Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bagalkot

ಶಿಕ್ಷಕ ಕೃ? ಅರ್ಜುನಪ್ಪ ಹೊಸಮನಿ ಅವರಿಗೆ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿ

 

ರನ್ನ ಬೆಳಗಲಿ: ನ.೨೪: ಧಾರವಾಡದ ನಾಟ್ಯ ಸ್ಪೂರ್ತಿ ಆರ್ಟ್ಸ್ ಆ?ಯಂಡ್ ಕಲ್ಚರಲ್ ಅಕಾಡೆಮಿ (ರಿ.) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನ.೧೫ರಂದು ಆಯೋಜಿಸಿದ್ದ ೨೦೨೬ನೇ ಸಾಲಿನ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿ ಹಾಗೂ ಕರುನಾಡ ಸಾಧನ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಗರಾಳ ಗ್ರಾಮದ ಶ್ರೀ ಮಾಧವಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕ್ರಿಯಾಶೀಲ ಶಿಕ್ಷಕ ಕೃ? ಅರ್ಜುನಪ್ಪ ಹೊಸಮನಿ ಅವರಿಗೆ ಪ್ರತಿಷ್ಠಿತ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಧಾರವಾಡದಲ್ಲಿ ನಡೆದ ಸಮಾರಂಭವು ರೇವಣಸಿದ್ದೇಶ್ವರ ಮಠದ ಶ್ರೀ ಡಾ. ಬಸವರಾಜ ದೇವರು, ಮನಸೂರು ಅವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಿತು. ಪ್ರಶಸ್ತಿ ಸ್ವೀಕರಿಸಿದ ಕೃ? ಅರ್ಜುನಪ್ಪ ಹೊಸಮನಿ ಅವರನ್ನು ಶ್ರೀಗಳು ಆಶೀರ್ವದಿಸಿ, ಅವರ ಶೈಕ್ಷಣಿಕ ಹಾಗೂ ಸಮಾಜಮುಖಿ ಸೇವೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಸಿ. ಬೆಲ್ಲದ, ನಾಟ್ಯ ಸ್ಪೂರ್ತಿ ಆರ್ಟ್ಸ್ ಆ?ಯಂಡ್ ಕಲ್ಚರಲ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಹಾಗೂ ನೃತ್ಯ ನಿರ್ದೇಶಕ ಸದಾನಂದ ಬಂಗೆನ್ನವರ, ಕಾರ್ಯದರ್ಶಿ ಮಂಜುನಾಥ ಕಾದ್ರೊಳ್ಳಿ, ಸಾಹಿತಿ ಡಾ. ಎಚ್. ಬಿ. ನಡುವಿನಕೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಶಿಕ್ಷಣ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿ ಸೇವೆ ಸಲ್ಲಿಸುತ್ತಿರುವ ಕೃ? ಅರ್ಜುನಪ್ಪ ಹೊಸಮನಿ ಅವರಿಗೆ ರಾಜ್ಯಮಟ್ಟದ ಗೌರವ ಲಭಿಸಿರುವುದಕ್ಕೆ ಶ್ರೀ ಮಾಧವಾನಂದ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ, ಗ್ರಾಮದ ಗಣ್ಯರು, ಹಿತೈಷಿಗಳು ಮತ್ತು ಸ್ನೇಹಿತರು ಹ? ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಕ್ರಾಂತಿಗೆ ಅಜೇಯ್-ಬೃಂದಾ ಜೋಡಿ ಮೋಡಿಯ ಪಾರ್ಟ್ನರ್ಶಿಕ್ಷಕ ಕೃ? ಅರ್ಜುನಪ್ಪ ಹೊಸಮನಿ ಅವರಿಗೆ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿಪೊಲೀಸ್ ಇಲಾಖೆಯ ಸೇವೆ, ಶಿಸ್ತು ಮತ್ತು ತ್ಯಾಗ ಸಮಾಜಕ್ಕೆ ಮಾದರಿ: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿಭಯಮುಕ್ತ ಶಾಲಾ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬ ಶಿಕ್ಷಕರ, ಪೋಷಕರ ಕರ್ತವ್ಯ: ನ್ಯಾ. ಲತಾ ಕುಮಾರಿಬಳ್ಳಾರಿ ಜಿಲ್ಲೆಯಾದ್ಯಂತ ನ. 25 ರಂದು ಬೃಹತ್ ರಕ್ತದಾನ ಶಿಬಿರ: 5,000 ಯೂನಿಟ್ ಸಂಗ್ರಹ ಗುರಿಬಳ್ಳಾರಿ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಹುಂಡಿಯಲ್ಲಿ ₹1,17,87,950 ಕಾಣಿಕೆ ಸಂಗ್ರಹತಂದೆ ತಾಯಿಯನ್ನು ಮೊದಲು ಗೌರವಿಸಿ  : ನಿವೃತ್ತ ಪ್ರಾಂಶುಪಾಲ ಅಬ್ದುಲ್ ಮುತಾಲಿಬ್  ಕಿವಿಮಾತು 'ಸ್ವರಗಳ ಸಂಗಮ' ಸಂಗೀತ ಕಾರ್ಯಕ್ರಮ: ಪ್ರೇಕ್ಷಕರ ಮನಗೆದ್ದ ಗಾಯಕರುಬಸವಣ್ಣನವರ ಕುರಿತು  ರವಿ ಹಂಜ ರ   “ಬಸವ ಮಂಟಪ” ಕೃತಿಯನ್ನು ನಿಷೇಧಿಸಿ ಮತ್ತು  ಬಂಧಿಸಲು ಅಗ್ರಹ *ಸುಳೇಭಾವಿಯಲ್ಲಿ ನೂತನ ‘ಬನಶ್ರೀ ಭವನ’ ಉದ್ಘಾಟನೆ; ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಕೂಲ*