ಇಂಡಿ : ನಮ್ಮ ದೇಶ ಸಂಪ್ರದಾಯಕ, ಸಂಸ್ಕೃತಿ ಆಧಾರದ ಮೇಲೆ ನಿಂತ, ಬೆಳೆದ ದೇಶ, ನಾವು ಸಂಪ್ರದಾಯಕತೆಯನ್ನು ಮರೆತ ಕಲೆಗಳನ್ನು ಮೆಲುಕು ಹಾಕಿಸುವ ಇಂತಹ ಕಲೆಗಳನ್ನು ನಮ್ಮ ಪ್ರತಿ ಕಾರ್ಯಮದಲ್ಲಿ ಪ್ರದರ್ಶನ ನಡೆಸಿದರೆ, ನಮ್ಮ ಯುವಕರು ಸುಧಾರಣೆ ಆಗೋದು ನಿಶ್ಚಿತ ಎಂದು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ರಾಘವೇಂದ್ರ ಕಾಪಸೆ ಮಾತನಾಡಿದರು.
ಇಂಡಿ ತಾಲೂಕಿನ ಅರ್ಜನಾಳ ಗ್ರಾಮದಲ್ಲಿ ಅಂಬಾ ಭವಾನಿ ಜಾತ್ರಾ ಕಮಿಟಿಯ ಆವರಣದಲ್ಲಿ ಬಿ. ಎಲ್. ಪಾಟೀಲ ಇವರ ನೇತೃತ್ವದಲ್ಲಿ ಆಯೋಜಿಸಲಾದ ಅಘೋರಿ ನೃತ್ಯ ಕಾರ್ಯಕ್ರಮ ಉದ್ದೇಸಿಸಿ ಅವರು ಮಾತನಾಡಿದರು.
ಅಘೋರಿ ನೃತ್ಯ ಇದೊಂದು ಸಂಸ್ಕೃತಿ, ಸಂಪ್ರದಾಯ, ಬೆಳೆಸುವ ಕಲೆ, ಇಂತಹ ಕಲೆಗಳನ್ನು ಮೆಲುಕು ಹಾಕೋದು ಕೇವಲ ಮೋಜು ಮಸ್ತಿ ಮಾಡೋದಕ್ಕಲ್ಲ, ಯುವಕರಲ್ಲಿ ಒಳ್ಳೆಯ ಭಾವನೆ, ಸಮಯ ಪ್ರಜ್ಞೆ ಮೂಡಿಸುವ ಸಲುವಾಗಿ ಎಂದರು.
ಅರಣ್ಯ ಇಲಾಖೆಯ ಧನರಾಜ ಮುಜಗೊಂಡ ಮಾತನಾಡಿ ಅರ್ಜನಾಳ ಗ್ರಾಮ ಆಧ್ಯಾತ್ಮಿಕ, ಸಂಸ್ಕೃತಿ, ಸಂಸ್ಕಾರಕ್ಕೆ ಮುನ್ನುಡಿ ಹಾಡಿದ ಗ್ರಾಮ, ಇಲ್ಲಿ ಜ್ಞಾನೇಶ್ವರ ಮಹಾರಾಜರು, ಸಂತರು, ಶಿಖಾಮಣಿಗಳು ನಡೆದಾಡಿದ ಗ್ರಾಮ, ಇಂತಹ ಗ್ರಾಮದಲ್ಲಿ ಯಾವುದೇ ಜಾತಿ, ಭೇದ ಭಾವವಿಲ್ಲದೆ ಎಲ್ಲರು ಒಂದಾಗಿ ಇಂತಹ ಸನಾತನ ಕಾರ್ಯಕ್ರಮ ಹಮ್ಮಿಕೊಂದಿದ್ದು ಹೆಮ್ಮೆಯ ವಿ?ಯ ಎಂದರು, ಎಲ್ಲರಿಗೂ ಕಲೆಯ ಹುಚ್ಚಿರುತ್ತೆ ಆದರೆ ಈ ಗ್ರಾಮದಲ್ಲಿ ಕಲಿಯುಗದ ಕಿತಾಪತಿ ಹುಟ್ಟಾಕುವ ಜಾನಪದ, ನಾಟಕವನ್ನು ಬಿಟ್ಟು ಗ್ರಾಮದ ಹಿರಿಯರು ಇಂತಹ ಇತಿಹಾಸದ ಮೆಲುಕು ನೋಟವನ್ನು ಪ್ರದರ್ಶನ ಮಾಡಿಸಿದ್ದು ನಮ್ಮೆಲ್ಲರ ಸೌಭಾಗ್ಯ ಎಂದರು, ಎಲ್ಲರು ಇಂದಿನ ಕಲೆಗಳನ್ನು ಬಿಟ್ಟು ನಮ್ಮ ಪೂರ್ವಜರ, ಸಂಸ್ಕೃತಿ, ಸಂಸ್ಕಾರ ಬೆಳೆಸುವ ಕಾರ್ಯಕ್ರಮ ಮಾಡೋಣ ಎಂದರು.
ಗ್ರಾಮದ ಹಿರಿಯರು ಬಿ. ಎಲ್. ಪಾಟೀಲ ಮಾತನಾಡಿ ಇದು ಕೇವಲ ಕಾರ್ಯಕ್ರಮ ಅಲ್ಲಾ, ನಮ್ಮ ಯುವಕರಲ್ಲಿ ಒಳ್ಳೆಯ ಬೆಳವಣಿಗೆ, ಸಂಸ್ಕಾರ, ಸಂಸ್ಕೃತಿ ಬೆಳೆಸುವ ನಿಟ್ಟಿನಿಂದ ಈ ಕಾರ್ಯಕ್ರಮ ಆಯೋಜಿಸಿದ್ದು, ದೇವರ ಪೂಜೆ ನಮ್ಮೆಲರ ಜೀವನದಲ್ಲಿ ಆಡಂಬರವಾಗಬಾರದು ಅದೊಂದು ಹಿರಿಕರ ಅಸೆ ಈಡೇರಿಸುವ ಕಾರ್ಯಕ್ರಮ ವಾಗಲಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರು ಶಬ್ಬೀರ ಮುಲ್ಲಾ ಮಾತನಾಡಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇದ್ದಾಗ ಮಾತ್ರ ಗ್ರಾಮ ಸುಖದಲ್ಲಿ ಇರಲು ಸಾಧ್ಯ, ಯಾವುದೇ ತರನಾದ ಯೋಚನೆ ಮೂಡಿಸುವ ಶಕುನಿಗಳ ಮಾತಿಗೆ ಮೊರೆ ಹೋಗದೆ, ಗ್ರಾಮದಲ್ಲಿ ಎಲ್ಲರು ಒಂದಾಗಿ, ಚಂದಾಗಿ ಎಲ್ಲಾ ಸಮುದಾಯದ ಕಾರ್ಯಕ್ರಮಗಳನ್ನು ಮಾಡೋಣ ಎಂದರು.
ದಿವ್ಯ ಸನಿಧ್ಯ ಶಂಕ್ರಯ್ಯ ಹಿರೇಮಠ್, ಬಾಪೂರಾಯ ಲೋಣಿ, ಪಿ. ಕೆ. ಪಿ. ಎಸ್. ಅಧ್ಯಕ್ಷರು ನಿರಂಜನ್ ಪೂಜಾರಿ, ಶಿವಪುತ್ರ ತಳಕೇರಿ, ವೀರ್ ಯೋಧ ಬಾಪು ಕ್ಷತ್ರಿ, ಸ್ವಪ್ನಿಲ್ ಗೋಡಿಹಾಳ, ಬಸ್ಗೊಂಡ್ ಪಾಟಿಲ್, ರಾಜುಗೌಡ ಪಾಟೀಲ್ ನಂದರಗಿ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.