LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಶಿವಾನಂದ ಮಖಣಾಪೂರವರ 51ನೇ ಜನ್ಮದಿನ, 25ನೇ ವಿವಾಹ ವಾರ್ಷಿಕ ಮಹೋತ್ಸವ ವಿನೂತನ, ವಿಭಿನ್ನ

ಹಸಿರು ಕ್ರಾಂತಿ ವರದಿ ವಿಜಯಪುರ
ಜಿಲ್ಲೆಯ ನಿಖಟಪೂರ್ವ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮಖಣಾಪೂರ ಅವರ 51ನೇ ಜನ್ಮದಿನ ಹಾಗೂ 25ನೇ ವಿವಾಹ ವಾರ್ಷಿಕ ಮಹೋತ್ಸವವು ನಗರದ ಲಕ್ಷ್ಮೀ ಲೇಔಟ್‌ನ ಸುಕುನ ಕಾಲೋನಿಯಲ್ಲಿರುವ ತಮ್ಮ ನೂತನ ಸ್ವಗೃಹದಲ್ಲಿ ವಿಭಿನ್ನ ಹಾಗೂ ವಿನೂತನವಾಗಿ ಅದ್ಧೂರಿಯಾಗಿ ಜರುಗಿತು.

ಚಡಚಣ ತಾಲೂಕಿನ ಧೂಳಖೇಡನ ಗುರುಚಂದ್ರಶೇಖರ ಶ್ರವಣ ದೋಷವುಳ್ಳ ಮಕ್ಕಳ ವಿದ್ಯಾವರ್ದಕ ಶಾಲೆಯ ಮಕ್ಕಳು ಶಿವಾನಂದವರಿಗೆ ಪುಷ್ಪವೃಷ್ಟಿ ಎರಚಿ, ದ್ವೀಪ ಬೆಳಗಿಸುವ ಮೂಲಕ ಜನ್ಮ ದಿನ ಆಚರಿಸಿ, ಶುಭಾಶಯ ಕೋರಿದರು.

ಶಿವಾನಂದ-ಮೀನಾಕ್ಷಿ ಮಖಣಾಪೂರ ದಂಪತಿ ತಂದೆ-ತಾಯಿಗೆ ಪಾದಪೂಜೆ ಮಾಡುವ ಮೂಲಕ ಆಶೀರ್ವಾದ ಪಡೆದುಕೊಂಡರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವೇ.ಮಹಾಂತೇಶ ಶಾಸ್ತ್ರಿ ತದ್ದೇವಾಡಿ ನೇತೃತ್ವದಲ್ಲಿ ಶಾಲೆ ಮಕ್ಕಳಿಂದ ನಡೆದ ಪ್ರಾರ್ಥನೆ, ದೇಶಭಕ್ತಿ ಗೀತೆ, ನೃತ್ಯಗಳು ಜನಪದ ಸಿರಿ ಸಾಂಸ್ಕೃತಿಕ ಕಲೆಯ ಅನಾವರಣಗೊಂಡು ಕಾರ್ಯಕ್ರಮದ ಮೆರಗು ಹೆಚ್ಚಿಸಿತು. 

ಜನ್ಮ ದಿನದ ಪ್ರಯುಕ್ತ ಶಿವಾನಂದ ಮಖಣಾಪೂರ ಅವರಿಗೆ ಇಡೀ ದಿನ ಜಿಲ್ಲೆಯ ಪ್ರಮುಖರು, ನಾಗಠಾಣ ಮತಕ್ಷೇತ್ರದ ವಿವಿಧ ಗ್ರಾಮಗಳಾದ ಶಿವಣಗಿ,  ಕಗ್ಗೋಡ, ಅಂಕಲಗಿ, ನಾಗಠಾಣ, ಹಿಟ್ನಳ್ಳಿ, ಚಡಚಣ, ಬರಡೋಲ, ಜಿಗಜಿವಣಗಿ, ಹಲಸಂಗಿ, ಧೂಳಖೇಡ, ಶಿರ್ನಾಳ, ಲೋಣಿ ಬಿ.ಕೆ, ಹತ್ತಳ್ಳಿ, ಸಂಖ ತದ್ದೇವಾಡಿ, ಅಣಚಿ, ಇಂಚಗೇರಿ, ಕನ್ನೂರ, ಮಖಣಾಪೂರ, ತಿಡಗುಂದಿ, ಬೊಮ್ಮನಳ್ಳಿ ಸೇರಿದಂತೆ ವಿಜಯಪುರ ನಗರ ಸೇರಿದಂತೆ ವಿವಿಧ ಗ್ರಾಮಗಳಿಂದ ಅಭಿಮಾನಿಗಳು ಆಗಮಿಸಿ ಶುಭಾಶಯ ಕೋರಿದರು.

ಇಲ್ಲಿಯವರೆಗೆ ನಾನು ನನ್ನ ಜನ್ಮ ದಿನ ಆಚರಣೆ ಮಾಡಿಕೊಂಡಿಲ್ಲ. ಈ ಬಾರಿ ಅಭಿಮಾನಿಗಳು ಹಾಗೂ ನಮ್ಮ ಹಿರಿಯ ಮುಖಂಡರು ಸೇರಿದಂತೆ ನನ್ನ ಮಾರ್ಗದರ್ಶನಕರು ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದ್ದರಿಂದ ಬೇಡವೆನ್ನದೇ ಹಾಗೂ ಅವರ ಒತ್ತಡಕ್ಕೆ ಮಣಿದು ಆಚರಣೆ ಮಾಡಿಕೊಂಡಿದ್ದೇನೆ. ಹಿರಿಯರ ಆಶೀರ್ವಾದದಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಲು ಶಕ್ತಿ ಇಮ್ಮಡಿಯಾಗಿದೆ. ಅಭಿಮಾನಿಗಳ ಪ್ರೀತಿ, ವಿಶ್ವಾಸಕ್ಕೆ ಯಾವುದೇ ಕಾರಣಕ್ಕೆ ಚುತಿ ಬರದಂತೆ ನೋಡಿಕೊಳ್ಳವ ಜಬಾಬ್ದಾರಿಯನ್ನು ಹೊಂದಿ ಕ್ಷೇತ್ರದ ಜನತೆಯ ಸೇವೆ ಮಾಡಲು ಸದಾ ಬದ್ಧನಾಗಿದ್ದೇನೆ. ಶುಭಾಶಯ ಕೋರಿದ ನನ್ನೆಲ್ಲ ಸ್ನೇಹ ಬಂಧುಗಳಿಗೆ ಅನಂತ, ಅನಂತ ವಂದನೆಗಳು.
-ಶಿವಾನಂದ ಮಖಣಾಪೂರ, ಬಿಜೆಪಿ ಯುವ ಮುಖಂಡರು, ನಾಗಠಾಣ ಮತಕ್ಷೇತ್ರ ವಿಜಯಪುರ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನವರಾತ್ರಿ ಉತ್ಸವದ ಅಂಗವಾಗಿ ದುರ್ಗಾದೌಡ ಕಾರ್ಯಕ್ರಮ ಪೂರ್ವಭಾವಿ ಸಭೆ ಶಿಕ್ಷಣದ ಜೊತೆ ಸಂಸ್ಕಾರಮುಖ್ಯ - ವೇ|| ರಾಚಯ್ಯ ಶಾಸ್ತ್ರಿಡಿಜಿಟಲ್‌ ಬೋಧನೆಯಿಂದ ಗುರು-ಶಿಷ್ಯರ ನಡುವೆ ಭೌತಿಕ ಅಂತರ ಕಡಿಮೆರಾಜ್ಯ ಸರ್ಕಾರದ ವಿರುದ್ಧ ಅಖಂಡ ಕರ್ನಾಟಕ ರೈತ ಸಂಘದಿಂದ ವಿನೂತನ ಭಿಕ್ಷಾಟನೆ ಚಳವಳಿ ೧೫೦ ಹಾಸಿಗೆಗಳ ನೂತನ ಆಸ್ಪತ್ರೆ ಮಂಜೂರು - ಮಾಜಿ ಶಾಸಕ ಆನಂದ ನ್ಯಾಮಗೌಡಮೌಲ್ಯಗಳ ಅರಿವು ಮೂಡಿಸಲು ಸ್ಪರ್ಧೆರಾಜ್ಯ ಸರ್ಕಾರದ ಪ್ರತಿ ಕೆಲಸದಲ್ಲಿ ಕೇಂದ್ರದ ಅನುಧಾನ ಇದೆ :ಸಂಸದ ವಿಶ್ವೇಶ್ವರ ಕಾಗೇರಿ ಪಾರಂಪರಿಕ ನಿಯಮಗಳ ಪಾಲನೆಯೊಂದಿಗೆ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಿದೆ: ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ್ಜಿಲ್ಲೆಯ ರೈತ ಉತ್ಪಾದಕ ಸಂಸ್ಥೆಗಳಿಗೆ ತರಬೇತಿ ಕಾರ್ಯಕ್ರಮ: ಆನ್‌ಲೈನ್ ವಹಿವಾಟಿಗೆ ತಾಂತ್ರಿಕ ಪ್ರೋತ್ಸಾಹಜಿಲ್ಲಾ ಬೋಧಕ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕ್ರಮ