ಹಸಿರು ಕ್ರಾಂತಿ ವರದಿ ಬೆಳಗಾವಿ
2026-27ನೇ ಸಾಲಿನ ರಾಯಬಾಗ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಸೆ.22, ಸೆ.23 ರಂದು ರಾಯಬಾಗ ತಾಲೂಕು ಕ್ರೀಡಾಂಗಣ ನಡೆಯಲಿದೆ. ಆಸಕ್ತರು ತಾಲೂಕಿನ ಕ್ರೀಡಾಪಟುಗಳು ಸೆ.22ರ ಬೆಳಗ್ಗೆ 9.00 ಗಂಟೆಗೆ ಸಂಘಟಕರಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಬೆಳಗಾವಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಬಿ .ಶ್ರೀನಿವಾಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾಪಟುಗಳು ರಾಯಬಾಗ ತಾಲೂಕಿನ ರಹವಾಸಿಯಾಗಿದ್ದು, ಕ್ರೀಡಾಕೂಟದಲ್ಲಿ ತಾಲೂಕಿನ ಶಾಲಾ ಕಾಲೇಜು, ಯುವಕ, ಯುವತಿಯರು, ಸಂಘಗಳ ಹಾಗೂ ಕ್ರೀಡಾ ಸಂಘ-ಸಂಸ್ಥೆಗಳ ಕ್ರೀಡಾಪಟುಗಳು ಭಾಗವಹಿಸಬಹುದು. ಒಂದು ತಾಲೂಕಿನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಮತ್ತೊಂದು ತಾಲೂಕಿನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಕಡ್ಡಾಯವಾಗಿ ಬ್ಯಾಂಕ್ ಪಾಸ್‌ಬುಕ್ ಹಾಗೂ ಗುರುತಿನ ಚೀಟಿ (ಶಾಲಾ/ಕಾಲೇಜಿನ ಗುರುತಿನ ಚೀಟಿ, ಆಧಾರ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಸರ್ಕಾರದಿಂದ ಅಧಿಕೃತವಿರುವ ಇತರೆ ಗುರುತಿನ ಚೀಟಿಗಳು ಇದರಲ್ಲಿ ಯಾವುದಾದರೊಂದು) ಕಡ್ಡಾಯವಾಗಿ ತರಬೇಕು ಎಂದು ಸೂಚಿಸಿದ್ದಾರೆ.
ಸ್ಪರ್ಧೆಗಳ ವಿವರ:
ಅಥ್ಲೆಟಿಕ್ಸ್(ಪುರುಷರಿಗಾಗಿ):
100 ಮೀ, 200 ಮೀ, 400 ಮೀ, 800 ಮೀ, 1500 ಮೀ, 5000 ಮೀ, 1000 ಮೀ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥೋ, ಡಿಸ್ಕಸ್ ಥೋ, 110 ಮೀ ಹರ್ಡಲ್ಸ್, 400 x 100 ರಿಲೇ, 400 x 400 ರಿಲೇ.
ಅಥ್ಲೆಟಿಕ್ಸ್(ಮಹಿಳೆಯರಿಗಾಗಿ):
100 ಮೀ, 200 ಮೀ, 400 ಮೀ, 800 ಮೀ, 1500 ಮೀ, 3000 ಮೀ ಓಟ, ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥೋ, ಡಿಸ್ಕಸ್ ಥೋ, 100 ಮೀ ಹರ್ಡಲ್ಸ್, 4 x 100 ರಿಲೇ, 4 x 400 ರಿಲೇ.
ಗುಂಪು ಆಟಗಳು (ಪುರುಷ ಹಾಗೂ ಮಹಿಳೆಯರಿಗಾಗಿ):
ವಾಲಿಬಾಲ್, ಖೋಖೋ, ಕಬಡ್ಡಿ, ಥೋಬಾಲ್, ಯೋಗಾಸನ (ಪುರುಷ ಮತ್ತು ಮಹಿಳೆಯರಿಗಾಗಿ), ಫುಟಬಾಲ್(ಪುರುಷರಿಗಾಗಿ ಮಾತ್ರ). ಹೆಚ್ಚಿನ ಮಾಹಿತಿಗಾಗಿ ಮೊ.9448876238, ಮೊ.9916308587, ಮೊ. 9731320577 ಸಂಪರ್ಕಿಸಿ.