ತಾಳಿಕೋಟೆ: ಸ್ಥಳೀಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ವಿಜಯದಶಮಿ ನಿಮಿತ್ತ ಅಕ್ಟೋಬರ್ ೨೪ರ ಶನಿವಾರ ಪಟ್ಟಣದಲ್ಲಿ ಭವ್ಯ ಪಥಸಂಚಲನ ಆಯೋಜಿಸಲಾಗಿದೆ. ಮಧ್ಯಾಹ್ನ ೩ ಗಂಟೆಗೆ ಎರಡು ಪ್ರತ್ಯೇಕ ಮಾರ್ಗಗಳಲ್ಲಿ ಪಥಸಂಚಲನ ಆರಂಭವಾಗಲಿದ್ದು, ಅಂತಿಮವಾಗಿ ಎಸ್.ಕೆ. ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸಮಾರೋಪಗೊಳ್ಳಲಿದೆ. ನಂತರ ಸಾರ್ವಜನಿಕ ಸಮಾರಂಭ ಜರುಗಲಿದೆ.
ಮೊದಲ ಮಾರ್ಗ: ಬಸ್ ನಿಲ್ದಾಣದ ಸಮೀಪದ ಕನ್ನಡ ಶಾಲಾ ಮೈದಾನದಿಂದ ಆರಂಭವಾಗುವ ಪಥಸಂಚಲನ ವಿದ್ಯಾನಗರ, ಡಾ. ಆನಂದ ಭಟ್ ಅವರ ಮನೆ ಮುಂಭಾಗ, ಹುಣಸಗಿ ರಸ್ತೆ, ಬಿ.ಎಸ್. ಪಾಟೀಲ ಕಾಂಪ್ಲೆಕ್ಸ್, ಅರುಣ ಕನ್ನಗೀರಿ ಮನೆ, ಪೊಲೀಸ್ ಕ್ವಾಟರ್ಸ್, ಹಿಂದೆ ಶ್ರೀ ಹನುಮಾನ್ ದೇವಸ್ಥಾನದ ಪಕ್ಕ, ಪೊಲೀಸ್ ಠಾಣೆ, ಡಾ. ಬಾಬಾಸಾಹೇಬ ಅಂಬೇಡ್ಕರ್ ವೃತ್ತ, ಶ್ರೀ ಅಂಬಾ ಭವಾನಿ ದೇವಸ್ಥಾನ, ಕತ್ರಿ ಬಜಾರ್ ಮಾರ್ಗವಾಗಿ ಶಿವಾಜಿ ಚೌಕ್, ಬಸ್ ನಿಲ್ದಾಣ ಹಾಗೂ ಬಸವೇಶ್ವರ ವೃತ್ತದ ಮೂಲಕ ಸಾಗಿ ಎಸ್.ಕೆ. ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.
ಎರಡನೇ ಮಾರ್ಗ: ಕನ್ನಡ ಶಾಲಾ ಮೈದಾನದಿಂದ ಆರಂಭವಾಗುವ ಪಥಸಂಚಲನ ರಾಣಾ ಪ್ರತಾಪಸಿಂಹ ವೃತ್ತ, ಶಿವಾಜಿ ಚೌಕ್, ನಾಗರಕಲ ಓಣಿ ರಾಜವಾಡೆ, ಕತ್ರಿ ಬಜಾರ್, ವಾಸವಿ ಕಲ್ಯಾಣ ಮಂಟಪ, ಮಹಲ್‌ಗಲ್ಲಿ, ಅಂಬೇಡ್ಕರ್ ನಗರ, ರಾಜಪೂತ ಗಲ್ಲಿ ಶ್ರೀ ಖಾಸ್ಗತೇಶ್ವರ ಮಠ, ಕತ್ರಿ ಬಜಾರ್, ಶಿವಾಜಿ ಚೌಕ್, ಬಸ್ ನಿಲ್ದಾಣ ಹಾಗೂ ಬಸವೇಶ್ವರ ವೃತ್ತದ ಮೂಲಕ ಸಾಗಿ ಎಸ್.ಕೆ. ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.
ಪಥಸಂಚಲನದ ನಂತರ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘದ ಪ್ರಕಟಣೆ ತಿಳಿಸಿದೆ.