LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Koppal

ಜಿಲ್ಲಾ ಬೋಧಕ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕ್ರಮ

 


ಕೊಪ್ಪಳ, ಸೆಪ್ಟೆಂಬರ್ 29: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಬೋಧಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಆಸ್ಪತ್ರೆಯ ಸಭಾಭವನದಲ್ಲಿ ಸೋಮವಾರದಂದು “ಅಂತರಾಷ್ಟಿçÃಯ ಸುರಕ್ಷಿತ ಗರ್ಭಪಾತ ಸೇವೆಗಳ ದಿನ” ಹಾಗೂ “ಅಂತರಾಷ್ಟಿçÃಯ ಶ್ರವಣದೋಷ ಸಪ್ತಾಹ ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಬೋಧಕ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪ್ರಸೂತಿ ಮತ್ತು ಸ್ತಿçÃರೋಗ ತಜ್ಞರಾದ ಡಾ.ರಾಜೇಶ್, ಇವರು ಕಾರ್ಯಕ್ರಮ ಉದ್ಘಾಟಿಸಿ, ಗರ್ಭಪಾತ ಸೇವೆಗಳ ಕುರಿತು ಮಾತನಾಡಿದರು. “ಒಗ್ಗಟ್ಟಿನ ಕಾರ್ಯಾಚರಣೆ: ಎಲ್ಲರಿಗೂ ಆಯ್ಕೆ ಮತ್ತು ಸೇವೆಗಳ ಲಭ್ಯತೆಯನ್ನು ಸಬಲೀಕರಣಗೊಳಿಸುವುದು” ಎಂಬ ಘೋಷವಾಕ್ಯದೊಂದಿಗೆ ಈ ಕಾರ್ಯಕ್ರಮನ್ನು ಆಚರಿಸಲಾಗುತ್ತದೆ. ಸುರಕ್ಷಿತ ಗರ್ಭಪಾತ ಎಂದರೆ, ಅರ್ಹ ಹಾಗೂ ತರಬೇತಿ ಪಡೆದ ಆರೋಗ್ಯ ರಕ್ಷಣೆ ನೀಡುಗರಿಂದ ಸೂಕ್ತ ವೈದ್ಯಕೀಯ ಪರಿಸರದಲ್ಲಿ ಮತ್ತು ವೈಜ್ಞಾನಿಕವಾಗಿ ಅನುಮೋದಿತ ವಿಧಾನಗಳ ಮೂಲಕ ಮಾಡಲಾಗುವ ಗರ್ಭಪಾತವನ್ನು ಸುರಕ್ಷಿತ ಗರ್ಭಪಾತ ಎನ್ನಲಾಗುತ್ತದೆ. ಇದು ಮಹಿಳೆಯರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಹಕ್ಕುಗಳನ್ನು ರಕ್ಷಿಸುವ ಮತ್ತು ಅಸುರಕ್ಷಿತ ಗರ್ಭಪಾತದಿಂದ ಉಂಟಾಗುವ ತಾಯಂದಿರ ಮರಣ ಪ್ರಮಾಣವನ್ನು ತಡೆಗಟ್ಟುವ ಗುರಿ ಹೊಂದಿರುವ ಜಾಗತಿಕ ಆರೋಗ್ಯ ಯೋಜನೆಯಾಗಿದೆ ಎಂದು ತಿಳಿಸಿದರು.
ಕಿವಿ, ಮೂಗು ಹಾಗೂ ಗಂಟಲು ತಜ್ಞರಾದ ಡಾ.ಅವಿನಾಶ್ ಇವರು ಮಾತನಾಡಿ, “ಅಂತರಾಷ್ಟಿçÃಯ ಶ್ರವಣದೋಷ ಸಪ್ತಾಹ ಕಾರ್ಯಕ್ರಮ”ದ ಉದ್ದೇಶ ಶ್ರವಣದೋಷ ಮತ್ತು ಕಿವುಡುತನ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ. “ಶ್ರವಣದೋಷವುಳ್ಳವರ ಮಾನವ ಹಕ್ಕುಗಳನ್ನು ಘೋಷಿಸುವುದು” ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಚರಿಸಲಾಗುತ್ತದೆ. ಕಿವಿಯು ಪ್ರತಿಯೊಬ್ಬ ಮನುಷ್ಯನ ಪಂಚೇAದ್ರಿಯಗಳಲ್ಲಿ ಪ್ರಮುಖ ಅಂಗವಾಗಿದ್ದು, ಅದನ್ನು ಪ್ರತಿಯೊಬ್ಬರೂ ತಮ್ಮ ಜೀವನದುದ್ದಕ್ಕೂ ರಕ್ಷಣೆ ಮಾಡಿಕೊಳ್ಳಬೇಕು. ಕಿವಿಯಲ್ಲಿ ಕಡ್ಡಿ ಹಾಕಬಾರದು, ಎಣ್ಣೆ ಹಾಕಬಾರದು, ನಕಲಿ ವೈದ್ಯರ ಕಡೆಯಿಂದ ಕಿವಿಯಲ್ಲಿ ಗುಗ್ಗೆ ತೆಗೆಸಿಕೊಳ್ಳಬಾರದು. ವೈದ್ಯರ ಸಲಹೆ ಇಲ್ಲದೆ ಕಿವಿಯಲ್ಲಿ ಏನೂ ಹಾಕಬಾರದು, ಕಲುಷಿತ ನೀರಿನಲ್ಲಿ ಈಜಬಾರದು ಎಂದು ತಿಳಿಸಿದರು. ಕಿವಿನೋವು, ಸೋರುವಿಕೆ ಕಂಡು ಬಂದರೆ ತಮ್ಮ ಸಮೀಪದ ತಾಲೂಕಾ/ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಕಿವಿ, ಮೂಗು, ಗಂಟಲು ತಜ್ಞರನ್ನು ಸಂಪರ್ಕಿಸಬೇಕು ಹಾಗೂ 2 ವರ್ಷದೊಳಗಿನ ಮಕ್ಕಳಿಗೆ ಉಚಿತ ಶ್ರವಣ ಶಸ್ತçಚಿಕಿತ್ಸೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಆಡಿಯೋಲಾಜಿಸ್ಟ್ ಬಿಂದು ಮಾತನಾಡಿ, ಕಿವಿಯ ಆರೋಗ್ಯ ರಕ್ಷಣೆಯಲ್ಲಿ ಅನುಸರಿಸಬೇಕಾದ ನಿಯಮಗಳು, ಕಿವಿಯ ಪರೀಕ್ಷೆ ಹಾಗೂ ಸೇವಾ ಸೌಲಭ್ಯಗಳ ಬಗ್ಗೆ ವಿವರವಾಗಿ ಮಾತನಾಡಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ್ ಎಂ.ಹೆಚ್. ಇವರು ಕುಟುಂಬ ಕಲ್ಯಾಣ ಕಾರ್ಯಕ್ರಮ, ಕಿವಿಯ ಆರೋಗ್ಯದ ಬಗ್ಗೆ, ಅಂತರಾಷ್ಟಿçÃಯ ಶ್ರವಣದೋಷ ಸಪ್ತಾಹ ಕಾರ್ಯಕ್ರಮ ಮತ್ತು ಕಾರ್ಯಕ್ರಮದಡಿಯಲ್ಲಿ ಸಿಗುವ ಸೇವಾ ಸೌಲಭ್ಯಗಳ ಮತ್ತು ಚಿಕಿತ್ಸೆ ಕುರಿತು ವಿವರವಾಗಿ ಮಾತನಾಡಿದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ||ಪ್ರಕಾಶ ವಿ. ಅವರು ತಾಯಿ ಮತ್ತು ಮಗುವಿನ  ಆರೋಗ್ಯ, ಗರ್ಭಿಣಿಯರ ಆರೋಗ್ಯ ತಪಾಸಣೆ, ರಕ್ತಹೀನತೆ ಕುರಿತು ವಿವರವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ(ಪ್ರ)ಗಳಾದ ದೇವಮ್ಮ, ಭೌತಚಿಕಿತ್ಸಕರಾದ ಡಾ.ಚೈತ್ರಾ, ಆರ್.ಕೆ.ಎಸ್.ಕೆ ಸಮಾಲೋಚಕರಾದ ಸ್ವರೂಪರಾಣಿ, ಕುಟುಂಬ ಯೋಜನೆಯ ಸಮಾಲೋಚಕರಾದ ವಿಜಯಲಕ್ಷಿö್ಮÃ, ಶುಶ್ರೂಣಾಧಿಕಾರಿಗಳ ಮೇಲ್ವಿಚಾರಕರಾದ ಸುಮಂಗಲ, ಶುಶ್ರೂಣಾಧಿಕಾರಿಗಳಾದ ಜ್ಯೋತಿ, ಶ್ವೇತಾ, ತಾಯಂದಿರು, ಗರ್ಭಿಣಿ ಸ್ತಿçÃಯರು, ಸಾರ್ವಜನಿಕರು ಹಾಗೂ ಇಂಟರ್ನ್ಶಿಪ್ ವಿದ್ಯಾರ್ಥಿಗಳು ಇತರೆ ಆರೋಗ್ಯ ಸಿಬ್ಬಂದಿಗಳು, ಭಾಗವಹಿಸಿ ಯಶಸ್ವಿಗೊಳಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನವರಾತ್ರಿ ಉತ್ಸವದ ಅಂಗವಾಗಿ ದುರ್ಗಾದೌಡ ಕಾರ್ಯಕ್ರಮ ಪೂರ್ವಭಾವಿ ಸಭೆ ಶಿಕ್ಷಣದ ಜೊತೆ ಸಂಸ್ಕಾರಮುಖ್ಯ - ವೇ|| ರಾಚಯ್ಯ ಶಾಸ್ತ್ರಿಡಿಜಿಟಲ್‌ ಬೋಧನೆಯಿಂದ ಗುರು-ಶಿಷ್ಯರ ನಡುವೆ ಭೌತಿಕ ಅಂತರ ಕಡಿಮೆರಾಜ್ಯ ಸರ್ಕಾರದ ವಿರುದ್ಧ ಅಖಂಡ ಕರ್ನಾಟಕ ರೈತ ಸಂಘದಿಂದ ವಿನೂತನ ಭಿಕ್ಷಾಟನೆ ಚಳವಳಿ ೧೫೦ ಹಾಸಿಗೆಗಳ ನೂತನ ಆಸ್ಪತ್ರೆ ಮಂಜೂರು - ಮಾಜಿ ಶಾಸಕ ಆನಂದ ನ್ಯಾಮಗೌಡಮೌಲ್ಯಗಳ ಅರಿವು ಮೂಡಿಸಲು ಸ್ಪರ್ಧೆರಾಜ್ಯ ಸರ್ಕಾರದ ಪ್ರತಿ ಕೆಲಸದಲ್ಲಿ ಕೇಂದ್ರದ ಅನುಧಾನ ಇದೆ :ಸಂಸದ ವಿಶ್ವೇಶ್ವರ ಕಾಗೇರಿ ಪಾರಂಪರಿಕ ನಿಯಮಗಳ ಪಾಲನೆಯೊಂದಿಗೆ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಿದೆ: ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ್ಜಿಲ್ಲೆಯ ರೈತ ಉತ್ಪಾದಕ ಸಂಸ್ಥೆಗಳಿಗೆ ತರಬೇತಿ ಕಾರ್ಯಕ್ರಮ: ಆನ್‌ಲೈನ್ ವಹಿವಾಟಿಗೆ ತಾಂತ್ರಿಕ ಪ್ರೋತ್ಸಾಹಜಿಲ್ಲಾ ಬೋಧಕ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕ್ರಮ