ಇಂಡಿ : ತಾಲ್ಲೂಕಿನ ಗೋರನಾಳ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಹಾಗೂ ಶ್ರೀ ಜೆಟ್ಟಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯನ್ನು ಜೆಡಿಎಸ್ ಮುಖಂಡರಾದ ಬಿ.ಡಿ. ಪಾಟೀಲರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, "ಕಲಿಯುಗದಲ್ಲಿ ಮಹಿಮಾಂತಕರ ಸ್ಮರಣೆ ಹಾಗೂ ಜಾತ್ರೆ, ಉತ್ಸವಗಳು ಮನಶುದ್ಧಿಗೆ ಉತ್ತಮ ಮಾರ್ಗಗಳಾಗಿವೆ. ಇವು ಮನು?ನ ಮನಸ್ಸಿನ ಚಂಚಲತೆಯನ್ನು ನಿವಾರಿಸಿ, ಧರ್ಮದ ಹಾದಿಯಲ್ಲಿ ನಡೆಯಲು ಪ್ರೇರಣೆ ನೀಡುತ್ತವೆ. ಇಂತಹ ಮಹಿಮಾಂತಕರಾದ ಶ್ರೀ ಬೀರಲಿಂಗೇಶ್ವರ ಹಾಗೂ ಶ್ರೀ ಜೆಟ್ಟಿಂಗೇಶ್ವರರು ಸರ್ವರ ಬಾಳಿನಲ್ಲಿ ಬೆಳಕಾಗಲಿ. ಜಾತ್ರೆ ಮತ್ತು ಉತ್ಸವಗಳು ಗ್ರಾಮದಲ್ಲಿ ಸೌಹಾರ್ದತೆ, ಭಕ್ತಿ ಹಾಗೂ ಸಾಮರಸ್ಯವನ್ನು ಮೂಡಿಸಲಿ" ಎಂದು ಆಶಿಸಿದರು.
ಕಾರ್ಯಕ್ರಮಕ್ಕೆ ಗೋಳಸಾರದ ಶ್ರೀ ಅಭಿನವ ಪುಂಡಲಿಂಗ ಮಹಾರಾಜರು ಹಾಗೂ ಬಂಥನಾಳದ ಶ್ರೀಗಳು ನೇತೃತ್ವ ವಹಿಸಿದ್ದರು. ಅತಿಥಿಗಳಾಗಿ ಶೀಲವಂತ ಉಮರಾಣಿ, ಜಟ್ಟೆಪ್ಪ ರವಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.