ಬಳ್ಳಾರಿ. ನ. 24:: ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರನ್ನು ಹಾಗೂ ವೀರಶೈವ ಲಿಂಗಾಯತರನ್ನು ಅವಹೇಳನ ಮಾಡಿರುವ ಲೇಖಕ ರವಿ ಹಂಜಳ ಬಸವ ಭಕ್ತರ ಹಾಗೂ ವೀರಶೈವ ಲಿಂಗಾಯತ ಸಮುದಾಯದವರ ಮನಸ್ಸಿಗೆ ತೀವ್ರ ಫಾಸಿ. ಮಾಡಿರುತ್ತಾರೆ. ಇಡೀ ವೀರಶೈವ ಲಿಂಗಾಯತ ಸಮುದಾಯಕ್ಕೆ ಮತ್ತು ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಮನಸ್ಸಿಗೆ ನೋವುಂಟಾಗುವಂತೆ ಆಧಾರ ರಹಿತ ಆರೋಪ ಮಾಡಿರುವ ರವಿ ಹಂಜರ “ಬಸವ ಮಂಟಪ” ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡು ರವಿ ಹಂಜೆ ಮತ್ತು ವಿಶ್ವೇಶ್ವರ ಭಟ್ಟ ಅವರನ್ನು ಕೂಡಲೇ ಬಂಧಿಸಬೇಕೆಂದು ರಾಷ್ಟ್ರೀಯ ಬಸವದಳ ಮತ್ತು ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಆಗ್ರಹಿಸಿದರು.
ಈ ಕುರಿತು ಎರಡು ಸಂಘಟನೆಗಳ ಪದಾಧಿಕಾರಿಗಳು ಬಳ್ಳಾರಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನೆಯನ್ನು ಸಲ್ಲಿಸಿ, ರವಿ ಹಂಜಾ ರಚಿತಾ ಕೃತಿ ಬಸವ ಮಂಟಪ ಸಮಾಜದ ಸ್ವಾಸ್ಥ್ಯಕದಡುವಂತಿವೆ. ಹೀಗಾಗಿ ಇಂತಹ ರವಿ ಹಂಜ ಕೃತಿಯನ್ನು ಮುಟ್ಟುವಲಾಗಿ ಕಂಡು ಅವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮಜರುಗಿಸಲು ರಾಷ್ಟ್ರೀಯ ಬಸವದಳ ಅಧ್ಯಕ್ಷರಾದ ರವಿಶಂಕರ್ ಮತ್ತು ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರಾದ ಬಿಜಿಕಲ್ ಪಂಚಾಕ್ಷರಪ್ಪ ಆಗ್ರಹಿಸಿದರು
ಸಂವಿಧಾನದತ್ತವಾದ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹಾಸಭೆಗೌರವ ನೀಡುತ್ತದೆ. ಆದರೆ ಬಸವಣ್ಣನವರನ್ನು ಕೊಲೆಗಡುಕ, ದರೋಡೆಕೋರ, ಬಿಜ್ಜಳನ ಖಜಾನೆದುರುಪಯೋಗ ಪಡಿಸಿಕೊಂಡು ಶರಣದಾಸೋಹ ಮಾಡಿದ್ದಾನೆ ಎಂದೆಲ್ಲಾ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಮತ್ತು ಅಂತಹ ಬರಹವನ್ನು ಮಹಾಸಭೆ ಒಪ್ಪಲು ಸಾಧ್ಯವೇ ಇಲ್ಲ. ಸಂಶೋಧಕ ರವಿ ಹಂಜಳ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದಕಾರಣಕ್ಕೆ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡು ಕೂಡಲೇ ಬಂಧಿಸಬೇಕು ಹಾಗೂ ವಿವಾದಿತಕೃತಿ “ಬಸವ ಮಂಟಪ” ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಚತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು ಹಾಗೂ ರಾಷ್ಟ್ರೀಯ ಬಸವದಳ ಪದಾಧಿಕಾರಿಗಳು ಒತ್ತಾಯಿಸುತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಿರಿಗೇರಿ ಪನ್ನರಾಜ್ ನಿಷ್ಠಿ ರುದ್ರಪ್ಪ ಗಂಗಾವತಿ ವೀರೇಶ್ ಬಂಡೆೇಗೌಡ ಭೀಮನಗೌಡ ಮಹೇಶ್ ಬಣಕಾರ್ ಮತ್ತು ಅಂದ್ರಾಳ್ ರಾಷ್ಟ್ರೀಯ ಬಸವದಳದ ಬಸವನಗೌಡ ರವಿಶಂಕರ್ ದುರ್ಗಣ್ಣ ವಚನಾಂಬಿಕೆ ಸುರೇಶ್ ತಿಪ್ಪೇಸ್ವಾಮಿ ಬಸವರಾಜ್ ಶಿವಕುಮಾರ್ ಸೇರಿದಂತೆ ಹಲವಾರು ಜನ ವೀರಶೈವ ಸಮುದಾಯದ ಹಲವರಿದ್ದರು.