ಬಳ್ಳಾರಿ, ನವೆಂಬರ್ 24: ಬಳ್ಳಾರಿ ನಗರದ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯವು ಇಂದು ದಿನಾಂಕ 23-11-2026 ರಂದು ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗಳ ಸಮಕ್ಷಮದಲ್ಲಿ ನೆರವೇರಿಸಲಾಯಿತು.
ಮಾನ್ಯ ಶ್ರೀಮತಿ ಹೆಚ್. ಸವಿತಾ, ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಬಳ್ಳಾರಿ, ಉಪ ತಹಶೀಲ್ದಾರ್ ಶ್ರೀ ಮಂಜುನಾಥ ಕೆ.ಎಸ್., ಬಳ್ಳಾರಿ ತಾಲೂಕು ಆಡಳಿತ ಹಾಗೂ ಶ್ರೀ ಗೌಡರ ಯುವರಾಜಗೌಡ, ಕಾರ್ಯನಿರ್ವಾಹಕ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಬ್ಯಾಂಕ್ ಸಿಬ್ಬಂದಿ, ಗೃಹರಕ್ಷಕ ಸಿಬ್ಬಂದಿ ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗದವರ ಸಮಕ್ಷಮದಲ್ಲಿ ದೇವಸ್ಥಾನದ ಹುಂಡಿಯನ್ನು ತೆರೆಯಲಾಯಿತು.
ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಒಟ್ಟು ರೂ. 1,17,87,950/- (ಒಂದು ಕೋಟಿ ಹದಿನೇಳು ಲಕ್ಷದ ಎಂಭತ್ತೇಳು ಸಾವಿರದ ಒಂಬೈನೂರ ಐವತ್ತು ರೂಪಾಯಿಗಳು ಮಾತ್ರ) ಕಾಣಿಕೆ ರೂಪದಲ್ಲಿ ಸಂಗ್ರಹವಾಗಿರುತ್ತದೆ.
ಸಂಗ್ರಹವಾದ ಸದರಿ ಮೊತ್ತವನ್ನು ಅದೇ ದಿನ ಬ್ಯಾಂಕ್ಗೆ ಜಮಾ ಮಾಡಲಾಗಿರುತ್ತದೆ.
ಹುಂಡಿ ಎಣಿಕೆ ಕಾರ್ಯವು ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮಕ್ಷಮದಲ್ಲಿ ಸುಸೂತ್ರವಾಗಿ ಮತ್ತು ಪಾರದರ್ಶಕವಾಗಿ ಪೂರ್ಣಗೊಂಡಿರುತ್ತದೆ.