ಬೈಲಹೊಂಗಲ., ಹಿರಿಯ ರಾಜಕಾರಣಿ, ಕೆ ಎಲ್ ಇ ಮಾಜಿ ಅಧ್ಯಕ್ಷರು, ಮಾಜಿ ಸಚಿವ ಶಿವಾನಂದ ಕೌಜಲಗಿ ಅವರು ಇಂದು ನಿಧನರಾದ ಪ್ರಯುಕ್ತ ಇಂದು ಬೈಲಹೊಂಗಲ ಅವರ ಮನೆಗೆ ಬಿ ಡಿ ಸಿ ಸಿ ಬ್ಯಾಂಕ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹಾಗೂ ಮಾಜಿ ಶಾಸಕ ಹಾಗೂ ಬಿ ಡಿ ಸಿ ಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಅವರು ಭೇಟಿ ಮಾಡಿ ದಿ. ಶಿವಾನಂದ ಕೌಜಲಗಿ ಅವರ ಅಂತಿಮ ದರ್ಶನ ಪಡೆದು ಅವರ ಪುತ್ರ ಶಾಸಕ ಮಹಾಂತೇಶ ಕೌಜಲಗಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.