪಹಾರ ಸೇವೆ ಬೆಂಗಳೂರಿನ ನಾಗರಬಾವಿಯ ಶ್ರೀ ಸರಸ್ವತಿ ಅನಾಥ ಬಾಲ ಆಶ್ರಮದಲ್ಲಿ ಮಕ್ಕಳಿಗೆ ಉಪಾಹಾರ ಸೇವೆ ಸಲ್ಲಿಸುವ ಮೂಲಕ ಜನ್ಮದಿನದ ಸಂತಸವನ್ನು ಮಕ್ಕಳೊಂದಿಗೆ ಹಂಚಿಕೊಳ್ಳಲಾಯಿತು. ಸಮಾಜದಲ್ಲಿ ಪ್ರೀತಿ, ಕಾಳಜಿ ಮತ್ತು ಸಹಾನುಭೂತಿಯ ಅಗತ್ಯವಿರುವ ಮಕ್ಕಳೊಂದಿಗೆ ಸಮಯ ಕಳೆಯುವ ಮೂಲಕ ಅಭಿಮಾನಿಗಳು ಮಾನವೀಯತೆಯ ಮೆರೆದರು. ಈ ಸಂದರ್ಭದಲ್ಲಿ ಅನಿಲ ಕಳಸನ್ನವರ, ಪ್ರಕಾಶ ಪಾಟೀಲ, ಶಿವರಾಜ ಬಿರಾದಾರ, ಭೀಮನಗೌಡ ಟಕ್ಕಳಕಿ, ಮುತ್ತು ಟಕ್ಕಳಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆಶ್ರಮಗಳಲ್ಲಿ ಪ್ರಸಾದ ಸೇವೆ: ಶ್ರೀ ಸಂಕಲ್ಪ ಅನಾಥ ಸೇವಾ ನಿರಾಶ್ರಿತರ ಆಶ್ರಮ ಹಾಗೂ ಯಾದಗಿರಿ ಆಶ್ರಮದಲ್ಲಿ ಪ್ರಸಾದ ಸೇವೆ ಹಮ್ಮಿಕೊಳ್ಳಲಾಯಿತು. ಆಶ್ರಮದಲ್ಲಿರುವ ಅನಾಥರು ಹಾಗೂ ನಿರಾಶ್ರಿತರೊಂದಿಗೆ ಸೇವಾ ಮನೋಭಾವದಿಂದ ಪ್ರಸಾದ ಸೇವೆ ಸಲ್ಲಿಸುವ ಮೂಲಕ ಜನ್ಮದಿನದ ಆಚರಣೆಗೆ ಸಾಮಾಜಿಕ ಕಳಕಳಿಯ ಸ್ಪರ್ಶ ನೀಡಲಾಯಿತು. ಈ ಸಂದರ್ಭದಲ್ಲಿ ಶರಣಗೌಡ ಪಾಟೀಲ ಕನ್ಯಾಕೋಳೂರು, ಮಲ್ಲನಗೌಡ ಪಾಟೀಲ, ಶಿವಾಜಿ ಶಹಾಪುರ, ಸಂತೋಷ ಗಾಯಕವಾಡ ಸೇರಿದಂತೆ ಅಭಿಮಾನಿಗಳು ಭಾಗವಹಿಸಿದ್ದರು.
ಮಸ್ಕಿಯಲ್ಲಿ ಒಂದು ದಿನದ ದಾಸೋಹ ಸೇವೆ:
ಮಸ್ಕಿಯ ಅಭಿನಂದನ ಸ್ಪೂರ್ತಿಧಾಮದಲ್ಲಿ ಒಂದು ದಿನದ ದಾಸೋಹ ಸೇವೆಯನ್ನು ಹಮ್ಮಿಕೊಳ್ಳುವ ಮೂಲಕ ಆಶ್ರಮದ ನಿವಾಸಿಗಳಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಯಿತು. ಹಸಿದವರಿಗೆ ಅನ್ನ ನೀಡುವುದು ಅತ್ಯಂತ ಶ್ರೇಷ್ಠ ಸೇವೆ ಎಂಬ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬಸನಗೌಡ ಮಾಲಿಪಾಟೀಲ, ನಾಗರಾಜ ಬಳಗಾರ, ಕಿಶೋರ್ ಬಡಿಗೇರ, ಕಾಶಿನಾಥ ಗಾಯಕವಾಡ, ಸಂತೋಷ ಗಾಯಕವಾಡ, ಮುನ್ನಾ ಠಾಕೂರು, ಶಿವು ದಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಒಟ್ಟಾರೆಯಾಗಿ ಆರ್.ಎಸ್. ಪಾಟೀಲ ಕೂಚಬಾಳ ಅವರ ೫೪ನೇ ಜನ್ಮದಿನವನ್ನು ಅಭಿಮಾನಿಗಳು ಕೇವಲ ವೈಯಕ್ತಿಕ ಸಂಭ್ರಮವಾಗಿ ಆಚರಿಸದೆ, ಧಾರ್ಮಿಕ ಶ್ರದ್ಧೆ, ಜೀವಪರ ಕಾಳಜಿ ಮತ್ತು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಆಚರಿಸಿರುವುದು ವಿಶೇಷವಾಗಿದೆ. ಗೋವುಗಳಿಗೆ ಆಹಾರ, ಅನಾಥ ಮಕ್ಕಳಿಗೆ ಉಪಾಹಾರ, ನಿರಾಶ್ರಿತರಿಗೆ ಪ್ರಸಾದ ಹಾಗೂ ಆಶ್ರಮಗಳಲ್ಲಿ ದಾಸೋಹ ಸೇವೆ ಸಲ್ಲಿಸುವ ಮೂಲಕ ಜನ್ಮದಿನದ ಸಂಭ್ರಮವನ್ನು ಸಮಾಜಮುಖಿ ಕಾರ್ಯಗಳಿಗೆ ಅರ್ಪಿಸಿರುವುದು ಜನ್ಮದಿನಕ್ಕೆ ವಿಶಿಷ್ಠ ಅರ್ಥ ಮೂಡಿಬಂದಿತು.
ನನ್ನ ಜನ್ಮದ ಅಂಗವಾಗಿ ಅಭಿಮಾನಿ ಬಳಗದವರು ಸ್ವಾರ್ಥವನ್ನು ವೈಭವಿಕರಿಸದೇ ಸಮಾಜಮುಖಿ ಕಾರ್ಯಗಳೊಂದಿಗೆ ಆಚರಿಸಿರುವದು ಹೆಮ್ಮೆ ತಂದಿದೆ ಅನಾಥ ಮಕ್ಕಳ ಸಂಕಷ್ಟಕ್ಕೆ ಮಿಡಿಯುವ ಜನ್ಮದಿನವನ್ನು ಧಾರ್ಮಿಕ ಆಚರಣೆಗಳಲ್ಲಿಯೂ ಅಳವಡಿಸಿ ಗೋವು ಮೇವು ದಾನ ಮಾಡಿ ಶ್ರೀ ರಾಯರಲ್ಲಿ ಭಕ್ತಿಯ ಪರಾಕಾಷ್ಟೇಯನ್ನು ಮೇರೆದಿದ್ದಾರೆ ಅಭಿಮಾನಿಗಳ ಅಭಿಮಾನಕ್ಕೆ ನಾನು ಎಂದೂ ಚೀರೃಣಿಯಾಗಿದ್ದೇನೆ.
ಆರ್.ಎಸ್.ಪಾಟೀಲ(ಕೂಚಬಾಳ)
ಬಿಜೆಪಿ ಮಾಜಿ ಜಿಲ್ಲಾಅಧ್ಯಕ್ಷರು.