Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅನ್ನದಾತರ 'ಕರ್ನಾಟಕ ಬಂದ್' ಗೆ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಂಬಲ

ಸರ್ಕಾರ ಶೀಘ್ರ ಅಗತ್ಯ ಕ್ರಮ ಕೈಗೊಂಡು ನೆಗಿಲಯೋಗಿಗಳಿಗೆ ಅನುಕೂಲ ಮಾಡಿಕೊಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಆಗ್ರಹ

ಮೂಡಲಗಿ :  ಕರ್ನಾಟಕ ರಾಜ್ಯ  ರೈತ ಸಂಘ ಮತ್ತು ಹಸಿರು  ಸೇನೆಯು ನಾಳೆ ರಾಜ್ಯದಾದ್ಯಂತ ಸ್ವಯಂ ಪ್ರೇರಿತವಾಗಿ  ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ರೈತರ  ಹೋರಾಟಕ್ಕೆ ಅರಭಾವಿ  ಶಾಸಕ ಮತ್ತು ಬೆಮುಲ್  ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು  ಬೆಂಬಲ ವ್ಯಕ್ತಪಡಿಸಿದ್ದಾರೆ. 

 

ಈ  ಬಗ್ಗೆ ಶುಕ್ರವಾರದಂದು  ಮಾಧ್ಯಮಗಳಿಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ನಾಳೆ ಶನಿವಾರದಂದು   ನಡೆಯುವ  'ಕರ್ನಾಟಕ ಬಂದ್' ನ್ನು ಶಾಂತಿಯುತವಾಗಿ ನಡೆಸುವಂತೆ ಅವರು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ಕಬ್ಬಿನ  ಎಫ್ಆರ್ಪಿ ದರವನ್ನು ಹೆಚ್ಚಿಸುವ ಸಂಬಂಧ ರೈತರು ಪಕ್ಷಾತೀತವಾಗಿ ಹೋರಾಟವನ್ನು  ಮಾಡಿಕೊಂಡು ಬರುತ್ತಿದ್ದಾರೆ. ರೈತರು ನಡೆಸುತ್ತಿರುವ ನ್ಯಾಯಯುತ ಬೇಡಿಕೆಗಳಿಗೆ ಬಾಲಚಂದ್ರ ಜಾರಕಿಹೊಳಿಯವರು ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ. 

 

ನಾವು  ಮೊದಲಿನಿಂದಲೂ ರೈತರ ಪರವಾಗಿದ್ದೇವೆ.  ರೈತರ ಕಾಳಜಿ ನಮಗೆ ಮುಖ್ಯವಾಗಿದೆ.  ರೈತರ ಬೇಡಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಡೇರಿಸಬೇಕು.  ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ,   ಸಹಕಾರ ಸಚಿವ ಲಕ್ಷ್ಮಣ ಸವದಿ ಅವರಲ್ಲಿಯೂ  ಸಹ   ರೈತರ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸುವಂತೆ  ವಿನಂತಿ ಮಾಡಿಕೊಳ್ಳುವುದಾಗಿ ಅವರು ತಿಳಿಸಿದರು. 

 

ಕಬ್ಬಿನ  ಎಫ್.ಆರ್.ಪಿ  ಪ್ರತಿ ಟನ್ ಗೆ 5500 ರೂ (ಇದರಲ್ಲಿ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ಸಾವಿರ ರೂಪಾಯಿ ಸೇರಿ),  ಪ್ರಸ್ತುತ ಮಾರುಕಟ್ಟೆಯಲ್ಲಿ ಸಕ್ಕರೆ ದರವು 31 ರೂ  ಪ್ರತಿ ಕಿಲೋಗೆ ಇದ್ದು, ಇದನ್ನು ಎಂಎಸ್ಪಿ 60 ರೂಪಾಯಿ ಗೆ ಏರಿಸಬೇಕು. ರಾಜ್ಯದಲ್ಲಿ   ಉತ್ಪಾದನೆಯಾಗುವ ಎಥೆನಾಲ್ ತೂಕ ಮತ್ತು ರಿಕವರಿ  ಪಾರದರ್ಶಕ ವ್ಯವಸ್ಥೆಯನ್ನು ತರುವಂತೆ ರೈತ ಸಂಘಟನೆಗಳು  ಕೇಂದ್ರ ಮತ್ತು ರಾಜ್ಯ  ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.  ರಾಜ್ಯದಲ್ಲಿ ಈಗಾಗಲೇ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲು ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಈಗ ಕಾರ್ಖಾನೆಗಳನ್ನು ಪ್ರಾರಂಭಿಸಿದರೆ ಎಲ್ಲರಿಗೂ ಒಳ್ಳೆಯದಾಗಲಿದೆ. ಮತ್ತಷ್ಟು ತಡವಾದರೆ   ಪರಿಸ್ಥಿತಿಯು ಹದಿಗೆಡಬಹುದು.  ಮೊದಲೇ ರಾಜ್ಯದಲ್ಲಿ ಭೀಕರ ಬರಗಾಲವಿದೆ. ಸರಿಯಾಗಿ ಮಳೆಯಾಗಿಲ್ಲ. ಎಲ್ಲೆಡೆ ಕುಡಿಯುವ ನೀರಿಗಾಗಿ ಆಹಾಕಾರವುಂಟಾಗುತ್ತಿದೆ. ಸಮರ್ಪಕ ವಿದ್ಯುತ್ ಸೌಲಭ್ಯವಿಲ್ಲ. ಈ ಸಲ ಕಬ್ಬಿನ ಇಳುವರಿ ಅಂದುಕೊಂಡಷ್ಟು ಬಂದಿಲ್ಲ.  ಕಬ್ಬು ಕಟಾವು ನಂತರ  ತೋಡ್ನಿಯಿಂದ ಅನೇಕ  ಸಮಸ್ಯೆಗಳು  ರೈತರಿಗೆ ಎದುರಾಗಬಹುದು. ಲಗಾನೆಯಿಂದ ರೈತರಿಗೆ  ಹಾನಿಯಾಗಬಹುದು.  

 

ಆದ್ದರಿಂದ  ಸರ್ಕಾರವು  ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು  ರೈತರ ಮಧ್ಯ ಸಮನ್ವಯ ಸಾಧಿಸಲು  ಮತ್ತೊಮ್ಮೆ ಸಭೆಯನ್ನು ಆಯೋಜಿಸಬೇಕು. ಈ ಮೂಲಕ ಅನ್ನದಾತರ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ,   ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡು ಜಗಕೆ ಅನ್ನ ನೀಡುವ ನೇಗಿಲಯೋಗಿಗಳಿಗೆ ಅನುಕೂಲ ಮಾಡಿಕೊಡುವಂತೆ   ಶಾಸಕ ಬಾಲಚಂದ್ರ ಜಾರಕಿಹೊಳಿ ಆಗ್ರಹಿಸಿದ್ದಾರೆ.  

 

ಕರ್ನಾಟಕ  ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ  ಅಧ್ಯಕ್ಷ ಚೂನಪ್ಪ ಪೂಜೇರಿ ಮತ್ತು ಶಶಿಕಾಂತ ಗುರೂಜಿಯವರ  ನೇತೃತ್ವದಲ್ಲಿ ನಾಳೆ ನಡೆಯುವ ಅನ್ನದಾತರ ಹೋರಾಟಕ್ಕೆ ಸಕಲ ರೀತಿಯಿಂದಲೂ ಬೆಂಬಲವನ್ನು   ನೀಡುತ್ತಿರುವುದಾಗಿ  ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಘೋಷಿಸಿದ್ದಾರೆ. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅನ್ನದಾತರ 'ಕರ್ನಾಟಕ ಬಂದ್' ಗೆ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಂಬಲಆರೋಗ್ಯಪೂರ್ಣ ಬೆಳವಣಿಗೆಗೆ ಮಕ್ಕಳು ದಿನವೂ ಮೊಟ್ಟೆ ಸೇವಿಸಬೇಕು: ಶಿವಚಂದ್ರ ಕತ್ನಳ್ಳಿಇಂಡಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಭಸ್ಮ; ಸಂಕಷ್ಟದಲ್ಲಿರುವ ರೈತರಿಗೆ ವಿಶೇಷ ಪ್ಯಾಕೇಜ್‌ಗೆ ಬಿ.ಡಿ. ಪಾಟೀಲ ಆಗ್ರಹಗೋರನಾಳದಲ್ಲಿ ಶ್ರೀ ಬೀರಲಿಂಗೇಶ್ವರ-ಜೆಟ್ಟಿಂಗೇಶ್ವರ ಜಾತ್ರೆ: ಧರ್ಮಸಭೆ ಉದ್ಘಾಟಿಸಿದ ಬಿ.ಡಿ. ಪಾಟೀಲಹಿರಿಯ ರಾಜಕಾರಣಿ ಶಿವಾನಂದ ಕೌಜಲಗಿ ಅವರಿಗೆ ಶಾಸಕ ಬಾಬಾಸಾಹೇಬ ಗೌರವ ನಮನಹಿರಿಯ ರಾಜಕಾರಣಿ ಶಿವಾನಂದ ಕೌಜಲಗಿ ಅವರಿಗೆ ಚನ್ನರಾಜ ಹಟ್ಟಿಹೊಳಿ ಗೌರವ ನಮನನೇಮಕಾತಿಯಲ್ಲಿ ಕರಾಟೆ–ಯೋಗ ಶಿಕ್ಷಕರನ್ನು ಪ್ರತ್ಯೇಕವಾಗಿ ಪರಿಗಣಿಸಲು ಆಗ್ರಹ – ಪತ್ರ ಬರೆಯುವ ಭರವಸೆ ನೀಡಿದ ಡಾ. ನಾಗಲಕ್ಷ್ಮಿ ಚೌಧರಿಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆಹಿರಿಯ ರಾಜಕಾರಣಿ ಶಿವಾನಂದ ಕೌಜಲಗಿ ಅವರ ನಿಧನಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪಹಿರಿಯ ರಾಜಕಾರಣಿ ಕೌಜಲಗಿ ನಿಧನಕ್ಕೆ ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ದೊಡ್ಡಗೌಡರ ಸಂತಾಪ