Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ಇಂದು ಮಿಣಜಗಿ ಶ್ರೀ ಗುರುಪಾದೇಶ್ವರ ರಥೋತ್ಸವ

೬೫ ವರ್ಷಗಳ ಐತಿಹಾಸಿಕ ಪರಂಪರೆಯ ಮಿಣಜಗಿ ಶ್ರೀ ಸದ್ಗುರು ಗುರುಪಾದೇಶ್ವರ ಮಠ



ತಾಳಿಕೋಟೆ: ಆಧ್ಯಾತ್ಮಿಕ ಚಿಂತನೆ, ಧಾರ್ಮಿಕ ಪರಂಪರೆ ಹಾಗೂ ಶೈಕ್ಷಣಿಕ ಸೇವೆಯ ಮೂಲಕ ಭಕ್ತರ ಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಉಲ್ಲೂರ ಗುರುಪಾದೇಶ್ವರ ಮಹಾಸ್ವಾಮಿಗಳ ಸುಮಾರು ೬೫ ವರ್ಷಗಳ ಇತಿಹಾಸ ಹೊಂದಿದೆ. ಮಿಣಜಗಿ ಗ್ರಾಮದದಲ್ಲಿರುವ ಮಠದ ವತಿಯಿಂದ ಪ್ರತಿವರ್ಷ ನಡೆಯುವ ಜಾತ್ರಾ ಮಹೋತ್ಸವವು ಭಕ್ತಿಭಾವದಿಂದ ಜರುಗುತ್ತಿದ್ದು, ಈ ಬಾರಿ ೫೮ನೇ ವರ್ಷದ ಜಾತ್ರೆ ಹಾಗೂ ಎರಡನೇ ವರ್ಷದ ರಥೋತ್ಸವವು ಇಂದು ಶನಿವಾರರಂದು ಸಾಯಂಕಾಲ ೫-೩೦ ಗಂಟೆಗೆ ವಿಜೃಂಬಣೆಯಿಂದ ಜರುಗಲಿದೆ.
     ಹೂಲ್ಲೂರು ಗ್ರಾಮದ ಗುರುಪಾದೇಶ್ವರ ಮುತ್ಯಾ ಅವರು ಅಲ್ಲಿಂದ ಮಿಣಜಗಿ ಗ್ರಾಮಕ್ಕೆ ಆಗಮಿಸಿ, ಕಾಯಕಯೋಗದ ಮೂಲಕ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಸೇವೆಯನ್ನು ಆರಂಭಿಸಿದರು. ಆರಂಭದಲ್ಲಿ ಸಣ್ಣ ಕಟ್ಟಡದಲ್ಲಿ ಮಠದ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿದ ಅವರು, ಕ್ರಮೇಣ ಮಠವನ್ನು ಅಭಿವೃದ್ಧಿಪಡಿಸಿ ಧಾರ್ಮಿಕ ಕೇಂದ್ರವನ್ನಾಗಿ ರೂಪಿಸಿದರು. ತಮ್ಮ ಜೀವನವನ್ನು ಧಾರ್ಮಿಕ ಸೇವೆಗೆ ಮುಡಿಪಾಗಿಟ್ಟ ಗುರುಪಾದೇಶ್ವರ ಮುತ್ಯಾ ಅವರು ಇದೇ ಮಠದಲ್ಲಿ ಐಕ್ಯರಾದರು ಎಂಬುದು ಮಠದ ಇತಿಹಾಸದ ವಿಶೇಷವಾಗಿದೆ.
      ಸದ್ಗುರು ಶ್ರೀ ಗುರುಪಾದೇಶ್ವರ ಮಹಾಸ್ವಾಮಿಗಳವರ ಆಧ್ಯಾತ್ಮಿಕ ಪರಂಪರೆಯನ್ನು ಅವರ ಕುಟುಂಬದವರು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಮಹಾಸ್ವಾಮಿಗಳ ಪುತ್ರ ಬಸಯ್ಯಮುತ್ಯಾ ಮಾಸ್ತರ ಅವರ ಪುತ್ರ ಇರಯ್ಯ ಮುತ್ಯಾ ಸೇರಿದಂತೆ ಕುಟುಂಬದ ಈಗೀನ ವೇ.ಸೋಮಶೇಖರಯ್ಯ ಹಿರೇಮಠ ಅವರನ್ನೋಳಗೊಂಡು ಮುಂದಿನ ಪೀಳಿಗೆಯವರು ಮಠದ ಪರಂಪರೆ ಹಾಗೂ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಈ ಮೂಲಕ ಮಠದ ಧಾರ್ಮಿಕ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯುತ್ತಿದೆ.
ಮಕ್ಕಳಿಗೆ ಉಚಿತ ಶಿಕ್ಷಣ, ಧಾರ್ಮಿಕ ಬೋಧನೆ:
     ಮಠವು ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗದೆ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿದೆ. ಮಠದ ವತಿಯಿಂದ ’ಸೇವಾ ಸಮಿತಿ’ ಹೆಸರಿನಲ್ಲಿ ಟ್ರಸ್ಟ್ ರಚಿಸಲಾಗಿದ್ದು, ಇದರ ಮೂಲಕ ಮಕ್ಕಳಿಗೆ ಪ್ರೈವೇಟ್ ಟ್ಯೂಷನ್ ತರಗತಿಗಳನ್ನು ನಡೆಸಲಾಗುತ್ತಿದೆ. ವಿಶೇಷವಾಗಿ ಬೇಸಿಗೆ ರಜೆಯ ಎರಡು ತಿಂಗಳ ಅವಧಿಯಲ್ಲಿ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಶಿಕ್ಷಣ ನೀಡುವುದರ ಜತೆಗೆ ಧಾರ್ಮಿಕ ಬೋಧನೆ, ಪ್ರವಚನ ಹಾಗೂ ಸಂಸ್ಕಾರಯುತ ವಿಚಾರಗಳನ್ನು ತಿಳಿಸಿಕೊಡಲಾಗುತ್ತಿದೆ. ಮಕ್ಕಳಲ್ಲಿ ಶಿಕ್ಷಣದ ಆಸಕ್ತಿ, ನೈತಿಕ ಮೌಲ್ಯಗಳು ಮತ್ತು ಧಾರ್ಮಿಕ ಪ್ರಜ್ಞೆ ಬೆಳೆಸುವ ಉದ್ದೇಶದಿಂದ ಈ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
೧೮ರಿಂದ ೨೦ ಅಡಿ ಎತ್ತರದ ಭವ್ಯ ರಥ:
     ಈ ವರ್ಷದ ಜಾತ್ರೆಯು ೫೮ನೇ ವರ್ಷದ ಸಂಭ್ರಮದಲ್ಲಿದ್ದು, ರಥೋತ್ಸವದ ಪರಂಪರೆಗೆ ಇದು ಎರಡನೇ ವರ್ಷವಾಗಿದೆ. ಸುಮಾರು ೧೮ರಿಂದ ೨೦ ಅಡಿ ಎತ್ತರದ ಭವ್ಯ ರಥವನ್ನು ಸಿದ್ಧಪಡಿಸಲಾಗಿದ್ದು, ರಥೋತ್ಸವವು ಜಾತ್ರೆಯ ಪ್ರಮುಖ ಆಕರ್ಷಣೆಯಾಗಲಿದೆ. ರಥೋತ್ಸವವನ್ನು ಯಶಸ್ವಿಯಾಗಿ ನಡೆಸಲು ಮಠದ ವತಿಯಿಂದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಭಕ್ತರೇ ಮಠದ ಶಕ್ತಿ; ಅನುದಾನವಿಲ್ಲದೆ ಸೇವಾ ಕಾರ್ಯ:
     ಮಠದ ವಿಶೇಷತೆಯೆಂದರೆ, ಇಲ್ಲಿನ ಯಾವುದೇ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಯಾವುದೇ ಅನುದಾನ ದೊರೆಯುತ್ತಿಲ್ಲ. ಭಕ್ತರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ನೀಡುವ ಆರ್ಥಿಕ ನೆರವು ಮತ್ತು ವಸ್ತುರೂಪದ ಸಹಕಾರವೇ ಮಠದ ಚಟುವಟಿಕೆಗಳಿಗೆ ಪ್ರಮುಖ ಆಧಾರವಾಗಿದೆ. ಭಕ್ತರ ಸಹಕಾರದಿಂದಲೇ ಪ್ರತಿವರ್ಷ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ.
      ಒಟ್ಟಾರೆ, ಆರು ದಶಕಗಳಿಗೂ ಹೆಚ್ಚು ಕಾಲದ ಆಧ್ಯಾತ್ಮಿಕ ಪರಂಪರೆಯನ್ನು ಉಳಿಸಿಕೊಂಡು, ಧಾರ್ಮಿಕ ಸೇವೆಯ ಜತೆಗೆ ಮಕ್ಕಳ ಶಿಕ್ಷಣ ಮತ್ತು ಸಂಸ್ಕಾರಕ್ಕೆ ಆದ್ಯತೆ ನೀಡುತ್ತಿರುವ ಉಲ್ಲೂರು ಗುರುಪಾದೇಶ್ವರರ ಮಿಣಜಗಿ ಗ್ರಾಮದ ಮಠವು ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯ ಕೇಂದ್ರವಾಗಿ ಗುರುತಿಸಿಕೊಂಡಿದೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾವಸಾರ ಬ್ಯಾಂಕಿನ ನೂತನ ಅಧ್ಯಕ್ಷ ಅರವಿಂದ ಹಂಚಾಟೆ ಅವರಿಗೆ ಸನ್ಮಾನಇಂದು ಮಿಣಜಗಿ ಶ್ರೀ ಗುರುಪಾದೇಶ್ವರ ರಥೋತ್ಸವನಗರದಲ್ಲಿ ಹಣತೆ ಖರೀದಿಗೆ ಮುಗಿಬಿದ್ದ ಮಹಿಳೆಯರುಕೊಲ್ಲಾಪುರದ ಮಹಾಲಕ್ಷ್ಮೀ ಹಾಗೂ ಜ್ಯೋತಿಬಾ ದೇವರ ದರ್ಶನ ಪಡೆದ ಲಕ್ಷ್ಮೀ ಹೆಬ್ಬಾಳಕರ್ಸರ್ಕಾರ ಸತತವಾಗಿ ರೈತರಿಗೆ  ಅನ್ಯಾಯ ಮಾಡಿದೆ,ರೈತರ ಹೋರಾಟದ ಫಲ 3600/- ರೂ ಮೊದಲ ಕಂತು ನಿಗದಿ.ಮಹಿಳಾ ಸ್ಪಂದನ ಕಾರ್ಯಕ್ರಮ ಆಯೋಜನೆ ಕಡ್ಡಾಯ ಮಹಿಳೆಯರಿಗೆ ಸರ್ಕಾರಿ ಯೋಜನೆಗಳ ಅರಿವು ಮೂಡಿಸಿ : ನಾಗಲಕ್ಷ್ಮಿ ಚೌಧರಿಜೆಡಿಎಸ್‌ನ ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷರಾಗಿ ವಿಠ್ಠಲ ಗಡ್ಡಿ ನೇಮಕಮಹಿಳಾ ಸಮಸ್ಯೆಗಳ ನಿರ್ಲಕ್ಷ್ಯ ಸಹಿಸುವುದಿಲ್ಲ: ನಾಗಲಕ್ಷ್ಮೀ ಚೌಧರಿಪಿ ಕೆ ಪಿ ಎಸ್ ವಕ್ಕುಂದ ಅಧ್ಯಕ್ಷರಾಗಿ ಗಜದಂಡ ಮಲ್ಲೇಶಪ್ಪ ಸುತಗಟ್ಟಿ ಮೂರನೇ ಬಾರಿಗೆ ಅವಿರೋಧ ಆಯ್ಕೆ – ಉಪಾಧ್ಯಕ್ಷರಾಗಿ ಬಸನಗೌಡ ಹುಲೆಪ್ಪನವರ ಪ್ರಥಮ ಬಾರಿಗೆ ಅವಿರೋಧ ಆಯ್ಕೆಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದೇಶಸೇವೆಗೆ ಆಕರ್ಷಿತರಾಗಲು ನಿರ್ಧಾರ ಸಹಕಾರಿ: ಜಗದೀಶ ಪೂಜೇರಿ