ಮುದ್ದೇಬಿಹಾಳ:-ಈ ಬಾಗದಲ್ಲಿ ಬಡವರಿಗಾಗಿ ಇಪ್ಪತ್ತು ವರ್ಷಗಳಿಂದ ಸದಾ ಕಾಲ ಸಾಮೂಹಿಕ ವಿವಾಹ ನಡೆಯುವ ಕೆಲಸ ಆದರೆ ಅದು ಬೀರಪ್ಪನ ಬೆಟ್ಟದಲ್ಲಿಮಾತ್ರ ಎಂದು ಶ್ರೀ ರೇವಣಸಿದ್ದೇಶ್ವರ ಶಾಂತಮಯ ಮಹಾ ಸ್ವಾಮೀಜಿಗಳು ಮಾತನಾಡಿದರು.
ಮುದ್ದೇಬಿಹಾಳ ತಾಲ್ಲೂಕಿನ ಅಡವಿ ಹುಲಗಬಾಳ ಸಮೀಪದ ಬೀರಪ್ಪ ಹಾಗೂ ಮಾಳಿಂಗರಾಯ ಮತ್ತು ಸಿಡಿಯಾನ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನವೆಂಬರ್ 10 ಮಂಗಳವಾರದಂದು ನಡೆದ ಸಾಮೂಹಿಕ ವಿವಾಹ ಹಾಗೂ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಇವತ್ತು ತಾಳಿ ಅಂದರೆ ನೀಮಗೆ ಎಷ್ಟೆ ಕಷ್ಟ ಬಂದರು ಕುತ್ತಿಗೆತನ ಬಂದರು ತಾಳಬೇಕು. ತಾಳಿಯೋಳಗೆ ಇರುವ ಕರಿಮಣಿಗಳು ನಿನಗೆ ಬದುಕಿನಲ್ಲಿ ಬರುವ ಕಪ್ಪು ಚುಕ್ಕೆಗಳು,ಅಲ್ಲೊಂದು ಇಲ್ಲೊಂದು ಇರುವ ಬೆಲ್ಲದಮಣಿಗಳು ಅವು ನಿಮಗೆ ಎನೇ ಕಷ್ಟಗಳು ಬಂದರು ಬೆಲ್ಲದಂತೆ ಇರಲಿ ಎಂದರ್ಥ . ಅದರೋಳಗೆ ಇರುವ ಎರಡು ಬಂಗಾರದ ಪದಕಗಳು ನಿನ್ನ ಎಲ್ಲಾ ಕಷ್ಟದಲ್ಲೂ ನೀನು ಬಂಗಾರದ ಹಾಗೆ ಬಾಳಬೇಕು ಎಂದು ನವ-ವದು ವರರಿಗೆ ಮಾಂಗಲ್ಯದ ಬಗ್ಗೆ ಹೇಳಿ ಆಶೀರ್ವದಿಸಿದರು.
ನಂತರ ಇದಕ್ಕೂ ಮೊದಲು ವೇದಿಕೆಯಲ್ಲಿ ಮಾತನಾಡಿದ ರಾಜಕೀಯ ಮುಖಂಡರ ಭಾಷಣ ಕೇಳಿ ಇಲ್ಲಿ ಕಳೆದ ಹತ್ತಾರು ವರ್ಷದಿಂದ ಇದೇ ಭಾಷಣ ಮಾಡುತ್ತಿದ್ದಿರಿ ಯಾರು ಕೆಲಸ ಮಾಡುತಿಲ್ಲ ಬರೆ ಮಾತೆ ಆಡುವುದು ಆಗಿದೆ ಎಂದು ಮುಖಂಡರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ಮೊದಲಿಂದ ಸಂಘಟನೆ ಸರಿಯಾಗಿಲ್ಲ ಅಷ್ಟೇ. ಇಲ್ಲಿಗೆ ಎಲ್ಲಾ ಎಮ್ ಪಿ ಗಳು, ಎಮ್ ಎಲ್ ಎ ಗಳು ಎಲ್ಲರೂ ಬಂದು ಹೋಗಿದ್ದಾರೆ. ಅವರು ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಂಡು ಹೋಗಿದ್ದಾರೆ ಅಷ್ಟೇ ಎಂದು ಹೇಳಿದರು. ಇಲ್ಲಿ ಈ ಜಾತ್ರೆಯಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಜನ ಸೇರುತ್ತಾರೆ. ಆದರೂ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಕಲ್ಯಾಣ ಮಂಟಪ ಇಲ್ಲ ಎಂದು ಹೇಳಿದರು.ಇಲ್ಲಿ ಮಾತಾಡಿದ ಎಲ್ಲ ಗಣ್ಯರು ದೇಣಿಗೆ ಕೊಡತಿನಿ ಅಂತ ಹೇಳಿದವರು ಅವರು ನಿಯತ್ತಾಗಿ ಕೊಡಿ ಎಂದು ಹೇಳಿದರು. ಈ ಬೆಟ್ಟದಲ್ಲಿ ಬಡವರು ನಂಬಿಕೆಯ ಸನ್ನಿಧಿ ಇದೆ. ಇದನ್ನು ರಾಜಕೀಯದವರು ನಿಮ್ಮ ರಾಜಕೀಯ ಭವಿಷ್ಯಕ್ಕೆ ಬಳಸಿಕೋಳ್ಳಬೇಡಿ ಎಂದು ಹೇಳಿದರು. ಇನ್ನೂ ಮುಂದೆ ಕೋತಿ-ಮೇಕೆಯದಾಟ ನಮ್ಮುಂದ ಮಾಡಬೇಡಿ ಎಂದು ರಾಜಕೀಯ ಮುಖಂಡರ ವಿರುದ್ಧ ಕಿಡಿಕಾರಿದರು.
ಸಾನಿಧ್ಯವಹಿಸಿ ಮಾತನಾಡಿದ ಶ್ರೀ ಮಲ್ಲಾರಲಿಂಗ ಮಹಾರಾಜರು ಮಾತನಾಡಿ ಜಾತಿ ಮಾಡಬಾರದು ಎಂದು ಬಸವಣ್ಣನವರು ಹೇಳಿದರು. ಸಮಾಜದಲ್ಲಿ ಜಾತಿ ಮಾಡಲಾರದವರು ಹಾಲುಮತ ಸಮಾಜದವರು. ಇಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಕ್ರಮ ನಮ್ಮಿಂದಲೇ ಆಗಬೇಕು.ಸಾಮೂಹಿಕ ವಿವಾಹ ಅಂತಹ ಕೆಲಸ ಮಾಡಬೇಕು ಎಂದು ಹೇಳಿದರು. ಎಲ್ಲಾ ಸಮಾಜದವರು ನಮ್ಮನ್ನು ಮೇಲೆ ನಿಂತು ಕೈ ಎಳೆಯುವ ಕೆಲಸ ಮಾಡಬೇಕು, ಹೊರತು ಕಾಲೆಳೆಯುವ ಕೆಲಸ ಮಾಡಬಾರದು ಎಂದು ಹೇಳಿದರು. ವದು ಗಳು ನಿಮ್ಮ ಅತ್ತೆ-ಮಾವನಿಗೆ ಯಾವತ್ತೂ ಕೀಳಾಗಿ ನೋಡಬೇಡಿ, ನಿಮ್ಮ ತಂದೆ-ತಾಯಿ ಎಂದು ನೋಡಿಕೊಳ್ಳಿ ಎಂದು ಹೇಳಿದರು.
ಕೆಂಚಪ್ಪ ಬಿರಾದಾರ ಮಾತನಾಡಿ ಸಾಮೂಹಿಕ ಮದುವೆ ಮಾಡೋದು ಒಂದು ಶ್ರೇಷ್ಠವಾದ ಕೆಲಸ, ಇಲ್ಲಿ ಮದುವೆ ಮಾಡಿಕೋಳ್ಳೂರು ಕೂಡಾ ಭಾಗ್ಯವಂತರು. ಯಾಕೆಂದರೆ ಇಲ್ಲಿ ಯಾರನ್ನು ಕರೆಯದೆ ಎಲ್ಲಾ ಸ್ವಾಮೀಜಿಗಳು ಆಗಮಿಸಿ ನಿಮಗೆ ಆಶೀರ್ವಾದ ಮಾಡುತ್ತಾರೆ. ಇವತ್ತು ನಿಮಗೆ ಕಟ್ಟಿದ್ದ ತಾಳಿ ನಿಮಗೆ ಮುಂದಿನ ದಿನಮಾನಗಳಲ್ಲಿ ಎನೋ ಕುಂದು-ಕೋರತೆಗಳು ಬಂದರು ಕೂಡಾ ಅದನ್ನು ತಾಳಿಕೋಂಡು ನಡೆಯಬೇಕು ಎಂದು ನವ ವದು-ವರರಿಗೆ ಬದುಕಿನ ಕಿವಿಮಾತು ಹೇಳಿದರು. ಹಾಲುಮತ ಸಮಾಜವನ್ನು ಮತ್ತೆ ಸಮಾಜದಲ್ಲಿ ಮುನ್ನಲೆಗೆ ತರಬೇಕು. ಸಮಾಜದ ಯುವಕರು ಸಂಘ ಮತ್ತು ಸಂಘಟನೆಯ ವತಿಯಿಂದ ಸಮಾಜವನ್ನು ಮುನ್ನಲೆ ತರಬೇಕು ಮತ್ತು ಮುಖಂಡರು ಒಗ್ಗಟ್ಟಾಗಬೇಕು. ಬೀರಪ್ಪನ ಬೆಟ್ಟಕ್ಕೆ ಬರುವ ಮಾರ್ಗ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ದೇವಸ್ಥಾನಕ್ಕೆ ಬರುವ ಮಾರ್ಗವನ್ನು ಡಾಂಬರಿಕರಣ ಮಾಡಬೇಕು. ಈ ಕ್ಷೇತ್ರವನ್ನು ದಾರ್ಮಿಕ ಕ್ಷೇತ್ರವನ್ನಾಗಿ ಮಾಡಲು ನಾವೆಲ್ಲರೂ ಒಗ್ಗೂಡಬೇಕು ಎಂದು ಮಾತನಾಡಿದರು.
ಮಹಿಳಾ ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿಲ್ಪಾ ಕುದರಗೊಂಡ ಅವರು ಮಾತನಾಡಿ ಸಮಾಜದ ಎಲ್ಲಾ ಮತಗಳಲ್ಲಿ ಹಾಲುಮತ ಸಮಾಜವೇ ಲೇಸು ಎಂದು ಸರ್ವಜ್ಞ ನವರೇ ಹೇಳಿದ್ದಾರೆ. ಎಲ್ಲಾದರೂ ಪವಾಡಗಳು ನಡೆದರೆ ಅದು ಹಾಲುಮತದವರಿಂದ ಮಾತ್ರ ಸಾಧ್ಯ. ಬೀರಪ್ಪದೇವರ ಮಹಿಮೆ ಮತ್ತು ಮಾಳಿಂಗರಾಯ ಅವರ ಪವಾಡ ಮತ್ತು ಚರಿತ್ರೆಯ ಬಗ್ಗೆ ಕಾರ್ಯಕ್ರಮದಲ್ಲಿ ವಿಶ್ಲೇಷಿಸಿದರು. ಗೋವಾ ಕನ್ನಡಿಗ ಸಂಘದ ಅಧ್ಯಕ್ಷರಾದ ಸಿದ್ದಣ್ಣ ಮೇಟಿ ಮಾತನಾಡಿ ಗೆದ್ದಲು ಹುಳು ಹುತ್ತಮಾಡಿ ಹಾವಿಗೆ ಬಿಟ್ಟಕೋಟ್ಟಂತ್ತೆ ನಾವೆಲ್ಲ ಮಾಡುತ್ತಿದ್ದೆವೆ. ನಮ್ಮ ಬೀರಪ್ಪನ ಬೆಟ್ಟಕ್ಕೆ ಬರುವ ರಸ್ತೆ ಯಾವ ಸರ್ಕಾರದಿಂದ ಆಗಲಿಕ್ಕೂ ಪರವಾಗಿಲ್ಲ ನಾವೆಲ್ಲರೂ ಸೇರಿ ಸ್ವಂತ ಖರ್ಚಿನಲ್ಲಿ ಆದರೂ ರಸ್ತೆ ನಿರ್ಮಿಸೋಣ ಎಂದು ಹೇಳಿದರು. ಗಂಗಾಧರ ನಾಡಗೌಡ, ಅವರು ಮಾತನಾಡಿ ಯಾವುದೇ ಕಾರ್ಯಕ್ರಮ ಮಾಡಿದರೆ ಅದನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಬಹಳ ಮುಖ್ಯ. ಎಲ್ಲರಲ್ಲೂ ಎಲ್ಲಾ ಇರುತ್ತದೆ. ನಮ್ಮಲ್ಲಿರುವುದನ್ನು ಸ್ವಲ್ಪ ಆದರೂ ಬಡವರಿಗೆ ಸಹಾಯ ಮಾಡುವ ಸದ್ಗುಣ ಎಲ್ಲರಿಗೂ ಬರುವುದಿಲ್ಲ. ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳಲು ಪುಣ್ಯ ಮಾಡಿರ ಬೇಕು ಎಂದು ಹೇಳಿದರು. ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ ಈ ಪವಿತ್ರವಾದ ಸ್ಥಾನದಲ್ಲಿ ಮದುವೆ ಮಾಡಿಕೊಂಡವರು ನೀವೆ ಪುಣ್ಯವಂತು. ಸಮಾಜದಲ್ಲಿ ಬದಲಾವಣೆ ಆಗಬೇಕಾದರೆ ಮೊದಲು ಜಾತಿ, ಪಕ್ಷ, ರಾಜಕೀಯ ಅನ್ನೋದು ಬಿಟ್ಟು ಅಭಿವೃದ್ಧಿ ಕೆಲಸದ ಹಿಂದೆ ಹೋಗಬೇಕು ಯುವಕರಿಗೆ ಎಚ್ಚರಿಸಿದರು. ಈ ಜಾತ್ರೆಯಲ್ಲಿ ಭಾಗವಹಿದ ಎಲ್ಲಾ ಮುಖಂಡರ ಸೇರಿ ಒಂದು ಕಲ್ಯಾಣ ಮಂಟಪದ ಕೆಲಸ ಆಗಬೇಕು ಅದು ಬಡವರಿಗೆ ಉಚಿತವಾಗಿ ಸಿಗಬೇಕು.ಇದೇ ಹಾಲುಮತ ಸಮಾಜದ ಅನೇಕ ಮುಖಂಡರ ಸಾಕಷ್ಟು ಶ್ರೀಮಂತರು ಇದ್ದಾರೆ. ಅವರು ಎಲ್ಲರೂ ಮನಸ್ಸು ಮಾಡಿದರೆ ಈ ಜಾಗವನ್ನು ಅಭಿವೃದ್ಧಿ ಆಗತ್ತದ. ಅವರ ಜೋತೆ ನಾವು ಕೈ ಜೋಡಿಸಿತ್ತೆವೆ ಎಂದು ಹೇಳಿದರು. ಕಾರ್ಯಕ್ರಮದ ರೂವಾರಿಗಳಾದ ಮಲ್ಲಿಕಾರ್ಜುನ ಎನ್ ಮದರಿ ಮಾತನಾಡಿ ಈ ಜಾತ್ರೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮದ ವ್ಯವಸ್ಥೆಯನ್ನು ಎಲ್ಲರೂ ಮಾಡಬೇಕು. ಇದು ಒಬ್ಬ ವ್ಯಕ್ತಿಗತ ಜಾತ್ರೆ ಆಗಬಾರದು.ಎಲ್ಲಾ ಸುತ್ತಮುತ್ತಲಿನ ಗ್ರಾಮದ ಭಕ್ತರು ಸೇರಿ ಜಾತ್ರೆ ಮಾಡಬೇಕು. ಆದರೆ ನಾನು ಮದುವೆಗೆ ಬರುವಂತ ಎಲ್ಲಾ ಜವಾಬ್ದಾರಿಯನ್ನು ನಾನು ಕೂಡಾ ಭಕ್ತನಾಗಿ ವಹಿಸಿಕೋಂಡಿದ್ದೆ ಅಷ್ಟೇ ಎಂದು ಮಾತನಾಡಿದರು.
ಬಾಕ್ಸ್:- ಪ್ರಥಮ ದರ್ಜೆ ಗುತ್ತಿಗೆದಾರರಾದ ಸಿ ಬಿ ಅಸ್ಕಿ ಮಾತನಾಡಿ ಮುಂದಿನ ದಿನಗಳಲ್ಲಿ ಹಾಲು ಸಮಾಜದ ಎಲ್ಲಾ ರಾಜಕೀಯ ವ್ಯಕ್ತಿಗಳಾಗಲಿ, ಯುವಕರು, ಮುಖಂಡರು ಸೇರಿ ಈ ಜಾತ್ರೆಯನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಹೇಳಿದರು. ಮುಂದಿನ ವರ್ಷದಲ್ಲಿ ಸರ್ಕಾರ ಆಗಲಿ ಅಥವಾ ಸಮಾಜದವರು ಆಗಲಿ ರಸ್ತೆ ಮಾಡದಿದ್ದರೆ. ಮುಂದಿನ ದಿನಗಳಲ್ಲಿ ನಾನೆ ಸ್ವತಃ ಖರ್ಚಿನಲ್ಲಿ ರಸ್ತೆ ಕಾಮಗಾರಿಯನ್ನು ಮುಗಿಸಿಕೊಡುತ್ತನೆ ಇದು ಮಾಳಿಂಗರಾಯನಲ್ಲಿ ಪ್ರಮಾಣ ಮಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ದುರಿಣರಾದ ವೈ ಎಚ್ ವಿಜಯಕರ್ ಮಾತನಾಡಿ ಕಳೆದ 22 ವರ್ಷಗಳ ಹಿಂದೆ ಮಾಡಿದ ಕೆಲಸ ಬಿಟ್ಟು ಇಲ್ಲಿಯವರೆಗೆ ಬರಿ ಜಾತ್ರೆ ಮಾಡಿದ್ದಿರಿ ಅಷ್ಟೇ ಅದನ್ನು ಬಿಟ್ಟು ದೇವಸ್ಥಾನ, ರಸ್ತೆ ಸೇರಿದಂತೆ ಯಾವುದೇ ಅಭಿವೃದ್ಧಿ ಆಗಿಲ್ಲ. ಇದು ಜಾತ್ರೆ ಆಗಬಾರದು. ಇಪ್ಪತ್ತು ವರ್ಷಗಳಿಂದ ಇಲ್ಲಿಗೆ ಎಲ್ಲಾ ರಾಜಕಾರಣಿಗಳು ಬಂದಿದ್ದಾರೆ. ಆದರೆ ಯಾರು ಈ ದೇವಸ್ಥಾನವನ್ನು ಅಭಿವೃದ್ಧಿ ಮಾಡಿಲ್ಲ ಎಂದು ಬಹಿರಂಗವಾಗಿ ಮಾತನಾಡಿದರು. ಈ ರಸ್ತೆಯನ್ನು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ರಾಜಕಾರಣಿಗಳಿಗೆ ಸ್ವಲ್ಪ ತೊಂದರೆ ಆಗತ್ತದೆ ಎಂದು ನೀವು ಎಲ್ಲರು ಒಗ್ಗಟ್ಟಾಗಬೇಕು ಎಂದು ಹೇಳಿದರು.
ಮೊದಲಿದ್ದ ದೇವಸ್ಥಾನದ ಅಧ್ಯಕ್ಷರಾದ ನಿಂಗಪ್ಪಗೌಡ ಬಪ್ಪರಗಿ ಅವರು ಇಲ್ಲಿ ಸುಮಾರು 20 ವರ್ಷಕ್ಕಿಂತ ಹೆಚ್ಚು ಕಾಲ ದೇವಸ್ಥಾನದ ಅಧ್ಯಕ್ಷರಾಗಿ ಅಲ್ಲಿದ್ದ ಅನೇಕ ಕುಂದುಕೊರತೆಗಳನ್ನು ನೀಗಿಸಿದ್ದರು.20 ವರ್ಷದಲ್ಲಿ ಈ ದೇವಸ್ಥಾನದಲ್ಲಿ ಸುಮಾರು 1000ಕ್ಕೂ ಹೆಚ್ಚು ಸಾಮೂಹಿಕ ವಿವಾಹವನ್ನು ಮಾಡಿದ್ದಾರೆ. ಅವರನ್ನು ಈ 2026ರ ಜಾತ್ರೆಯಲ್ಲಿ ಅವರ ಅನುಪಸ್ಥಿತಿಯ ಕೊರತೆಯಿಂದ ಈ ವರ್ಷ ಜಾತ್ರೆಯಲ್ಲಿ ಜನಸಂಖ್ಯೆಯು ಸ್ವಲ್ಪ ಕಡಿಮೆಯಾಗಿದೆ, ಈಗಿನ ಅಧ್ಯಕ್ಷರಾದ ಮಲ್ಲಿಕಾರ್ಜುನ ಎನ್ ಮದರಿ ಅವರು ಎಷ್ಟು ದಿನ ನಡೆಸಿಕೊಂಡು ಹೋಗುತ್ತಾರೆ ನೋಡಬೇಕು ಎಂದು ಜಾತ್ರೆಗೆ ಬಂದ ಭಕ್ತರು ಮಾತನಾಡುತ್ತಿದ್ದರು.
ಜಾತ್ರೆಯಲ್ಲಿ ಆಗಮಿಸಿದ ಭಕ್ತರಿಗೆ ಸಜ್ಜಕ, ಬದನೆಕಾಯಿ ಪಲ್ಯ, ಮತ್ತು ಅನ್ನ-ಸಾಂಬಾರನ್ನು ಮಾಡಲಾಗಿತ್ತು. ಸುಮಾರು ಐದು ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ತಾಳಿಕೋಟಿ ಪೋಲಿಸ್ ಸಿಬ್ಬಂದಿಗಳು ಬಂದೋಬಸ್ತ್ ನೀಡಿದರು. ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಆಗಮಿಸಿ ನವ ವದು-ವರರ ವಯಸ್ಸಿನ ದಾಖಲಾತಿ ಗಳನ್ನು ಪರಿಶೀಲಿಸಿದರು.
ಶಾಂತಮಯ ಸ್ವಾಮೀಜಿ ಅಗತಿರ್ಥ, ಮಲ್ಲಾಲಿಂಗ ಸ್ವಾಮೀಜಿ ಯರಝರಿ,ಸಿದ್ದಬೀರ ದೇವರು ಕಾಗಿನೆಲೆ ಶಾಖಾಮಠ ತಿಂಥಣಿ ಬ್ರಿಜ್, ಸಿದ್ದಯ್ಯ ಗುರುವಿನ, ಸಹದೇವಯ್ಯ ಗುರುವಿನ ಸರೂರ, ಸಿದ್ದಣ್ಣ ಮೇಟಿ, ಬಿ ಕೆ ಬಿರಾದಾರ, ಕೆಂಚಪ್ಪ ಬಿರಾದಾರ,ಸೋಮನಗೌಡ ಪಾಟೀಲ ನಡಹಳ್ಳಿ, ಶಿಲ್ಪಾ ಕುದರಗೊಂಡ, ಸಂಗಮ್ಮ ದೇವರಳ್ಳಿ, ರವಿ ಜಗಲಿ,ಲಕ್ಷ್ಮಣ ಬಿಜ್ಜೂರ, ವೈ ಎಚ್ ವಿಜಯಕರ, ಬೀರಪ್ಪ ಜು ಸಾಸನೂರ, ಮಲಕೇಂದ್ರಾಯಗೌಡ ಪಾಟೀಲ, ಸಿ ಬಿ ಅಸ್ಕಿ, ಗಂಗಾಧರ ನಾಡಗೌಡ, ಶಾಂತಗೌಡ ಪಾಟೀಲ ನಡಹಳ್ಳಿ, ಕಾಶಿಮ್ ಪಟೇಲ್ ಮುಕಿಹಾಳ,ಮಲ್ಲಣ್ಣ ಅಪರಾಧಿ,ರವಿಚಂದ್ರ ಆಲ್ದಾಳ (ಸಾಹುಕಾರ), ಹಣಮಂತ ಕುರಿ, ಬಸವರಾಜ ಗುಳಬಾಳ, ಸಂಗಮೇಶ ಶಿವಣಗಿ ಅವರ ಕಲಾತಂಡದವರು ಪ್ರಾರ್ಥನಾಗೀತೆಯನ್ನು ಹಾಡಿದರು. ಬೀಮಣ್ಷ ತಳವಾರ ಶಿಕ್ಷಕರು ನಿರೂಪಣೆ ಮಾಡಿದರು.