ಬಳ್ಳಾರಿ, ನ.24:: ನಗರದ ರಾಕ್ ವಿಲ್ಲಾ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ 'ಸ್ವರಗಳ ಸಂಗಮ–ಸ್ನೇಹದ ಸಂಭ್ರಮ' ಸಂಗೀತ ಕಾರ್ಯಕ್ರಮದಲ್ಲಿ ಉದಯೋನ್ಮುಖ ಗಾಯಕರು ಕನ್ನಡ ಚಲನಚಿತ್ರಗಳ ಮಧುರ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನಗೆದ್ದರು.
ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ಏಕವ್ಯಕ್ತಿ ಹಾಗೂ ಯುಗಳ ಗಾಯನದ ಮೂಲಕ ಗಾಯಕರು ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಕಾರ್ಯಕ್ರಮದ ಆಯೋಜಕ ಕರೋಕೆ ಮಂಜುನಾಥ್ ಆರ್.ಐ. ಮಾತನಾಡಿ, ಉದಯೋನ್ಮುಖ ಗಾಯಕರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ವೇದಿಕೆ ರೂಪಿಸಲಾಗಿದೆ. ಸಂಗೀತ ಮನಸ್ಸಿಗೆ ನೆಮ್ಮದಿ ನೀಡುವ ಶಕ್ತಿಯನ್ನು ಹೊಂದಿದ್ದು, ಆಸಕ್ತ ಗಾಯಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಂಜುನಾಥ್, ಶ್ರೀಕಾಂತ್, ಉಷಾ, ಶಿಲ್ಪಾ, ಮಧುಮತಿ, ಶಿವರಾಜ್, ಬಸವರಾಜ್, ಅನಿತಾ, ಓಬಣ್ಣ, ಗಿರಿಜಾ, ನಟರಾಜ್, ತಿಪ್ಪೇಸ್ವಾಮಿ, ಲಕ್ಷ್ಮಿ, ಸೋಮಶೇಖರ್, ರಾಜು ಇಸ್ರಾನಿ, ಭಾಗ್ಯ, ತಿರುಮಲ, ಪರಿಮಳ, ಮೂರ್ತಿ ಸೇರಿದಂತೆ ಹಲವು ಗಾಯಕರು ಭಾಗವಹಿಸಿದ್ದರು. ಗಾಯಕರನ್ನು ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.