Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bellary

ತಂದೆ ತಾಯಿಯನ್ನು ಮೊದಲು ಗೌರವಿಸಿ  : ನಿವೃತ್ತ ಪ್ರಾಂಶುಪಾಲ ಅಬ್ದುಲ್ ಮುತಾಲಿಬ್  ಕಿವಿಮಾತು 

ಬಳ್ಳಾರಿ. ನ. 24:: ತಾಯಿಯೇ ಮೊದಲ ಗುರು ತಂದೆ ತಾಯಿಯೇ ದೇವರುಗಳು ಅವರನ್ನು ಇಳಿ ವಯಸ್ಸಿನಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು ಇದರಿಂದ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಪಡೆಯಬಹುದು ಎಂದು ಶ್ರೀಮತಿ ಸರಳದೇವಿ ಸತೀಶ್  ಚಂದ್ರ ಅಗರ್ವಾಲ್ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಅಬ್ದುಲ್ ಮುತಾಲಿಬ್ ಕಿವಿಮಾತು ಹೇಳಿದರು.
 ಅವರು ಇಂದು ಕಾಲೇಜಿನ ಸಭಾಂಗಣದಲ್ಲಿ 1996 ಬ್ಯಾಚಿನ  ಬಿಕಾಂ ವಿದ್ಯಾರ್ಥಿಗಳ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ತಂದೆ ತಾಯಿಗಳು ನಿಮ್ಮ ಜೀವನದ ಏಳಿಗೆಗಾಗಿ ತಮ್ಮ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ಬದಿಗಿಟ್ಟು ನಿಮಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿ ಕೊಟ್ಟು ಉತ್ತಮ ವಿದ್ಯಾವಂತರನ್ನಾಗಿ ಮಾಡಲು ಬಹಳ ಶ್ರಮ ಪಟ್ಟಿರುತ್ತಾರೆ ಅವರ ಕನಸುಗಳನ್ನು ನನಸು ಮಾಡಲಾಗದಿದ್ದರೂ ಅವರ ಇಳಿವೈಸಿನಲ್ಲಿ ವೈದ್ಯಕೀಯ ಸೇರಿದಂತೆ ಇತರ ಅವಶ್ಯಕತೆಗಳನ್ನು ಸಮೋಪ್ಪಕ ರೀತಿಯಲ್ಲಿ ದೊರೆಯುವಂತೆ ನೋಡಿಕೊಂಡು ತಂದೆ ತಾಯಿ ಋಣವನ್ನು ತೀರಿಸಬೇಕಾದ ಅಗತ್ಯ ವಿದೆ ಎಂದರು.
ಗುರುಗಳು ವಿದ್ಯಾರ್ಥಿಗಳಿಗೆ   ವಿದ್ಯೆ ಕಲಿಸಿ ಉತ್ತಮ ಮಾರ್ಗವನ್ನು ತೋರಿಸಬಹುದು, ಕಾಲೇಜುಗಳು ನಿಮ್ಮ ವಿದ್ಯೆಗೆ ತಕ್ಕ ಮಾರ್ಕ್ಸ್ ಕಾರ್ಡ್ ಮತ್ತು ಗ್ರೇಡ್ಗಳನ್ನು ನೀಡಬಹುದು ಆದರೆ ನಿಮ್ಮ ಪರಿಶ್ರಮವೇ ನಿಮ್ಮ ಜೀವನವನ್ನು ಉತ್ತುಂಗಕ್ಕೆ ವೈಯಬಲ್ಲದು ಯಾವುದೇ ಅಡ್ಡದಾರಿಗಳನ್ನು ಹಿಡಿಯದೆ ಉತ್ತಮ ಮಾರ್ಗಗಳನ್ನು ಕಂಡುಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದ ಅವರು, ಮನೆ ಗೆದ್ದು ಮಾರು ಗೆಲ್ಲು ಎನ್ನುವಂತೆ ತಂದೆ ತಾಯಿಗೆ ಉತ್ತಮ ಮಗನಾಗಿ ಪತ್ನಿಗೆ ತಕ್ಕ ಪತಿಯಾಗಿ ಮಕ್ಕಳ ಮೆಚ್ಚುಗೆಯ ತಂದೆಯಾಗಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಿದರೆ ನಿಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು. 
 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತ್ತೊಬ್ಬ ನಿವೃತ್ತ ಪ್ರಾಂಶುಪಾಲ ನಾರಾಯಣಪ್ಪ ಮಾತನಾಡಿ, ಜೀವನದಲ್ಲಿ ಈಗಾಗಲೇ ಅರ್ಧ ಆಯುಷ್ಯವನ್ನು ಕಳೆದಿದ್ದೀರಿ ಒಂದು ಪಕ್ಷಿಗೆ ಎರಡು ರೆಕ್ಕೆಗಳಿದ್ದಂತೆ ನಮ್ಮ ಜೀವನ ಒಂದು ರೇಖೆ ಸಾಂಸಾರಿಕ ಜೀವನವನ್ನು ಉತ್ತಮಪಡಿಸಿಕೊಳ್ಳುವುದು ಮತ್ತು ಇನ್ನೊಂದು ರೆಕ್ಕೆ ಧಾರ್ಮಿಕ ಆಚರಣೆಯಿಂದ ಮಾನಸಿಕ ನೆಮ್ಮದಿಯನ್ನು ಪಡೆಯುವುದು ಕಾರಣ ನಿಮ್ಮ ದೈನಂದಿನ ಜೀವನದಲ್ಲಿ ಭಕ್ತಿ ಭಾವವನ್ನು ರೂಡಿಸಿಕೊಂಡು ಮನಶಾಂತಿ ಪಡೆಯಿರಿ ಎಂದು ಹಳೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
 ಕಾರ್ಯಕ್ರಮದಲ್ಲಿ ಹಾಲಿ ಪ್ರಾಂಶುಪಾಲರಾದ ಪ್ರಹ್ಲಾ ಚೌದರಿ ಮಾತನಾಡಿ, ಕಾಲೇಜು ಈಗ ಇಡೀ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ ಪ್ರತಿವರ್ಷ ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶವನ್ನು ಪಡೆದುಕೊಂಡು ಅಭ್ಯಾಸವನ್ನು ಮಾಡುತ್ತಿದ್ದಾರೆ ಬಿಎ ಬಿಕಾಂ ಜೊತೆಗೆ ಹಲವು ಹೊಸ ಕೋರ್ಸ್ ಗಳನ್ನು ಆರಂಭಿಸಲಾಗಿದೆ ಇದರಿಂದಾಗಿ ನಮ್ಮ ಕಾಲೇಜಿಗೆ ನ್ಯಾಕ್ ಸಮಿತಿಯಿಂದ ಎ ಗ್ರೇಡ್ ಲಭಿಸಿದೆ ಇದಕ್ಕೆಲ್ಲ  ಈ ಹಿಂದಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರೆ ಕಾರಣ ಎಂದು ಸ್ಮರಿಸಿದರು.
 ನಿವೃತ್ತ ಪ್ರಾಂಶುಪಾಲರಾದ ಇಂದಿರಾ ಉಪನ್ಯಾಸಕರಾದ ಶೈಲಜಾ ಇಂಗ್ಲಿಷ್ ಪ್ರಾಧ್ಯಾಪಕರಾದ ಪ್ರಕಾಶ್ ಕುಲಕರ್ಣಿ ಸೇರಿದಂತೆ ಇತರರು ಮಾತನಾಡಿದರು.
 ಈ ಕಾರ್ಯಕ್ರಮದಲ್ಲಿ ಕೇರಳ ಕರ್ನೂಲ್ ಭದ್ರಾವತಿ ಸೇರಿದಂತೆ ವಿವಿಧ ಕಡೆಯಿಂದ ಆಗಮಿಸಿದ ಸುಮಾರು 30-40 ಹಳೆ  ವಿದ್ಯಾರ್ಥಿಗಳು ಭಾಗವಹಿಸಿ ಅವರ ಹಿಂದಿನ ನೆನಪುಗಳನ್ನು ಸ್ಮರಿಸಿಕೊಂಡರು.  ಬಾಲಾಜಿ ಆರತಿ ಅಕ್ಬರ್ ರಿಯಾಜ್ ಸೇರಿದಂತೆ ಇನ್ನೂ ಕೆಲ ಹಳೆ ವಿದ್ಯಾರ್ಥಿಗಳು ಹಲವು ದಿನಗಳಿಂದ ಎಲ್ಲರನ್ನೂ ಸೇರಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಕ್ರಾಂತಿಗೆ ಅಜೇಯ್-ಬೃಂದಾ ಜೋಡಿ ಮೋಡಿಯ ಪಾರ್ಟ್ನರ್ಶಿಕ್ಷಕ ಕೃ? ಅರ್ಜುನಪ್ಪ ಹೊಸಮನಿ ಅವರಿಗೆ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿಪೊಲೀಸ್ ಇಲಾಖೆಯ ಸೇವೆ, ಶಿಸ್ತು ಮತ್ತು ತ್ಯಾಗ ಸಮಾಜಕ್ಕೆ ಮಾದರಿ: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿಭಯಮುಕ್ತ ಶಾಲಾ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬ ಶಿಕ್ಷಕರ, ಪೋಷಕರ ಕರ್ತವ್ಯ: ನ್ಯಾ. ಲತಾ ಕುಮಾರಿಬಳ್ಳಾರಿ ಜಿಲ್ಲೆಯಾದ್ಯಂತ ನ. 25 ರಂದು ಬೃಹತ್ ರಕ್ತದಾನ ಶಿಬಿರ: 5,000 ಯೂನಿಟ್ ಸಂಗ್ರಹ ಗುರಿಬಳ್ಳಾರಿ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಹುಂಡಿಯಲ್ಲಿ ₹1,17,87,950 ಕಾಣಿಕೆ ಸಂಗ್ರಹತಂದೆ ತಾಯಿಯನ್ನು ಮೊದಲು ಗೌರವಿಸಿ  : ನಿವೃತ್ತ ಪ್ರಾಂಶುಪಾಲ ಅಬ್ದುಲ್ ಮುತಾಲಿಬ್  ಕಿವಿಮಾತು 'ಸ್ವರಗಳ ಸಂಗಮ' ಸಂಗೀತ ಕಾರ್ಯಕ್ರಮ: ಪ್ರೇಕ್ಷಕರ ಮನಗೆದ್ದ ಗಾಯಕರುಬಸವಣ್ಣನವರ ಕುರಿತು  ರವಿ ಹಂಜ ರ   “ಬಸವ ಮಂಟಪ” ಕೃತಿಯನ್ನು ನಿಷೇಧಿಸಿ ಮತ್ತು  ಬಂಧಿಸಲು ಅಗ್ರಹ *ಸುಳೇಭಾವಿಯಲ್ಲಿ ನೂತನ ‘ಬನಶ್ರೀ ಭವನ’ ಉದ್ಘಾಟನೆ; ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಕೂಲ*