ಹಸಿರು ಕ್ರಾಂತಿ ವರದಿ ತಾಳಿಕೋಟೆ
ಬೆಂಗಳೂರಿನ ಕರ್ನಾಟಕ ಮಾಧ್ಯಮ ಒಕ್ಕೂಟ(ರಿ)ದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಅ.೨೫ ರಂದು ಬೆಳಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಮಾಯಾಚಾರಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಪತ್ರಕರ್ತ ದಿ.ಡಾ.ನಾಗರಾಜ ಬಿ. ಜಮಖಂಡಿ ಸ್ಮರಣಾರ್ಥ ಪಟ್ಟಣದ ವಿಜಯ ಮಹಾಂತೇಶ ಮಂಗಳ ಕಾರ್ಯಾಲಯದ ದಾಸೋಹ ಭವನದಲ್ಲಿ ಮಾಧ್ಯಮ ರತ್ನ, ಮಾಧ್ಯಮ ಸಾಧಕ ರತ್ನ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.
ಜಮಖಂಡಿ ಪರಿವಾರ ಸಮಾಜ ಸೇವಾ ಪ್ರತಿಷ್ಠಾನ(ರಿ) ಮುದ್ದೇಬಿಹಾಳ ಹಾಗೂ ಡಾ.ನಾಗರಾಜ ಜಮಖಂಡಿ ಮೆಮೋರಿಯಲ್ ಟ್ರಸ್ಟ್ (ರಿ) ಬೆಂಗಳೂರು ಸಹಯೋಗದಲ್ಲಿ ಕೊಡಮಾಡುವ ಜೀವಮಾನ ಮಾಧ್ಯಮ ಸಾಧಕ ರತ್ನ ಪ್ರಶಸ್ತಿಗೆ ಬೆಳಗಾವಿಯ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಗಡಿ ಕನ್ನಡಿಗ ದಿನಪತ್ರಿಕೆಯ ಸಂಪಾದಕ ಮುರುಗೇಶ ಬಾಬುರಾವ ಶಿವಪೂಜಿ ಅವರನ್ನು ಆಯ್ಕೆ ಮಾಡಲಾಗಿದೆ. ಮಾಧ್ಯಮ ರತ್ನ ಪ್ರಶಸ್ತಿಗೆ ಸುವರ್ಣ ನ್ಯೂಸ್ ಮುಖ್ಯ ನಿರೂಪಕಿ ಶ್ವೇತಾ ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಮಾಧ್ಯಮ ಸಾಧಕ ರತ್ನ ಪ್ರಶಸ್ತಿಗೆ ಉದಯವಾಣಿ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಮಲ್ಲಿಕಾರ್ಜುನ ತಿಪ್ಪಾರ ಹಾಗೂ ವಿಜಯವಾಣಿ ಜಿಲ್ಲಾ ವಿಶೇಷ ವರದಿಗಾರ ಪರಶುರಾಮ ಬಾಸಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಒಕ್ಕೂಟದ ತಾಳಿಕೋಟೆ ತಾಲೂಕಾಧ್ಯಕ್ಷ ಅಂಭಾಜಿ ಘೋರ್ಪಡೆ ಹಾಗೂ ಮುದ್ದೇಬಿಹಾಳ ತಾಲೂಕಾಧ್ಯಕ್ಷ ಪರಶುರಾಮ ಕೊಣ್ಣೂರ ಮಾತನಾಡಿ, ಕುಂಟೋಜಿ ಗ್ರಾಮದ ಭಾವೈಕ್ಯತಾ ಸಂಸ್ಥಾನ ಮಠದ ಗುರು ಚನ್ನವೀರ ಶಿವಾಚಾರ್ಯರರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು, ತಾಳಿಕೋಟೆಯ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು ಸಾನ್ನಿಧ್ಯ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಮಾಧ್ಯಮ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಕನ್ನಡಪ್ರಭ ತಾಲೂಕು ವರದಿಗಾರ ನಾರಾಯಣ ಮಾಯಾಚಾರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಹನುಮಂತಗೌಡ ಪಾಟೀಲ, ಶಿವಶಂಕರಗೌಡ ಹಿರೇಗೌಡರ, ಮಲ್ಲಿಕಾರ್ಜುನ ಮದರಿ, ಸಿ.ಬಿ.ಅಸ್ಕಿ, ಗುರಣ್ಣ ತಾರನಾಳ, ಹಿರಿಯ ಪತ್ರಕರ್ತರಾದ ಜಿ.ಟಿ. ಘೋರ್ಪಡೆ, ಪ್ರಭುರಾಜ ಕಲಬುರ್ಗಿ, ರಾಯನಗೌಡ ತಾತರೆಡ್ಡಿ, ವೈ.ಎಚ್.ವಿಜಯಕರ, ಕಾಮರಾಜ ಬಿರಾದಾರ, ಸಿಕಂದರ್ ಜಾನ್ನೇಕರ ಹಾಗೂ ಬಸವರಾಜ ನಾಲತವಾಡ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಲ್ಲಾ ಪಂಚಾಯತಿ ಸಿಇಒ ಆನಂದ ಪ್ರಕಾಶ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಲೋಕಾಯುಕ್ತ ಡಿವೈಎಸ್ಪಿ ಮಲ್ಲಿಕಾರ್ಜುನ ತುಳಸಿಗೇರಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಡಿಎಚ್‌ಒ ಡಾ.ಮಲ್ಲನಗೌಡ ಬಿರಾದಾರ, ಹುಬ್ಬಳ್ಳಿ-ಧಾರವಾಡ ಪಾಲಿಕೆ ವಲಯ ಉಪ ಆಯುಕ್ತ ಅರವಿಂದ ಜಮಖಂಡಿ, ಕನ್ನಡಪ್ರಭ ಸ್ಥಾನಿಕ ಸಂಪಾದಕ ಬ್ರಹ್ಮಾನಂದ ಹಡಗಲಿ, ಹಸಿರು ಕ್ರಾಂತಿ ಸಂಪಾದಕ ಸಂಪತ್ತಕುಮಾರ ಮುಚಳಂಬಿ, ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಆಗಮಿಸಲಿದ್ದಾರೆ ಎಂದರು.
ಪತ್ರಕರ್ತರಿಗೆ ಪ್ರಶಸ್ತಿ ಗೌರವ
ಸಂಯುಕ್ತ ಕರ್ನಾಟಕದ ವಿಜಯಪುರ ಜಿಲ್ಲಾ ವರದಿಗಾರ ಶರಣು ಮರನೂರ, ಕನ್ನಡಪ್ರಭದ ನಾಲತವಾಡ ಗ್ರಾಮೀಣ ವರದಿಗಾರ ಯುನುಸ್ ಮೂಲಿಮನಿ, ಚಕ್ರವರ್ತಿ ನ್ಯೂಸ್ ಸಂಪಾದಕ ಹಾಗೂ ನ್ಯಾಯವಾದಿ ಚೇತನ ಶಿವಶಿಂಪಿ, ಉತ್ತರ ಟುಡೇ ನ್ಯೂಸ್ ಡಿಜಿಟಲ್ ಮೀಡಿಯಾ ಸುದ್ದಿ ಸಂಪಾದಕ ಚೇತನ ಕೆಂದೂಳಿ, ಉದಯಕಾಲ ದಿನಪತ್ರಿಕೆಯ ಜಿಲ್ಲಾ ವರದಿಗಾರ ಮಕಬೂಲ್ ಬನ್ನೆಟ್ಟಿ, ಭೀಮ ಸಂಸ್ಕೃತಿ ಸಂಪಾದಕ ಯಲ್ಲಾಲಿಂಗ ಪೂಜಾರಿ(ಮೌರ್ಯ) ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನವಾಗಲಿದೆ.
ಪತ್ರಿಕಾ ವಿತರಕರಿಗೂ ಪ್ರಶಸ್ತಿ
ಪತ್ರಿಕೋದ್ಯಮದ ಜೊತೆಗೆ ಪತ್ರಿಕಾ ವಿತರಣಾ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುತ್ತಿರುವ ಯುವಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರವಿ ಕುಂಬಾರ ಹಾಗೂ ಚಂದ್ರಶೇಖರ ಮುಕೀಹಾಳ ಅವರಿಗೆ ಅತ್ಯುತ್ತಮ ಪತ್ರಿಕಾ ವಿತರಕ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.
ವಿವಿಧ ಕ್ಷೇತ್ರಗಳ ಸಾಧಕರಿಗೆ ವಿಶೇಷ ಗೌರವ:
ಕಾರ್ಯಕ್ರಮದಲ್ಲಿ ಗುಪ್ತಚರ ಪೊಲೀಸ್ ಇಲಾಖೆಯ ಬೆಳಗಾವಿ ಡಿವೈಎಸ್ಪಿ ರಾಘವೇಂದ್ರ ಹವಾಲ್ದಾರ್, ವಾಣಿಜ್ಯೋದ್ಯಮ ಸಂಸ್ಥೆಯ ನಿರ್ದೇಶಕ ಶರಣು ಸಜ್ಜನ, ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯ ತಾಲೂಕು ವೈದ್ಯಾಧಿಕಾರಿ ಡಾ.ರಂಗನಾಥ ವೈದ್ಯ, ಪ್ರಗತಿಪರ ರೈತ ಹಿತಚಿಂತಕ ಅರವಿಂದ ಕೊಪ್ಪ, ಕರ್ನಾಟಕ ಕೋ-ಆಪ್ ಬ್ಯಾಂಕ್ ಉಪಾಧ್ಯಕ್ಷ ಶ್ರೀಕಾಂತ ಚಲವಾದಿ, ಮುದ್ದೇಬಿಹಾಳದ ಯುವ ವರದಿಗಾರ್ತಿ ಸ್ನೇಹಾ ಹಣಮಂತ ನಲವಡೆ ಹಾಗೂ ಕ್ರೀಡಾ ಸಾಧಕರಾದ ಕುಮಾರ ವಿಕ್ರಾಂತ ಮತ್ತು ಕುಮಾರಿ ಶಕುಂತಲಾ ಶಿವಕುಮಾರ ಶಾರದಳ್ಳಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುತ್ತದೆ.