ಬಳ್ಳಾರಿ...19. ತುಂಗಾ ಭಾದ್ರಪದ ಮಾಸ ಸಾಂಸ್ಕ್ರತಿಕ ಸಂಭ್ರಮ ಆಂಗವಾಗಿ ಕಾಕರ್ಲ ತೋಟ ವೀರಾಂಜನೇಯ ಸ್ವಾಮಿ ದೇವಸ್ಥಾನ ಆವರಣ ದಲ್ಲಿ ಹಮ್ಮಿಕೊಂಡ ನಾಟಕೋತ್ಸವದಲ್ಲಿ ಹಿರಿಯ ಕಲಾವಿದ ವಿ.ರಾಮಚಂದ್ರ ನಿರ್ದೇಶನದಲ್ಲಿ ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ಕಲಾವಿದರು ಪ್ರದರ್ಶಿಸಿದ ಯಾರಿಗೆ ಬೇಕು ನಿನ್ನ ಕವಿತೆ ಹಾಸ್ಯ ನಾಟಕ , ರಾಧಾಕೃಷ್ಣ ಏಕಪಾತ್ರಾಭಿನಯ , ಪ್ರೇಕ್ಷಕರನ್ನು ರಂಜಿಸಿತು. ಕಲಾವಿದರಿಗೆ ವಿನಾಯಕ ಮಿತ್ರ ಮಂಡಳಿ ಪದಾಧಿಕಾರಿಗಳು ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಹಿರಿಯ ಕಲಾವಿದರು ವೀಣಾ ಆದೋನಿ, ರಾಮಚಂದ್ರ, ನಾಗಭೂಷಣ್ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ವೆಂಕಟೇಶ, ರಾಮಂಜಿನೆಯುಲು, ನಾಗಭೂಷಣ್, ಬಸವರಾಜ್ ಸ್ವಾಮಿ, ಜಡೆಪ್ಪ, ಜಿ. ಆರ್.ವೆಂಕಟೇಶ್, ನೃತ್ಯ ಗುರುಗಳು ಬಸವರಾಜ್, ಸಂಜನಾ, ರಾಧಾಕೃಷ್ಣ, ರಾಘವಿ, ವಸುಂಧರ, ರಂಗಾರೆಡ್ಡಿ, ಊರಿನ ಮುಖಂಡರು ವೀರೇಶ್, ಗುರುಸ್ವಾಮಿ, ರಮೇಶ್, ಶ್ರೀನಿವಾಸ್, ಮುಂತಾದವರು ಇದ್ದರು