ಹಸಿರು ಕ್ರಾಂತಿ ವರದಿ ಬೆಳಗಾವಿ
ಹೆತ್ತವರ ತ್ಯಾಗ ಮತ್ತು ಋಣವನ್ನು ಮರೆಯಬಾರದು. ತಂದೆ-ತಾಯಿಗಳಿಗೆ ವಯಸ್ಸಾದಾಗ ಅವರ ಆರೈಕೆ ಮಾಡುವುದು ಮಕ್ಕಳ ನೈತಿಕ ಕರ್ತವ್ಯ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಾರಿಹಾಳ ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ಹೇಳಿದರು.
52ನೇ ಜನ್ಮದಿನ ನಿಮಿತ್ತ ನಗರದ ಹೊರವಲಯದಲ್ಲಿರುವ ನಾಗನೂರು ಶಿವಬಸವ ಸ್ವಾಮೀಜಿ ವೃದ್ಧಾಶ್ರಮಕ್ಕೆ ದಂಪತಿ ಸಮೇತ ಭೇಟಿ ನೀಡಿ ಅಲ್ಲಿನ ಹಿರಿಯರೊಂದಿಗೆ ಉಪಾಹಾರ ಸೇವಿಸಿ, ಬಟ್ಟೆಗಳನ್ನು ವಿತರಿಸಿ ಮಾತನಾಡಿದ ಅವರು, ಹೆತ್ತವರನ್ನು ಪ್ರೀತಿ, ಗೌರವ ಮತ್ತು ಕಾಳಜಿಯಿಂದ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಕ್ಕಳಿಗಾಗಿ ಬದುಕು ಸವೆಸಿದ ತಂದೆ-ತಾಯಿಗಳು ವೃದ್ಧಾಶ್ರಮಗಳಲ್ಲಿ ಆಶ್ರಯ ಪಡೆಯುವ ಪರಿಸ್ಥಿತಿ ಪ್ರಜ್ಞಾವಂತ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡುತ್ತದೆ ಎಂದರು.
ಮನೆಯಲ್ಲಿ ಹಿರಿಯರು ಇದ್ದರೇ ಆ ಮನೆಯೇ ನಿಜವಾದ ಸಂಪತ್ತಿನಿಂದ ಕೂಡಿರುತ್ತದೆ. ಹತ್ತು ಮಕ್ಕಳನ್ನು ಸಾಕಿ, ಸಲುಹಿ, ಅವರಿಗೆ ಶಿಕ್ಷಣ ಕೊಡಿಸಿ ಉನ್ನತ ಸ್ಥಾನಕ್ಕೆ ತಲುಪಿಸುವ ಶಕ್ತಿ ತಂದೆ-ತಾಯಿಗಿದೆ. ತಮ್ಮ ಸುಖ, ಸಂತೋಷಗಳನ್ನು ಬದಿಗಿಟ್ಟು ಮಕ್ಕಳ ಭವಿಷ್ಯಕ್ಕಾಗಿ ಇಡೀ ಜೀವನವನ್ನೇ ಸವೆಸಿದ ತಂದೆ-ತಾಯಿಗಳು ಮಕ್ಕಳು ವಿದ್ಯಾವಂತರಾಗಿ ವಿದೇಶಗಳಿಗೆ ಹಾರಿದ ನಂತರ ವೃದ್ಧಾಶ್ರಮಗಳಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಜನ್ಮದಿನದ ನಿಮಿತ್ತ ಮಾರಿಹಾಳ, ಸುಳೆಭಾವಿ, ಮೊದಗಾ ಹಾಗೂ ಬೆಳಗಾವಿ ನಗರದಲ್ಲಿ ಅವರ ಅಭಿಮಾನಿಗಳು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನ್ಮದಿನಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಎಫ್.ಎಸ್.ಸಿದ್ದನಗೌಡರ, ನೀತಿನ ಚೌಗಲೆ, ಬಸವರಾಜ ರೇವಡಿ, ಡಾ.ಗುರುಪ್ರಸಾದ ಕೋತಿನ, ವೀರಭದ್ರ ಪೂಜೇರ, ಉಮೇಶ ಮಲ್ಲನ್ನವರ, ವಿನಯ್ ಪಚ್ಚಾಪುರ, ಸಿದ್ದಯ್ಯ ಪೂಜಾರ, ಫಕೀರಪ್ಪ ತಳವಾರ, ಮಾಂತೇಶ ಪೂಜಾರ, ಅಪ್ಪನ ಹಿತ್ತಲಮನಿ, ನಾರಾಯಣ ಜಾನಕಿ, ವಿಠ್ಠಲ ಕಲ್ಲನ್ನವರ, ಪ್ರಶಾಂತ ಸೋಗಲಿ, ರಮೇಶ ಸರೋದೆ, ಶಿವು ಸೊಲಬನ್ನವರ, ಮಾರುತಿ ಮುಗಳಿ, ವಿಜಯ ಜಾಧವ, ಗುರುನಾಥ ಅತ್ತೆಂಗೆಹಾಳ, ಮಲ್ಲೇಶಿ ಕಲ್ಲನ್ನವರ, ಬಾಳೆಶಿ ಕಲ್ಲನ್ನವರ, ಈರಯ್ಯ ಅಲ್ಲಯ್ಯನವರಮಠ, ಕಾರ್ತಿಕ ಮಾದಮ್ಮನವರ ಸೇರುದಂತೆ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.
ಜನ್ಮದಿನವೆಂದರೆ ಕೇವಲ ವೈಯಕ್ತಿಕ ಸಂಭ್ರಮವಲ್ಲ, ನಮ್ಮ ಸಂತೋಷವನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಅವಕಾಶ. ಹಿರಿಯರೊಂದಿಗೆ ಸಮಯ ಕಳೆಯುವುದು, ಅವರ ಮುಖದಲ್ಲಿ ಮಂದಹಾಸ ಮೂಡಿಸುವುದು ಮತ್ತು ಅವರ ಆಶೀರ್ವಾದ ಪಡೆಯುವುದು ನನಗೆ ನಿಜವಾದ ಸಂತೋಷ ನೀಡಿದೆ. ಸಮಾಜದಲ್ಲಿ ಪ್ರೀತಿ, ಮಾನವೀಯತೆ ಮತ್ತು ಪರಸ್ಪರ ಕಾಳಜಿಯ ಮೌಲ್ಯಗಳು ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಈ ದಿನವನ್ನು ಹಿರಿಯರೊಂದಿಗೆ ಆಚರಿಸಿದ್ದೇನೆ.
-ಮಲ್ಲಿಕಾರ್ಜುನ ಮಾದಮ್ಮನವರ, ಅಧ್ಯಕ್ಷರು, ಪಿಕೆಪಿಎಸ್ ಮಾರಿಹಾಳ.
ಕಷ್ಟಗಳನ್ನು ಮೆಟ್ಟಿ ನಿಂತು, ಕಾರ್ಮಿಕನಾಗಿ ಜೀವನ ಆರಂಭಿಸಿ, ಸ್ವಂತ ಉದ್ಯಮದ ಮೂಲಕ ಆರ್ಥಿಕವಾಗಿ ಸಬಲರಾಗಿ, ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಮಲ್ಲಿಕಾರ್ಜುನ ಮಾದಮ್ಮನವರವರು ತಮ್ಮ ಜನ್ಮದಿನವನ್ನು ಸಮಾಜಮುಖಿ ಕಾರ್ಯದ ಮೂಲಕ ಸ್ಮರಣಿಯವಾಗಿಸಿಕೊಂಡರು.
ಮಲ್ಲಿಕಾರ್ಜುನ ಮಾದಮ್ಮನವರ ಹಾಗೂ ಅವರ ಪತ್ನಿಯಾದ ಉಮಾ ಸೇರಿಕೊಂಡು ಹಿರಿಯರೊಂದಿಗೆ ಉಪಾಹಾರ ಸೇವಿಸಿ, ಹೊಸ ಬಟ್ಟೆಗಳನ್ನು ವಿತರಿಸುವ ಮೂಲಕ ಅವರು ಹಿರಿಯರ ಬಗ್ಗೆ ಗೌರವ, ಕಾಳಜಿ ಮತ್ತು ಸಾಮಾಜಿಕ ಜವಾಬ್ದಾರಿಯ ಸಂದೇಶವನ್ನು ಇಂತಹ ಯಾಂತ್ರಿಕ ಕಾಲದಲ್ಲಿ ಸಾರಿದ್ದು ಮನ ಮುಟ್ಟುವಂತಿದೆ.
-ಎಫ್.ಎಸ್.ಸಿದ್ದನಗೌಡರ, ರಾಜ್ಯ ಬಿಜೆಪಿ ಮಾಧಮ ಸಮಿತಿ ಸದಸ್ಯರು.