ಹೊಸಪೇಟೆ : ಬೆಳಕಿನ ಹಬ್ಬ ದೀಪಾವಳಿ ತಯಾರಿಗಾಗಿ ಸಾರ್ವಜನಿಕ ರು ಹಣತೆಗಳ ಖರೀದಿಗೆ ಮುಗಿಬಿದ್ದಿದ್ದಾರೆ.ನಗರದ ಮದ್ಯಬಾಗದಲ್ಲಿನ ಲಿಟ್ಲಪ್ಲವರ್ ಶಾಲೆಯ ಮುಂಭಾಗದಲ್ಲಿ ದೀಪದ ಹಣತೆ ಖರೀದಿಗೆ ಮಹಿಳೆಯರು ಉತ್ಸಾಹದಿಂದ ವಿಧ ವಿಧ ವಾದ ಮಣ್ಣಿನ ಮತ್ತು ಪಿಂಗಾಣಿಯಿಂದ ಮಾಡಿದ ಹಣತೆಗಳ ಖರೀದಿ ಮಾಡುತ್ತಿದ್ದಾರೆ.ಹಣತೆ ಮಣ್ಣಿನಿಂದ ಮಾಡದೆ ಹೋದರೂ, ಮಣ್ಣಿನ ,ಮತ್ತು ಬಂಗಾರದಂತೆ ಕಂಡುಬರುವ ಲೇಪನ ದಿಂದ ಆಕರ್ಷಿಸಲ್ಪಟ್ಟಿದ್ದಾರೆ.ಬೆಲೆ ತುಸು ದುಬಾರಿಎನಿಸಿದರೂ ಖರೀದಿಗೆ ಬರ ಇಲ್ಲ.ಆದರೂ ಹಣತೆ ಮಾರಾಟಗಾರರು ವ್ಯಾಪಾರ ಕುಸಿದಿದೆ ಎಂದು ತಮ್ಮ ನೋವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಪೋಟೋ: ಹಣತೆ ಮಾರಾಟ