LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ನವದುರ್ಗೆಯರ ಆರಾಧನೆಯಿಂದ ಜೀವನ ಪರಿಪೂರ್ಣ

ನವದುರ್ಗೆಯರ ಕುರಿತು ಉಪನ್ಯಾಸದಲ್ಲಿ ಶಿಲ್ಪಾ ಭಸ್ಮೆ ಅಭಿಪ್ರಾಯ

ಹಸಿರು ಕ್ರಾಂತಿ ವರದಿ ವಿಜಯಪುರ
ವಿಜಯದಶಮಿ ಕೇವಲ ಪ್ರಾಪಂಚಿಕ ಸಂಭ್ರಮಕ್ಕೆ ಹಬ್ಬವಲ್ಲ, ಬದಲಾಗಿ ನಮ್ಮ ಆಂತರಿಕ ಅರಿವು ಜ್ಞಾನ, ತಿಳುವಳಿಕೆ ಗಂಭೀರ ನಡೆಗೆ ಈ ಒಂದು ನವದುರ್ಗೆಯರ ಆರಾಧನೆಯಂದರೇ ವಿಜಯದಶಮಿ ಕೈಗನ್ನಡಿಯಾಗಿದೆ. ನವದುರ್ಗೇರ ಆರಾಧನೆಯಿಂದ ಜೀವನ ಪರಿಪೂರ್ಣವಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮಿ ಹೇಳಿದರು.

ನಗರದ ಜ್ಞಾನ ಯೋಗಾಶ್ರಮದಲ್ಲಿ ಮಹಾನವಮಿ ಮಹತ್ವ ಸಾರಲು ಬುಧವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನವದುರ್ಗೆಯರು ಕುರಿತು ಉಪನ್ಯಾಸ  ಕಾಯ೯ಕ್ರಮದಲ್ಲಿ ಮಾತನಾಡಿದ ಅವರು, ರಾಮಾಯಣದಲ್ಲಿ 14 ವರ್ಷ ವನವಾಸಕ್ಕೆಂದು ರಾಮ-ಸೀತೆ ಲಕ್ಷ್ಮಣರು ಕಾಡಿಗೆ ತೆರಳಿದಂತಹ ಸಂದರ್ಭವನ್ನು ಹೇಳುತ್ತ ಸೀತೆಯನ್ನು ಅಪಹರಿಸಿದಂತಹ ರಾವಣನನ್ನು ಸದೆಬಡಿಯಲು ಶ್ರೀರಾಮರು ಶರಣ್ ನವರಾತ್ರಿ ವ್ರತವನ್ನು ಆಚರಿಸಿ, ವಿಜಯ ದಶಮಿ ಎಂದು ರಾವಣನನ್ನು ಸಂಹರಿಸಿದ್ದು ಒಂದು ಪೌರಾಣಿಕ ಘಟನೆ ಮಹತ್ವದ್ದು ಎಂದರು.

ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಗಂಟ, ಕೂಷ್ಮಾಂಡ, ಸ್ಕಂದ ಮಾತ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ, ಸಿದ್ದಿದಾತ್ರಿಯರನ್ನು ಸ್ಮರಿಸಿ 9 ದಿನಗಳ ನವದುರ್ಗೆಯರ ಪೂಜೆಯು ನಮ್ಮ ಆಂತರಿಕ ಅರಿವು ಜ್ಞಾನ ತಿಳುವಳಿಕೆಗೆ ಗಂಭೀರ ನಡೆಗೆ ಒಂದು ಕೈಗನ್ನಡಿಯಾಗಿದೆ. ವೇದೋಪನಿಷತ್ತುಗಳು ಭಗವದ್ಗೀತೆ ಪ್ರಕಾರ ಮನುಷ್ಯನ ಇಡೀ ವ್ಯಕ್ತಿತ್ವ ಮನಸ್ಸು 3 ಗುಣಗಳಿಂದ ಮಾಡಲ್ಪಟ್ಟಿದೆ. ತಮೋಗುಣ ರಜೋಗುಣ, ಸತ್ವಗುಣ ಈ 3 ಗುಣಗಳು ನಮ್ಮ ಜೀವನದ ಆಗುಹೋಗುಗಳಿಗೆ ಕಾರಣ ಹಾಗೂ ಅವುಗಳೆ ನಮ್ಮನ್ನು ನಿಯಂತ್ರಿಸುತ್ತವೆ. ನಮ್ಮ ಒಳ್ಳೆಯ ಮತ್ತು ಕೆಟ್ಟ ಗುಣಗಳ ನಡುವೆ ಪ್ರತಿ ದಿನ ನಡೆಯುವ ಹೋರಾಟವೇ ಈ ನವರಾತ್ರಿ, ಮಹಿಷಾಸುರನನ್ನು ಸದೆಬಡೆದಂತಹ ಚಾಮುಂಡೇಶ್ವರಿಯ ಮಹಿಮೆಯ ಕುರಿತಾಗಿ ವಿವರಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ವಿ.ಸಿ.ನಾಗಠಾಣ ಅಧ್ಯಕ್ಷತೆ ವಹಿಸಿದ್ದರು. ಬಸವಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

ಆದಿಶಕ್ತಿ ರೂಪವಾದಂತಹ ಪಾರ್ವತಿಯ ತಪಸ್ಸು, ಗುರಿಯಡೆಗಿನ ಗಮ್ಯಸ್ಥಾನ ತಾಳ್ಮೆ, ಸಂಯಮವನ್ನು ಈ ಒಂಬತ್ತು ದಿನಗಳಲ್ಲಿ ನವದುರ್ಗೆಯರ ಪೂಜೆಯಿಂದ ಹೊಸ ಬೆಳಕು ಪಡೆಯಬಹುದಾಗಿದೆ. ಪುರಾಣಗಳಲ್ಲಿ ನಾವು ಕೇಳುವ ಮಹಿಶಾಸುರ ಬೇರೆ ಯಾರು ಅಲ್ಲ, ಆತ ನಮ್ಮೊಳಗಿನ ಅಹಂಕಾರದ ಪ್ರತೀಕ. ನಾವು ಅಹಂಕಾರವನ್ನು ಶಮನಗೊಳಿಸುವ ದಿನಗಳೇ ನವರಾತ್ರಿಗಳು. ಶ್ರದ್ಧೆ ಮತ್ತು ಭಕ್ತಿಯಿಂದ ನಮ್ಮ ಜೀವನ ಪರಿಪೂರ್ಣವಾಗುತ್ತದೆ.
-ಶಿಲ್ಪಾ ಭಸ್ಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧರ್ಮಸ್ಥಳ ಸಂಸ್ಥೆಯ ಸೇವಾ ಕಾರ್ಯಗಳು ಮಾದರಿ-ನಾಯಕನಿಸರ್ಗ ಸಂಪತ್ತೇ ನಿಜವಾದ ಐಶ್ವರ್ಯ; ಬದುಕನ್ನು ಆಸ್ವಾದಿಸುವುದೇ ಶ್ರೀಮಂತಿಕೆ: ಅಮೃತಾನಂದ ಸ್ವಾಮೀಜಿರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿ*ಬುದ್ಧನ ತತ್ವಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ರಾಕೇಶ ಮೈಗೂರ*ಹೆತ್ತವರ ತ್ಯಾಗ, ಋಣ ಮರೆಯಬಾರದುನವದುರ್ಗೆಯರ ಆರಾಧನೆಯಿಂದ ಜೀವನ ಪರಿಪೂರ್ಣಏಷ್ಯನ್ ಪ್ಯಾರಾ ಗೇಮ್ಸ್ ಕಂಚಿನ ಪದಕ ವಿಜೇತ ಸ್ವಾತಿಕ್ ಪಾಟೀಲಗೆ ಬೆಳಗಾವಿಯಲ್ಲಿ ಅದ್ಧೂರಿ ಸ್ವಾಗತಬ್ಯಾಲೆಟ್ ಪೇಪರ್ ಮೇಲೆ 4 ಜನ ಎನ್ ಡಿ ಎ ಅಭ್ಯರ್ಥಿಗಳು ಜಯ: ಸಿದ್ದನಗೌಡರ ಇಂದು ಸ್ತನ ಕ್ಯಾನ್ಸರ್ ಜಾಗೃತಿ: ರಾಗಾಆವಿವಿ ವಿನೂತನ ಹೆಜ್ಜೆಮೋಳೆ-ಕಾತ್ರಾಳ ರಸ್ತೆ ಅಭಿವೃದ್ಧಿಗೆ 1 ಕೋಟಿ ಅನುದಾನ; ಕಾಮಗಾರಿಗೆ ಶಾಸಕ ರಾಜು ಕಾಗೆ ಚಾಲನೆ..!