ಇಂಡಿ: ಸದೃಢ ಆರೋಗ್ಯಕ್ಕಾಗಿ ಮಕ್ಕಳು ಪ್ರತಿನಿತ್ಯ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ಸೇವಿಸಬೇಕು ಜತೆಗೆ ಸದೃಢ ಮನಸ್ಸಿನೊಂದಿಗೆ ಉತ್ತಮ ಶಿಕ್ಷಣ ಪಡೆಯಬೇಕು ಎಂದು ಜಿಲ್ಲಾ ಪಂಚಾಯಿತಿಯ ಜಿಲ್ಲಾ ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಶಿವಚಂದ್ರ ಕತ್ನಳ್ಳಿ ಹೇಳಿದರು.
ಗುರುವಾರ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಸಮುದಾಯದತ್ತ ಶಾಲಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮಧ್ಯಾನ್ಹ ಬಿಸಿಯೂಟದಲ್ಲಿ ಮೊಟ್ಟೆ ಸೇವಿಸುವ ಮಕ್ಕಳ ಪ್ರಮಾಣ ಪ್ರತಿಶತ ೪೯ ರಷ್ಟಿದೆ. ಬಾಳೆಹಣ್ಣು ಸೇವಿಸುವ ಮಕ್ಕಳ ಪ್ರಮಾಣ ಪ್ರತಿಶತ ೫೧ ರಷ್ಟಿದೆ. ಸರ್ಕಾರದ ನಿರ್ದೇಶನದಂತೆ ಮೊಟ್ಟೆ ಸೇವಿಸುವ ಮಕ್ಕಳ ಪ್ರಮಾಣ ಪ್ರತಿಶತ ೮೦ ರ? ಆಗಬೇಕಿದೆ. ಅದಕ್ಕೆ ಮಕ್ಕಳು ಪ್ರತಿನಿತ್ಯ ಮೊಟ್ಟೆ ಸೇವಿಸಲು ಮುಂದಾಗಬೇಕು ಎಂದು ಹೇಳಿದರು.
ತಾಲೂಕ ಅಕ್ಷರ ದಾಸೋಹ ಅಧಿಕಾರಿ ಸುಜಾತಾ ಪೂಜಾರಿ ಮಾತನಾಡಿ, ಶಿಕ್ಷಕರು ಮಕ್ಕಳ ಮನೋಮಟ್ಟಕ್ಕಿಳಿದು ಬೋಧನೆ ಮಾಡಬೇಕು. ಮಗು ಕೇಂದ್ರಿತ ಶಿಕ್ಷಣವಾದಾಗ ಮಾತ್ರ ಶಿಕ್ಷಣ ಇಲಾಖೆ, ಸಂವಿಧಾನದ ಆಶಯ ಈಡೇರಿಸಿದಂತಾಗುತ್ತದೆ ಎಂದರು.
ಕೆಬಿಎಸ್ ಮುಖ್ಯ ಶಿಕ್ಷಕ ಎಸ್ ಎಸ್ ಬಡಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಸವಾಂಗೀಣ ಬೆಳವಣಿಗೆಗೆ ಸಮುದಾಯದ ಪಾತ್ರ ಮುಖ್ಯವಾಗಿದ್ದು, ಶಾಲೆಯ ಏಳ್ಗೆಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಶಿಕ್ಷಕ ಸಂತೋ? ಬಂಡೆ ಪ್ರಾಸ್ತಾವಿಕವಾಗಿ ಮಾತನಾಡಿ,
ಮಕ್ಕಳ ಕಲಿಕಾ ಪ್ರಗತಿ, ಶೈಕ್ಷಣಿಕ ಗುಣಮಟ್ಟ, ಕಿರು ಪರೀಕ್ಷೆ ಮತ್ತು ಅರ್ಧವಾರ್ಷಿಕ ಪರೀಕ್ಷೆಗಳ ಫಲಿತಾಂಶಗಳ ಕುರಿತು ಪೋ?ಕರೊಂದಿಗೆ ಚರ್ಚಿಸುವುದು ಈ ಕಾರ್ಯಕ್ರಮದ ಉದ್ಧೇಶವಾಗಿದೆ ಎಂದು ಹೇಳಿದರು.
ಹಿರೇರೂಗಿ ಕ್ಲಸ್ಟರ್ ಸಿ ಆರ್ ಪಿ ಮಂಜುನಾಥ ತೇಲಿ, ಕೆಜಿಎಸ್ ಮುಖ್ಯ ಶಿಕ್ಷಕ ಎಸ್ ಬಿ ಕೋಳಿ, ಯುಬಿಎಸ್ ಮುಖ್ಯ ಶಿಕ್ಷಕ ಕೆ ಐ ಮಕಾನದಾರ, ಬಸವರಾಜ ಗೋರನಾಳ, ಶಿಕ್ಷಕರಾದ ಜೆ ಎಂ ಪತಂಗಿ, ಶಿವಕಾಂತ ತಳವಾರ, ಅನಿಲ ಪತಂಗಿ, ಶಾಂತೇಶ ಹಳಗುಣಕಿ ಸೇರಿದಂತೆ ಪಾಲಕರು, ಶಿಕ್ಷಕರನೇಕರು ಉಪಸ್ಥಿತರಿದ್ದರು. ಶಿಕ್ಷಕ ಶ್ರೀಧರ ಹಿಪ್ಪರಗಿ ಸ್ವಾಗತಿಸಿ ನಿರೂಪಿಸಿದರು.