Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಸಂಕ್ರಾಂತಿಗೆ ಅಜೇಯ್-ಬೃಂದಾ ಜೋಡಿ ಮೋಡಿಯ ಪಾರ್ಟ್ನರ್


     ಅಜೇಯ್ ರಾವ್ ಹಾಗೂ ಬೃಂದಾ ಆಚಾರ್ಯ ನಟನೆಯ 'ಪಾರ್ಟ್ನರ್' ಚಿತ್ರ ಈಗಾಗಲೇ ಎರಡೆರಡು ಹಾಡುಗಳ ಮೂಲಕ ಕಮಾಲ್ ಮಾಡಿದೆ. ಈಗಾಗಲೇ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, ಯು/ಎ ಸರ್ಟಿಫಿಕೆಟ್ ದೊರಕಿದೆ.
     ಕುನಾಲ್ ಗಾಂಜಾವಾಲ ಹಾಡಿರುವ ‘ಅಮೋರ’ ಹಾಗೂ ಲವಲವಿಕೆ ಹಾಡುಗಳಿಗೆ ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಎರಡೂ ಹಾಡುಗಳೂ ಮಿಲಿಯನ್‌ಗೂ ಅಧಿಕ ಹಿಟ್ಸ್ ದಾಖಲಿಸಿದೆ. ಇದೇ ಖುಷಿಯಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ತಯಾರಿ ಮಾಡಿಕೊಳ್ಳುತ್ತಿದೆ ಚಿತ್ರತಂಡ. ಸಂಕ್ರಾಂತಿ ಹಬ್ಬಕ್ಕೆ ‘ಪಾರ್ಟ್ನರ್’ ಚಿತ್ರಮಂದಿರಗಳಿಗೆ ಆಗಮಿಸಲಿದೆ ಎಂದು ಚಿತ್ರತಂಡ ಖಚಿತಪಡಿಸಿದೆ. ‘ಪ್ರೇಮದ ಊರಲಿ’ ಮೂಲಕ ವಿತರಣಾ ಕ್ಷೇತ್ರದಲ್ಲಿ ಗಮನ ಸೆಳೆದಿರುವ ‘ಬಾಗೂರು ಟಾಕೀಸ್’ ಸಂಸ್ಥೆ ಮೂಲಕ ಪ್ರಶಾಂತ್ ಕರ್ನಾಟಕದಾದ್ಯಂತ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
     "ಈಗಾಗಲೇ ಸಿನಿಮಾವನ್ನು ನೋಡಿದ್ದೇನೆ. ಕುಟುಂಬ ಸಮೇತ ಯಾವುದೇ ಮುಜುಗರವಿಲ್ಲದೇ ನೋಡಬಹುದಾದ ಚಿತ್ರ. ಹೊಸ ವರ್ಷಕ್ಕೆ ಕನ್ನಡ ಚಿತ್ರರಂಗದಲ್ಲಿ ‘ಪಾರ್ಟ್ನರ್’ ದೊಡ್ಡ ಮಟ್ಟದ ಕ್ರಾಂತಿ ಮಾಡಲಿದೆ. ಇತ್ತೀಚೆಗೆ ಫ್ಯಾಮಿಲಿ ಕಂಟೆಂಟ್ ಇರುವಂಥ ಸಿನಿಮಾಗಳನ್ನು ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ. ಹೀಗಾಗಿ ಪಾರ್ಟ್ನರ್ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲು ಮುಂದಾಗಿದ್ದೇನೆ’ ಎನ್ನುತ್ತಾರೆ ಪ್ರಶಾಂತ್ ಬಾಗೂರು.
     ಶಿವತೇಜಸ್ ‘ಪಾರ್ಟ್ನರ್’ಗೆ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಹೆಚ್.ಪಿ.ಆರ್ ಎಂಟರ್‌ಪ್ರೈಸಸ್ ಬ್ಯಾನರ್ ಅಡಿ ಹರೀಶ್ ದೇವಿತಂದ್ರೆ ನಿರ್ಮಿಸಿದ್ದಾರೆ.
      ರಂಗಾಯಣ ರಘು, ಮೂಗು ಸುರೇಶ್, ಗೌರವ್ ಶೆಟ್ಟಿ, ಮನೋಹರ್ ಗೌಡ, ಚಿತ್ಕಲಾ, ಗಿರಿ ಶಿವಣ್ಣ, ಸುಷ್ಮಿತಾ ಗೌಡ, ಅರವಿಂದ ರಾವ್, ಶ್ರೀಭವ್ಯ ಹಾಗೂ ಮಧುಮತಿ ಸೇರಿದಂತೆ ಸಾಕಷ್ಟು ಕಲಾವಿದರ ದಂಡೇ ಈ ಚಿತ್ರದ ತಾರಾಗಣದಲ್ಲಿದ್ದಾರೆ. 'ಲವ್ ಮಾಕ್ಟೇಲ್' ಖ್ಯಾತಿಯ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿರುವ ಈ ಸಿನಿಮಾಕ್ಕೆ ಸುಜ್ಞಾನ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಕ್ರಾಂತಿಗೆ ಅಜೇಯ್-ಬೃಂದಾ ಜೋಡಿ ಮೋಡಿಯ ಪಾರ್ಟ್ನರ್ಶಿಕ್ಷಕ ಕೃ? ಅರ್ಜುನಪ್ಪ ಹೊಸಮನಿ ಅವರಿಗೆ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿಪೊಲೀಸ್ ಇಲಾಖೆಯ ಸೇವೆ, ಶಿಸ್ತು ಮತ್ತು ತ್ಯಾಗ ಸಮಾಜಕ್ಕೆ ಮಾದರಿ: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿಭಯಮುಕ್ತ ಶಾಲಾ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬ ಶಿಕ್ಷಕರ, ಪೋಷಕರ ಕರ್ತವ್ಯ: ನ್ಯಾ. ಲತಾ ಕುಮಾರಿಬಳ್ಳಾರಿ ಜಿಲ್ಲೆಯಾದ್ಯಂತ ನ. 25 ರಂದು ಬೃಹತ್ ರಕ್ತದಾನ ಶಿಬಿರ: 5,000 ಯೂನಿಟ್ ಸಂಗ್ರಹ ಗುರಿಬಳ್ಳಾರಿ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಹುಂಡಿಯಲ್ಲಿ ₹1,17,87,950 ಕಾಣಿಕೆ ಸಂಗ್ರಹತಂದೆ ತಾಯಿಯನ್ನು ಮೊದಲು ಗೌರವಿಸಿ  : ನಿವೃತ್ತ ಪ್ರಾಂಶುಪಾಲ ಅಬ್ದುಲ್ ಮುತಾಲಿಬ್  ಕಿವಿಮಾತು 'ಸ್ವರಗಳ ಸಂಗಮ' ಸಂಗೀತ ಕಾರ್ಯಕ್ರಮ: ಪ್ರೇಕ್ಷಕರ ಮನಗೆದ್ದ ಗಾಯಕರುಬಸವಣ್ಣನವರ ಕುರಿತು  ರವಿ ಹಂಜ ರ   “ಬಸವ ಮಂಟಪ” ಕೃತಿಯನ್ನು ನಿಷೇಧಿಸಿ ಮತ್ತು  ಬಂಧಿಸಲು ಅಗ್ರಹ *ಸುಳೇಭಾವಿಯಲ್ಲಿ ನೂತನ ‘ಬನಶ್ರೀ ಭವನ’ ಉದ್ಘಾಟನೆ; ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಕೂಲ*