LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

*ಬುದ್ಧನ ತತ್ವಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ರಾಕೇಶ ಮೈಗೂರ*

"ಕನಕ ನಗರದ ಬುದ್ಧ ವಿಹಾರದಲ್ಲಿ ‘ಬುದ್ಧ ಬೆಳದಿಂಗಳು’ ಕಾರ್ಯಕ್ರಮ"

ಅಥಣಿ: ಗೌತಮ ಬುದ್ಧರು ಜಗತ್ತಿಗೆ ಸಾರಿದ ಶಾಂತಿ, ಸಮಾನತೆ, ಕರುಣೆ, ಪ್ರೀತಿ ಹಾಗೂ ಸಹಬಾಳ್ವೆಯ ತತ್ವಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ. ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದಲ್ಲಿ ಬುದ್ಧನ ತತ್ವಸಿದ್ಧಾಂತಗಳನ್ನು ವಿಚಾರಧಾರೆಗಳನ್ನು ಅಳವಡಿಸಿಕೊಂಡು, ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಗೌರವದಿಂದ ಬದುಕಬೇಕು. ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಥಣಿ ತಾಲೂಕಾ ಅಧ್ಯಕ್ಷ ರಾಕೇಶ ಮೈಗೂರ ಹೇಳಿದರು.
  ಅವರು ಪಟ್ಟಣದ ಕನಕ ನಗರದಲ್ಲಿರುವ ಬುದ್ಧ ವಿಹಾರದಲ್ಲಿ ಆಯೋಜಿಸಲಾಗಿದ್ದ ‘'ಬುದ್ಧ ಬೆಳದಿಂಗಳು'’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿ ಸಮಾನತೆ ಮತ್ತು ಸಂಸ್ಕಾರ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಬೇಕು
ಬುದ್ಧನ ವಿಚಾರಧಾರೆಗಳು ಮನುಷ್ಯನ ಬದುಕಿಗೆ ಸರಿಯಾದ ದಾರಿಯನ್ನು ತೋರಿಸುತ್ತವೆ. ಪ್ರತಿಯೊಬ್ಬರೂ ಬುದ್ಧನ ಸಂದೇಶಗಳನ್ನು ಅರಿತು, ಅವುಗಳನ್ನು ತಮ್ಮ ನಿತ್ಯಜೀವನದಲ್ಲಿ ಪಾಲಿಸುವ ಮೂಲಕ ಶಾಂತಿಯುತ ಹಾಗೂ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.
ಈ ವೇಳೆ ಕನಕನಗರ ಬುದ್ಧ ವಿಹಾರ ಕಮಿಟಿ ಅಧ್ಯಕ್ಷ ಪರುಶುರಾಮ ಚುಬಚಿ ಮಾತನಾಡಿ ಬುದ್ಧನ ತತ್ವಸಿದ್ಧಾಂತಗಳು ಇಂದಿನ ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಮಹತ್ವದ ಮಾರ್ಗದರ್ಶನ ನೀಡುತ್ತವೆ. ಪ್ರೀತಿ, ಕರುಣೆ, ಅಹಿಂಸೆ, ಸಮಾನತೆ, ಸಹನೆ ಮತ್ತು ಸತ್ಯದ ಹಾದಿಯಲ್ಲಿ ಸಾಗುವಂತೆ ಬುದ್ಧನ ಸಂದೇಶಗಳು ಮನುಕುಲಕ್ಕೆ ದಾರಿದೀಪವಾಗಿವೆ. ಬುದ್ಧನ ಶಾಂತಿಯ ಸಂದೇಶವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾಗಿದೆ ಎಂದರು.
ಈ ವೇಳೆ ನಾಗರಾಜ್ ದಾಸರ ಮಾತನಾಡಿ ಬುದ್ಧನ ಚಿಂತನೆ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯ ನೆಲೆಸಲು ಸಾಧ್ಯ. ಬುದ್ಧನ ಚಿಂತನೆಗಳು ಕೇವಲ ಉಪದೇಶಗಳಲ್ಲ, ಅವು ಬದುಕನ್ನು ಸುಂದರಗೊಳಿಸುವ ಸನ್ಮಾರ್ಗಗಳಾಗಿವೆ. ಪ್ರತಿಯೊಬ್ಬರೂ ಬುದ್ಧನ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಮಾನವೀಯತೆ ಮತ್ತು ಸಹೋದರತ್ವದ ಮೌಲ್ಯಗಳೊಂದಿಗೆ ಎಲ್ಲರೂ ಬದುಕಬೇಕು. ಬುದ್ಧನ ಸಂದೇಶಗಳು ಸಾರ್ವಕಾಲಿಕ ಮೌಲ್ಯವನ್ನು ಹೊಂದಿದೆ ಎಂದರು.
ಈ ವೇಳೆ ಬುದ್ಧ ವಿಹಾರ ಕಮಿಟಿ ಅಧ್ಯಕ್ಷ ಪರುಶುರಾಮ ಚುಬಚಿ, ಆರ್. ಡಿ ದೊಡಮನಿ, ಬಾಹುಸಾಹೇಬ ದೊಡಮನಿ, ಸೋಮನಿಂಗ ನಡೋಣಿ, ಮಲ್ಲಪ್ಪ ಕಾಂಬಳೆ, ತುಕಾರಾಮ ಸೂರ್ಯವಂಶಿ, ಕೋಮಲ್ ಕಾಂಬಳೆ, ಸುಶಾಂತ್ ಪಟ್ಟಣ, ಶಿವಾನಂದ ದೊಡಮನಿ, ದಿಲೀಪ ನಡೋಣಿ, ಅಶೋಕ ಕುರಿ, ಉಮೇಶ ಶಿವಶರಣ, ಸುರೇಶ ಕಾಂಬಳೆ, ನಾಗರಾಜ್ ದಾಸರ, ಜಿ. ವಿ ದರೂರ, ಬಾಳೇಶ ಟೋಣಪಿ, ನ್ಯಾಯವಾದಿ ಭೀಮು ಕಾಂಬಳೆ, ವೇದಾ ಪಟ್ಟಣ. ಸೇರಿದಂತೆ ಹಲವಾರು ಬುದ್ಧ ಅನುಯಾಯಿಗಳು ಉಪಸ್ಥಿತರಿದ್ದರು. 
"ಮಾನವೀಯತೆಯ ಬೆಳಕು ಪಸರಿಸಲಿ" ಕನಕನಗರದ ಬುದ್ಧ ವಿಹಾರದಲ್ಲಿ ನಡೆದ  ‘ಬುದ್ಧ ಬೆಳದಿಂಗಳು’ ಕಾರ್ಯಕ್ರಮವು ಗೌತಮ ಬುದ್ಧರ ಜೀವನ, ಸಂದೇಶ ಹಾಗೂ ತತ್ವಸಿದ್ಧಾಂತಗಳನ್ನು ಸ್ಮರಿಸುವುದರ ಜೊತೆಗೆ ಜನರಲ್ಲಿ ಶಾಂತಿ, ಸಮಾನತೆ ಮತ್ತು ಮಾನವೀಯತೆಯ ಅರಿವು ಮೂಡಿಸುವ ಮಹತ್ವದ ಕಾರ್ಯಕ್ರಮವಾಗಿದೆ ಬುದ್ಧನ ಬೆಳಕಿನಂತಹ ವಿಚಾರಧಾರೆಗಳು ಪ್ರತಿಯೊಬ್ಬರ ಮನಸ್ಸಿನಲ್ಲಿ ನೆಲೆಸಿದಾಗ ಸಮಾಜದಲ್ಲಿ ಪ್ರೀತಿ ವಿಶ್ವಾಸ ಮತ್ತು ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಲು ಸಾಧ್ಯವಾಗುತ್ತದೆ...!

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧರ್ಮಸ್ಥಳ ಸಂಸ್ಥೆಯ ಸೇವಾ ಕಾರ್ಯಗಳು ಮಾದರಿ-ನಾಯಕನಿಸರ್ಗ ಸಂಪತ್ತೇ ನಿಜವಾದ ಐಶ್ವರ್ಯ; ಬದುಕನ್ನು ಆಸ್ವಾದಿಸುವುದೇ ಶ್ರೀಮಂತಿಕೆ: ಅಮೃತಾನಂದ ಸ್ವಾಮೀಜಿರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿ*ಬುದ್ಧನ ತತ್ವಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ರಾಕೇಶ ಮೈಗೂರ*ಹೆತ್ತವರ ತ್ಯಾಗ, ಋಣ ಮರೆಯಬಾರದುನವದುರ್ಗೆಯರ ಆರಾಧನೆಯಿಂದ ಜೀವನ ಪರಿಪೂರ್ಣಏಷ್ಯನ್ ಪ್ಯಾರಾ ಗೇಮ್ಸ್ ಕಂಚಿನ ಪದಕ ವಿಜೇತ ಸ್ವಾತಿಕ್ ಪಾಟೀಲಗೆ ಬೆಳಗಾವಿಯಲ್ಲಿ ಅದ್ಧೂರಿ ಸ್ವಾಗತಬ್ಯಾಲೆಟ್ ಪೇಪರ್ ಮೇಲೆ 4 ಜನ ಎನ್ ಡಿ ಎ ಅಭ್ಯರ್ಥಿಗಳು ಜಯ: ಸಿದ್ದನಗೌಡರ ಇಂದು ಸ್ತನ ಕ್ಯಾನ್ಸರ್ ಜಾಗೃತಿ: ರಾಗಾಆವಿವಿ ವಿನೂತನ ಹೆಜ್ಜೆಮೋಳೆ-ಕಾತ್ರಾಳ ರಸ್ತೆ ಅಭಿವೃದ್ಧಿಗೆ 1 ಕೋಟಿ ಅನುದಾನ; ಕಾಮಗಾರಿಗೆ ಶಾಸಕ ರಾಜು ಕಾಗೆ ಚಾಲನೆ..!