LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಕಲ್ಲೋಳಿಯಲ್ಲಿ ಅ. 25ರಂದು ಗುರುವಂದನೆ ಹಾಗೂ ಸ್ನೇಹ ಸಮ್ಮೀಲನ

ಕಲ್ಲೋಳಿ :  ಪಟ್ಟಣದ ಪಂಡಿತ ಜವಾಹರಲಾಲ ನೆಹರು ಪ್ರೌಢಶಾಲೆಯ 1991-92ನೇ ಸಾಲಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಗುರುವಂದನೆ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮವು ಬರುವ ಭಾನುವಾರ, ಅಕ್ಟೋಬರ್ 25ರಂದು ಬೆಳಿಗ್ಗೆ 9-30 ಕ್ಕೆ ಸ್ಥಳೀಯ ಬಸವೇಶ್ವರ ಸಹಕಾರಿ ಸಭಾಭವನದಲ್ಲಿ ಜರುಗಲಿದೆ.
ಚಿಕ್ಕೋಡಿ ಡಿಡಿಪಿಐ ಅಜೀತ ಮನ್ನಿಕೇರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ತೇರದಾಳ ಹಾಗೂ ಪಿ.ಬಿ. ಹಿರೇಮಠ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಲ್ಲೋಳಿ ಪಟ್ಟಣ ಪಂಚಾಯಿತಿಯ ಸಿಇಒ ಚಿದಾನಂದ ಮುಗಳಕೋಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಶಿಕ್ಷಕರಾದ ಆರ್.ಎಂ. ಶಿಂಗಾಡಿ, ಸಿ.ಎಂ. ಕಟಗಿ, ಬಿ.ಎ. ಕಮತ,ಎಸ ಎಸ ಅಂಗಡಿ,ಪಿ ಆರ್ ಗರಗಟ್ಟಿ,ದಯಾನಂದ ಗಿರಡ್ಡಿ,ವ್ಹಿ ಜಿ ವಿರಕ್ತಿಮಠ ಸೇರಿದಂತೆ ಹಲವು ಗಣ್ಯರು ಹಾಗೂ ಸನ್ಮಾನಿತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸುವುದರ ಜೊತೆಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಸ್ನೇಹವನ್ನು ಪುನರ್‌ಸಂಪರ್ಕಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇನಾಮದಾರ ಶುಗರ್ಸ್‌ನಲ್ಲಿ ಕೇನ್ ಕ್ಯಾರಿಯರ್ ಪೂಜಾ ಸಮಾರಂಭಕಲ್ಲೋಳಿಯಲ್ಲಿ ಅ. 25ರಂದು ಗುರುವಂದನೆ ಹಾಗೂ ಸ್ನೇಹ ಸಮ್ಮೀಲನ ದುರ್ಗಾದೇವಿ ಜನಕಲ್ಯಾಣ ಪ್ರತಿಷ್ಠಾನದ ಸಂಕಲ್ಪದಂತೆ ೫೦೧ ಮುತ್ಯೈದೆಯರಿಗೆ ಉಡಿ ತುಂಬುವ ಕಾರ್ಯ ನಡೆಯಿತು. ಸತ್ಯ ಶುದ್ಧ ಕಾಯಕ ಮಾಡಿ ದೇವಿಯ ಕೃಪೆಗೆ ಪಾತ್ರರಾಗಿ-ಶಾಸಕ ರಾಜುಗೌಡಅರ್ಜನಾಳದಲ್ಲಿ ಅಘೋರಿ ನೃತ್ಯ ಕಾರ್ಯಕ್ರಮ: ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಯುವಕರ ಸುಧಾರಣೆ ಸಾಧ್ಯ - ರಾಘವೇಂದ್ರ ಕಾಪಸೆಇಂಡಿ: ವಿಜಯದಶಮಿ ಹಬ್ಬವು ಕೆಟ್ಟತನದ ಮೇಲೆ ಒಳ್ಳೆಯತನದ ವಿಜಯವನ್ನು ಸಾರುತ್ತದೆ - ಮಾಜಿ ಸಚಿವ ಅಪ್ಪಸಾಹೇಬ ಪಟ್ಟಣಶೆಟ್ಟಿತಾಳಿಕೋಟೆಯಲ್ಲಿ ೨೪ರಂದು ಆರ್ ಎಸ್ ಎಸ್ ಪಥ ಸಂಚಲನಸೋಲು ಗೆಲುವಿನತ್ತ ಕೊಂಡೊಯ್ಯುವ ಮೆಟ್ಟಿಲು: ನಟ ಡಾ. ವಿ. ರವಿಚಂದ್ರನ್ದ್ವೈತ ಸಿದ್ಧಾಂತದ ಪ್ರತಿಪಾದಕ ಶ್ರೀ ಮಧ್ವಾಚಾರ್ಯರ ಜಯಂತಿ ಆಚರಣೆ/ ಮಧ್ವಾಚಾರ್ಯರ ತತ್ವಾದರ್ಶಗಳು ಮಾನವಕುಲಕ್ಕೆ ದಾರಿದೀಪ: ಸಚಿವ ಲಕ್ಷ್ಮಣ ಸವದಿ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ  ವಿ. ಸೋಮಣ್ಣ ನೇತೃತ್ವದಲ್ಲಿ  ನವದೆಹಲಿಯ ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರ 202ನೇ ವಿಜಯೋತ್ಸವ*ಆನೆಗೊಂದಿಯಲ್ಲಿ ಅದ್ಧೂರಿ ಜಂಬೂ ಸವಾರಿ / ಕಾಂಗ್ರೆಸ್ ಮುಖಂಡ ಅಮರೇಶ್ ಕರಡಿ ಭಾಗಿ