Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರೈತರ ಹೋರಾಟ ಹತ್ತಿಕ್ಕುವ ಸರ್ಕಾರದ ನಡೆ ಖಂಡನೀಯ

ಸರ್ಕಾರ ತನ್ನ ಅಹಂಕಾರದ ಧೋರಣೆ ಕೈಬಿಟ್ಟು ರೈತರ ಬೇಡಿಕೆ ಈಡೇರಿಸಲಿ: ವಕೀಲ ಚೌಕಶಿ

ಹಸಿರು ಕ್ರಾಂತಿ ವರದಿ ಬೆಳಗಾವಿ

ಕಬ್ಬಿಗೆ ನ್ಯಾಯುತ ಬೆಲೆ ನಿಗದಿ ಮಾಡಬೇಕೆಂದು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬಂಧಿಸುತ್ತಿರುವ ರಾಜ್ಯ ಸರ್ಕಾರ ಹಾಗೂ ಪೊಲೀಸ್‌ರ ನಡೆ ಖಂಡನೀಯ. ರೈತರ ಹೋರಾಟ ಹತ್ತಿಕ್ಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ವಕೀಲರು, ರೈತ ನಾಯಕ ಮಲ್ಲಿಕಾರ್ಜುನ ಚೌಕಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಕಬ್ಬು ಬೆಳೆಗಾರರ ಮುಖಂಡರೊಂದಿಗೆ ತುರ್ತಾಗಿ ಉನ್ನತ ಮಟ್ಟದ ಸಭೆ ನಡೆಸಬೇಕು, ಅವರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಸರ್ಕಾರ ತನ್ನ ಅಹಂಕಾರದ ಧೋರಣೆ ಕೈಬಿಟ್ಟು ರೈತರ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ರೈತರ ಹೋರಾಟಕ್ಕೆ ಸರ್ಕಾರ ಇಲ್ಲಿಯವರೆಗೆ ತಲೆ ಕೆಡಿಸಿಕೊಂಡಿಲ್ಲ. ದಶಕಗಳ ಬೇಡಿಕೆಗಳ ಈಡೇರಿಕೆಗೆ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದು ಬಿಟ್ಟು ಸಮಯ ವ್ಯರ್ಥ ಮಾಡುತ್ತಿರುವ ಸರ್ಕಾರದ ನಡೆ ಮಾತ್ರ ಖಂಡನೀಯ. ಈಗಾಗಲೇ ರೈತರ ಬೇಡಿಕೆಯಂತೆ ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆ ಬೆಂಬಲ ಬೆಲೆಗಳನ್ನು ವಿಶ್ವಾಸಕ್ಕೆ ಪಡೆದು ಘೋಷಣೆ ಮಾಡಲಿ. ಜೊತೆಗೆ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಅವಶ್ಯಕ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ ಆದಷ್ಟು ಬೇಗ ಶಾಶ್ವತ ಪರಿಹಾರ ಒದಗಿಸಲಿ ಸರ್ಕಾರ ಮುಂದಾಗಲಿ ಎಂದು ಆಗ್ರಹಿಸಿದ್ದಾರೆ.

ಸಕ್ಕರೆ ಕಾರ್ಖಾನೆಗಳು ಮೊದಲ ಹಂತದಲ್ಲಿ ಪ್ರತಿ ಟನ್ ಕಬ್ಬಿಗೆ ₹3,600 ದರ ನೀಡಲು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಚುನಪ್ಪ ಪೂಜೇರಿ ಅವರು ಸಕ್ಕರೆ ಕಾರ್ಖಾನೆಗಳ ಕಾರ್ಯಾರಂಭಕ್ಕೆ ಅವಕಾಶ ಮಾಡಿಕೊಡಲು ರೈತರು ಪ್ರತಿಭಟನೆ ಹಿಂಪಡೆದಿರುವ ನಿರ್ಧಾರ ಸ್ವಾಗತಾರ್ಹ. ಸಕ್ಕರೆ ಕಾರ್ಖಾನೆ ಮಾಲೀಕರು ಸಕ್ಕರೆ ಬೆಲೆ ಏರಿಕೆ ನಂತರ ನೀಡಲೇಬೇಕಾದ ಹೆಚ್ಚುವರಿ ಬೆಲೆಯನ್ನು ಯಾವುದೇ ಅನುಮಾನಗಳಿಗೆ ಆಸ್ಪದ ನೀಡದಂತೆ ನ್ಯಾಯಯುತವಾಗಿ ರೈತರಿಗೆ ಸಂದಾಯ ಮಾಡಬೇಕು. ಮಾತಿಗೆ ತಪ್ಪದಂತೆ ನಡೆದುಕೊಳ್ಳಬೇಕು.
-ಮಲ್ಲಿಕಾರ್ಜುನ ಚೌಕಶಿ, ವಕೀಲರು, ರೈತ ನಾಯಕರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾವಸಾರ ಬ್ಯಾಂಕಿನ ನೂತನ ಅಧ್ಯಕ್ಷ ಅರವಿಂದ ಹಂಚಾಟೆ ಅವರಿಗೆ ಸನ್ಮಾನಇಂದು ಮಿಣಜಗಿ ಶ್ರೀ ಗುರುಪಾದೇಶ್ವರ ರಥೋತ್ಸವನಗರದಲ್ಲಿ ಹಣತೆ ಖರೀದಿಗೆ ಮುಗಿಬಿದ್ದ ಮಹಿಳೆಯರುಕೊಲ್ಲಾಪುರದ ಮಹಾಲಕ್ಷ್ಮೀ ಹಾಗೂ ಜ್ಯೋತಿಬಾ ದೇವರ ದರ್ಶನ ಪಡೆದ ಲಕ್ಷ್ಮೀ ಹೆಬ್ಬಾಳಕರ್ಸರ್ಕಾರ ಸತತವಾಗಿ ರೈತರಿಗೆ  ಅನ್ಯಾಯ ಮಾಡಿದೆ,ರೈತರ ಹೋರಾಟದ ಫಲ 3600/- ರೂ ಮೊದಲ ಕಂತು ನಿಗದಿ.ಮಹಿಳಾ ಸ್ಪಂದನ ಕಾರ್ಯಕ್ರಮ ಆಯೋಜನೆ ಕಡ್ಡಾಯ ಮಹಿಳೆಯರಿಗೆ ಸರ್ಕಾರಿ ಯೋಜನೆಗಳ ಅರಿವು ಮೂಡಿಸಿ : ನಾಗಲಕ್ಷ್ಮಿ ಚೌಧರಿಜೆಡಿಎಸ್‌ನ ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷರಾಗಿ ವಿಠ್ಠಲ ಗಡ್ಡಿ ನೇಮಕಮಹಿಳಾ ಸಮಸ್ಯೆಗಳ ನಿರ್ಲಕ್ಷ್ಯ ಸಹಿಸುವುದಿಲ್ಲ: ನಾಗಲಕ್ಷ್ಮೀ ಚೌಧರಿಪಿ ಕೆ ಪಿ ಎಸ್ ವಕ್ಕುಂದ ಅಧ್ಯಕ್ಷರಾಗಿ ಗಜದಂಡ ಮಲ್ಲೇಶಪ್ಪ ಸುತಗಟ್ಟಿ ಮೂರನೇ ಬಾರಿಗೆ ಅವಿರೋಧ ಆಯ್ಕೆ – ಉಪಾಧ್ಯಕ್ಷರಾಗಿ ಬಸನಗೌಡ ಹುಲೆಪ್ಪನವರ ಪ್ರಥಮ ಬಾರಿಗೆ ಅವಿರೋಧ ಆಯ್ಕೆಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದೇಶಸೇವೆಗೆ ಆಕರ್ಷಿತರಾಗಲು ನಿರ್ಧಾರ ಸಹಕಾರಿ: ಜಗದೀಶ ಪೂಜೇರಿ