ನಿಸ್ವಾರ್ಥ, ದೂರದೃಷ್ಟಿತ್ವ, ಅಭಿವೃದ್ಧಿ ಪರಿಕಲ್ಪನೆಯ ನಾಯಕ ದೇಶಕ್ಕೆ ದೊರೆತರೆ ಹೇಗೆ ಸ್ವಾವಲಂಬಿ ರಾಷ್ಟ್ರವನ್ನು ಕಟ್ಟಬಹುದು ಎಂಬುವುದಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಉದಾಹರಣೆಯಾಗಿ ನಿಲ್ಲುತ್ತಾರೆ. ಅವರ ಚಿಂತನೆಗಳು, ದೇಶದ ಭವಿಷ್ಯದ ಬಗ್ಗೆ ಅವರಿಗಿರುವ ಉದಾತ್ತ ಆಲೋಚನೆಗಳು ದೇಶವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ದೇಶದ ಪ್ರಧಾನಿಯಾಗಿ ಅವರು ಕಳೆದ 12 ವರ್ಷಗಳ ಕಾಲ ನಡೆಸಿದ ಆಡಳಿತ ಅವಧಿಯಲ್ಲಿ ಜಾರಿಗೆ ತಂದಿರುವ ಹತ್ತು ಹಲವಾರು ಯೋಜನೆಗಳು ಇಡೀ ಪ್ರಪಂಚವೇ ಭಾರತದತ್ತ ನೋಡುವಂತಹ ಪರಿಸ್ಥಿತಿ ಉದ್ಭವವಾಗಿದೆ.
ವಿಜ್ಞಾನ, ತಂತ್ರಜ್ಞಾನ, ರಾಜತಾಂತ್ರಿಕತೆ, ವಿದೇಶಿ ನೀತಿಗಳು, ಮತ್ತೊಂದು ರಾಷ್ಟ್ರದೊಂದಿಗಿನ ಸಂಬಂಧ ಬೆಳವಣಿಗೆಗಳು, ಆರ್ಥಿಕ ಪ್ರಗತಿ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಅವರು ಮಾಡಿರುವ ಅಮೋಘ ಸಾಧನೆ ದೇಶದ ಜನರಿಗೆ ಅಚ್ಚುಮೆಚ್ಚಾಗಿವೆ. 2014ರ ಮೇ 24ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ, ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ನಿಷ್ಕಳಂಕ, ಭ್ರಷ್ಟಾಚಾರರಹಿತ ಆಡಳಿತವನ್ನು ಅವರು ನೀಡಿದ್ದಾರೆ. ಸಾಮಾಜಿಕ, ಆರ್ಥಿಕ, ಮೂಲಸೌಕರ್ಯ, ರಕ್ಷಣೆ, ವಿದೇಶಾಂಗ ಕ್ಷೇತ್ರಗಳಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು, ಯೋಜನೆಗಳನ್ನು ತರುವ ಮೂಲಕ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ಇದರಿಂದಾಗಿ, ವಿಶ್ವಮಟ್ಟದಲ್ಲಿ ಭಾರತದ ಹಿರಿಮೆಯೂ ಏರಿಕೆಯಾಗಿದೆ. ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಅಭಿವೃದ್ಧಿಯು ಮಂದಗತಿಯಲ್ಲಿ ಸಾಗುತ್ತಿತ್ತು. ಇದನ್ನು ಪಾದರಸದಂತೆ ಚುರುಕಾಗಿಸಿದ ಹೆಗ್ಗಳಿಕೆ ಮೋದಿ ಸರ್ಕಾರಕ್ಕೆ ಸಲ್ಲಬೇಕು.
ನವ ಭಾರತ ನಿರ್ಮಾಣದತ್ತ ಮೋದಿ ಹೆಜ್ಜೆ:
ಭಾರತ ದೇಶದ ವಿಕಸಿತವಾಗುತ್ತಿದೆ. ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ದೇಶ ಹಿತಾಸಕ್ತಿ. ಈ ಹಿಂದೆ ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿತ್ತು ಎಂದೇ ಹೇಳಲಾಗಿತ್ತು. ಆದರೆ ಈಗ ಸಂಪೂರ್ಣ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟಿದೆ. ಹಲವಾರು ರಾಷ್ಟ್ರಗಳು ಕೊರೋನಾ ನಂತರ ಆರ್ಥಿಕವಾಗಿ ಕುಗ್ಗಿದರೆ ಭಾರತ ಮಾತ್ರ ದಿಟ್ಟ ಆರ್ಥಿಕತೆಯತ್ತ ಹೆಜ್ಜೆ ಹಾಕುತ್ತಿದೆ. ಆಡಳಿತಯಂತ್ರ ನಡೆಸುವವರು ಚಾಣಾಕ್ಷರಾಗಿದ್ದರೆ ಮಾತ್ರ ಇಂತಹ ಸಾಧನೆ ಸಾಧ್ಯ ಎಂಬುವುದು ಹಲವರ ಅಭಿಪ್ರಾಯ. ಇದಕ್ಕೆ ನರೇಂದ್ರ ಮೋದಿ ಅವರ ನಾಯಕತ್ವವೂ ಕಾರಣ ಎಂಬುವುದರಲ್ಲಿ ಎರಡು ಮಾತಿಲ್ಲ.
ದೇಶಕ್ಕೆ ಹಲವಾರು ಯೋಜನೆಗಳು ಬಂದಿದ್ದು ಮೋದಿ ಅವಧಿಯಲ್ಲಿ:
ಯೋಜನೆಗಳನ್ನು ಘೋಷಣೆ ಮಾಡಿ ಬಿಡುವುದು ಹೊಸದೇನಲ್ಲ. ಅದನ್ನು ಎಷ್ಟರಮಟ್ಟಿಗೆ ಜಾರಿಗೆ ತರಲಾಗಿದೆ ಎಂಬುವುದು ಕೂಡ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಯೋಜನೆಗಳನ್ನು ಸಾಕಷ್ಟು ತರುವುದಕ್ಕಿಂತ ತಂದಿರುವ ಯೋಜನೆಗಳನ್ನು ಸಾಕಷ್ಟು ಪ್ರಮಾಣದಲ್ಲಿ, ನೈಜ ಫಲಾನುಭವಿಗಳಿಗೆ ನೀಡಿದ್ದಾರೆ. ಇದರಿಂದಾಗಿ ಕೇಂದ್ರದಿಂದ ಬಿಡುಗಡೆಯಾಗುತ್ತಿರುವ ಹಣ ನೇರವಾಗಿ ಫಲಾನುಭವಿಗಳಿಗೆ ದೊರೆಯುತ್ತಿರುವುದು ಇಂದಿನ ವಿಕಸಿತ ಭಾರತಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
ಅದರಂತೆ ನರೇಂದ್ರ ಮೋದಿ ಅವರ ಹೆಣ್ಣು ಮಕ್ಕಳ ರಕ್ಷಣೆಗಾಗಿ ಜಾರಿಯಾಗಿರುವ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ನಿಜಕ್ಕೂ ಯಶಸ್ವಿಯತ್ತ ಹೆಜ್ಜೆ ಹಾಕಿದೆ. ಹೆಣ್ಣು ಮಕ್ಕಳ ಜನನವನ್ನು ನಾವು ಖುಷಿಯಿಂದ ಸಂಭ್ರಮಿಸಬೇಕು. ನಾವು ನಮ್ಮ ಹೆಣ್ಣು ಮಕ್ಕಳ ಬಗ್ಗೆ ಒಂದೇ ರೀತಿಯ ಅಭಿಮಾನ ಹೊಂದಿರಬೇಕು. ನಿಮ್ಮ ಪುತ್ರಿಯ ಜನನವಾದಾಗ ಕನಿಷ್ಟ 5 ಗಿಡಗಳನ್ನು ನೆಟ್ಟು ಸಂಭ್ರಮಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಮೋದಿಯವರು ಹೇಳಿದ್ದರು. ಅದರಂತೆ ಈ ಯೋಜನೆಯನ್ನು 2015ರ ಜನವರಿ 22 ರಂದು ಪ್ರಧಾನ ಮಂತ್ರಿಯವರು ಹರಿಯಾಣದ ಪಾಣಿಪತ್‌ನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಚಾಲನೆ ನೀಡಿದರು. ಈಗಲೂ ಇದು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.
ಅದರಂತೆ ಮೇಕ್ ಇನ್ ಇಂಡಿಯಾ ಮತ್ತು ಸ್ಟಾರ್ಟ್ಅಪ್ ಇಂಡಿಯಾ ಯೋಜನೆ ಕೂಡ ಉದ್ಯಮಿಗಳನ್ನು ಭಾರತಕ್ಕೆ ಹೆಚ್ಚು ಸೆಳೆಯಿತು. ಇದುವರೆಗೆ ಉದ್ಯಮಿಗಳು ಹೊರದೇಶದಲ್ಲಿ ಉತ್ಪಾದನೆ ಮಾಡಿ ಭಾರತದಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ, ನರೇಂದ್ರ ಮೋದಿ ಅವರು ಭಾರತದಲ್ಲಿಯೇ ಇರುವ ಜನರು ನಿರುದ್ಯೋಗಿಗಳಾಗಬಾರದು. ಇಲ್ಲಿರುವ ವಿದ್ಯಾವಂತರಿಗೆ ಸಾಕಷ್ಟು ಕೆಲಸ ಸಿಗಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದರು. ಹೂಡಿಕೆ ಸುಗಮಗೊಳಿಸಲು, ನಾವೀನ್ಯತೆ ಬೆಳೆಸಲು, ಅತ್ಯುತ್ತಮ ಮೂಲಸೌಕರ್ಯವನ್ನು ನಿರ್ಮಿಸಲು ಮತ್ತು ಭಾರತವನ್ನು ಉತ್ಪಾದನೆಯತ್ತ ದಿಟ್ಟ ಮತ್ತು ದೃಢ ಹೆಜ್ಜೆ ಇಡುವಂತೆ ಮಾಡಲು ಇದು ಹೆಚ್ಚು ಪ್ರೇರೇಪಿಸಿತು.
ರೈತರಿಗೆ ಹೆಚ್ಚು ಗೌರವ ಸಿಕ್ಕಿದ್ದೇ ಮೋದಿ ಅವಧಿಯಲ್ಲಿ:
ಅನ್ನದಾತರು ದೇಶದ ಬೆನ್ನೆಲುಬು ಎಂದು ಹೇಳಿದವರೇ ಹೆಚ್ಚು. ಆದರೆ, ವಾಸ್ತವದಲ್ಲಿ ಅವರಿಗೆ ಗೌರವ ಮತ್ತು ಗೌರವಧನ ಹೆಚ್ಚು ಸಿಕ್ಕಿದ್ದು ಮೋದಿ ಅವರ ಅವಧಿಯಲ್ಲಿ. ರೈತರಿಗಾಗಿ ಆರಂಭದಲ್ಲಿಯೇ ಪ್ರಧಾ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ-ಕಿಸಾನ್ ಯೋಜನೆ) ಜಾರಿಗೆ ತರಲಾಯಿತು. ಅದರಂತೆ ದೇಶದ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ ₹6,000 ವರೆಗೆ ನೀಡಲಾಗುತ್ತಿದೆ.
ದೊಡ್ಡ ಗೌರವ ತಂದುಕೊಟ್ಟ ಯೋಜನೆಗಳು:
ಕೇಂದ್ರ ಸರ್ಕಾರದಲ್ಲಿ ಆಡಳಿತ ನಡೆಸುವುದು ಎಂದರೆ ಸಾಮಾನ್ಯವಾದ ವಿಚಾರವಲ್ಲ. ಜನರ ಹಿತಾಸಕ್ತಿ ಬೇಕು. ಜತೆಗೆ ದೇಶದ ಗೌರವ ಮತ್ತು ಪ್ರತಿಷ್ಠೆಗಳನ್ನು ಕೂಡ ಕಾಪಾಡಬೇಕು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಚ್ಚು ಗೌರವ ತಂದುಕೊಟ್ಟ ಎಂಟು ಯೋಜನೆಗಳಿವೆ. ಆಯುಷ್ಮಾನ್ ಭಾರತ ಯೋಜನೆ, ಬಡವರಿಗೆ ಉಚಿತ ಸಿಲಿಂಡರ್ ನೀಡುವ ಉಜ್ವಲಾ ಯೋಜನೆ, ಸ್ಕಾಲರ್‌ಶಿಪ್, ಸಬ್ಸಿಡಿ, ಪಿಂಚಣಿ ಹಾಗೂ ಕೋವಿಡ್ ಪರಿಹಾರ ಧನವನ್ನು ನೇರವಾಗಿ ಫಲಾನುಭವಿಗಳ ಖಾತೆಗೇ ವರ್ಗಾವಣೆ ಮಾಡುವ ಜನ ಧನ್ ಯೋಜನೆ, ಕಿಸಾನ್ ಸಮ್ಮಾನ್ ನಿಧಿ, ಸಮಾಜದ ಎಲ್ಲ ಸ್ತರದ ಜನರಿಗೆ ಸಿಗುವ ವಿಮಾ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸ್ವಚ್ಛ ಭಾರತ ಅಭಿಮಾನ, ಸಣ್ಣ ಕೈಗಾರಿಕೆ ಹಾಗೂ ಉದ್ಯಮಗಳಿಗೆ ಸರ್ಕಾರ ಸಾಲ ನೀಡುವ ಮುದ್ರಾ ಯೋಜನೆಗಳು ಸಾಕಷ್ಟು ಜನಪರವಾಗಿವೆ.
ಇಂತಹ ಹತ್ತು ಹಲವಾರು ಯೋಜನೆಗಳು ದೇಶದ ಕೀರ್ತಿ ಪತಾಕೆ ಹಾರಿಸಿವೆ. ಅದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮೀರಿ ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿಯಾಗಿದ್ದಾರೆ. ಅದರಂತೆ, ಸತತ 12 ವರ್ಷಗಳ ಆಡಳಿತದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ತತ್ವಗಳೊಂದಿಗೆ ಸರ್ಕಾರವು ಕಲ್ಯಾಣ ಯೋಜನೆಗಳನ್ನು ದೇಶದ ಕೊನೆಯ ವ್ಯಕ್ತಿಗೂ ತಲುಪಿಸುವ ಮಾದರಿಯನ್ನು ರೂಪಿಸಿದೆ. ಒಬ್ಬ ಬಲಿಷ್ಠ ಪ್ರಧಾನಿ ಸಿಕ್ಕರೆ ದೇಶವನ್ನು ಹೇಗೆ ಕಟ್ಟಬಹುದು ಎಂಬುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಕಣ್ ಮುಂದೆ ಬಂದು ನಿಲ್ಲುತ್ತಾರೆ.
ಲೇಖನ:
-ಶಿವಾನಂದ ಮಖಣಾಪೂರ
ಬಿಜೆಪಿ ಯುವ ನಾಯಕ, ನಾಗಠಾಣ ವಿಧಾನಸಭಾ ಮತಕ್ಷೇತ್ರ.