ಗುಜರಾತ್ ರಾಜ್ಯವು ಭೂಕಂಪ, ಚಂಡಮಾರುತ, ಬರ ಹಾಗೂ ಹಲವು ಆಡಳಿತಾತ್ಮಕ ಸವಾಲುಗಳನ್ನು ಎದುರಿಸುವ ಸಂದರ್ಭದಲ್ಲಿ ರಾಜ್ಯದ ಪುನರ್‌ನಿರ್ಮಾಣ ಮತ್ತು ಆಡಳಿತವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತು ಅದನ್ನು ಯಶಸ್ವಿಯಾಗಿ ಎದುರಿಸಿ ರಾಷ್ಟ್ರ ರಾಜಕಾರಣಕ್ಕೆ ಸುವರ್ಣಮುನ್ನುಡಿ ಬರೆದವರೇ ಮೋದಿಜೀ.
2001ರ ಅಕ್ಟೋಬರ್ 7 ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಆರಂಭವಾದ ನರೇಂದ್ರ ಮೋದಿ ಅವರ ಸಾರ್ವಜನಿಕ ಸೇವೆಯ ಪಯಣ 25ನೇ ವರ್ಷಕ್ಕೆ ಪೊರೈಸುವತ್ತ ನಡೆದಿದೆ. ಕಳೆದ ಎರಡೂವರೆ ದಶಕಗಳಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿ ದೇಶದಲ್ಲಿ ಗುಜರಾತ್ ರಾಜ್ಯವನ್ನು ಮಾದರಿಯಾಗಿ ಮಾಡಿದರು. ನಂತರ ಭಾರತದ ಪ್ರಧಾನಮಂತ್ರಿಯಾಗಿ ಅವರು ವಹಿಸಿರುವ ಗುರುತರ ಜವಾಬ್ದಾರಿ ದೇಶದ ಸಮಕಾಲೀನ ರಾಜಕೀಯದಲ್ಲಿ ಗಮನಾರ್ಹ ಅಧ್ಯಾಯವಾಗಿದೆ. ಜಗತ್ತಿಗೆ ದೇಶದ ಆರ್ಥಿಕತೆ ಮೇಲೆತ್ತುವ ಮೂಲಕ ಜಗತ್ತೆ ನಿಬ್ಬೆರಗಾಗಿದೆ. ದೇಶ ಕೋವಿಡ್ ಸಂದರ್ಭದಲ್ಲಿಯ ಸವಾಲಗಳನ್ನು ಸಮರ್ಥವಾಗಿ ಎದುರಿಸಿ ದೇಶವಾಸಿಗಳಿಗೆ ಸ್ವದೇಶಿ ನಿರ್ಮಿತ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಿ ಜಗತ್ತಿನ ಇತರ ದೇಶಗಳಿಗೆ ಲಸಿಕೆ ರಪ್ತುಮಾಡಲಾಯಿತು.
ಗುಜರಾತ್ ಸಿಎಂ ಆಗಿ 13 ವರ್ಷಗಳ ಸೇವೆ:
ನೆರೆಯ ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್‌ದಿಂದ ಆಪರೇಶನ್ ಸಿಂದೂರವರೆಗೆ ಪಾಕಿಗಳ ನೆಲಕ್ಕೆ ನುಗ್ಗಿ ಮರ್ಮಾಘಾತ ನೀಡಿದವರೇ ಮೋದಿಜೀಯವರ ಟಿಂ. ದೇಶದ ರಕ್ಷಣಾ ವ್ಯವಸ್ಥೆಯನ್ನು ಪ್ರಪಂಚಕ್ಕೆ ಅನಾವರಣಗೊಳಿಸಿದರು. 2001ರಿಂದ 2014ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೃಷಿ, ಮೂಲಸೌಕರ್ಯ, ಕೈಗಾರಿಕೆ, ಹೂಡಿಕೆ ಮತ್ತು ಆಡಳಿತ ಸುಧಾರಣೆ ಸೇರಿದಂತೆ ಹಲವು ಕ್ಷೇತ್ರಗಳು ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಾದವು. ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಗುಜರಾತಿನಿಂದ ರಾಷ್ಟ್ರದ ನಾಯಕತ್ವದತ್ತ ಮುಖ ಮಾಡಿದ ಮೋದಿಜೀ:
2014ರ ಲೋಕಸಭಾ ಚುನಾವಣೆಯ ಅಭೂತಪೂರ್ವ ಗೆಲುವಿನೊಂದಿಗೆ ಮೇ 26ರಂದು ನರೇಂದ್ರ ಮೋದಿಯವರು ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2019ರಲ್ಲಿ 2ನೇ ಬಾರಿಗೆ ಮತ್ತು 2024ರಲ್ಲಿ 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೋದಿಜೀ ಪ್ರಧಾನಮಂತ್ರಿಯಾಗಿ ಅವರ ಆಡಳಿತದಲ್ಲಿ ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ್, ಜನಧನ್, ಉಜ್ವಲಾ, ಆಯುಷ್ಮಾನ್ ಭಾರತ್, ಮೂಲಸೌಕರ್ಯ ವಿಸ್ತರಣೆ, ಹಣಕಾಸು ಒಳಗೊಳ್ಳುವಿಕೆ ಮತ್ತು ಆತ್ಮನಿರ್ಭರ ಭಾರತ ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳು ಜಾರಿಗೆ ತರುವ ಮೂಲಕ ಈ ಯೋಜನೆಗಳ ಅನುಷ್ಠಾನಗೊಳಿಸಿದರು.
ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು:
ಮೋದಿ ಸರ್ಕಾರದ ಅವಧಿಯಲ್ಲಿ ರಸ್ತೆ, ರೈಲು, ಬಂದರು, ವಿಮಾನ ನಿಲ್ದಾಣ, ಡಿಜಿಟಲ್ ಸಂಪರ್ಕ ಮತ್ತು ಸಾರ್ವಜನಿಕ ಸೇವೆಗಳ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಮಹಿಳೆಯರು, ಯುವಕರು, ರೈತರು ಮತ್ತು ಬಡವರನ್ನು ಕೇಂದ್ರವಾಗಿಟ್ಟುಕೊಂಡು ವಿವಿಧ ಯೋಜನೆಗಳನ್ನು ರೂಪಿಸುವ ಮೂಲಕ ಅಭಿವೃದ್ಧಿಗೆ ಹೊಸ ಆದ್ಯತೆ ನೀಡಿದರು.
ವಿಶೇಷವಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ನೇರ ಹಣ ವರ್ಗಾವಣೆ ಮತ್ತು ವಿವಿಧ ಕಲ್ಯಾಣ ಯೋಜನೆಗಳ ಮೂಲಕ ಸರ್ಕಾರದ ಸೇವೆಗಳನ್ನು ಫಲಾನುಭವಿಗಳವರೆಗೆ ತಲುಪಿಸುವ ಪ್ರಯತ್ನಗಳು ಕಳೆದ ಒಂದು ದಶಕದಲ್ಲಿ ಆಡಳಿತದ ಪ್ರಮುಖ ಭಾಗವಾಗಿವೆ ಇದೊಂದು ಜಾಗತಿಕ ಮನ್ನಣೆ ಪಡೆದಿದೆ. ಜಗತ್ತಿನಲ್ಲಿ ತೆರೆಗೆ ಏರಿಕೆಯ ಗತಿಯಲ್ಲಿದ್ದಾಗ ತೆರೆಗೆ ಕಡಿಮೆ ಮಾಡುವ ಮೂಲಕ ಜನಸಾಮನ್ಯರಿಗೆ ನೆಮ್ಮದಿ ಬದುಕು ಕಲ್ಪಿಸುವ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಿರುಗಿ ನೋಡುವಂತೆ ಮಾಡಿದರು.
ಪ್ರಧಾನಮಂತ್ರಿಯಾಗಿ ಮೋದಿ ಅವರ ಅವಧಿಯಲ್ಲಿ ಭಾರತದ ವಿದೇಶಾಂಗ ನೀತಿ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಪಾತ್ರವೂ ಹೆಚ್ಚಿನ ಗಮನ ಸೆಳೆದಿದೆ. ಮೊನ್ನೆ ದೇಶದಲ್ಲಿ ಆಯೋಜಿಸಿದ್ದ ಬ್ರಿಕ್ಸ್-2026, ಜಿ.20 ಅಧ್ಯಕ್ಷತೆ, ಅಂತಾರಾಷ್ಟ್ರೀಯ ಸಹಕಾರ, ಜಾಗತಿಕ ದಕ್ಷಿಣದ ಧ್ವನಿ ಮತ್ತು ವಿವಿಧ ಬಹುಪಕ್ಷೀಯ ವೇದಿಕೆಗಳಲ್ಲಿ ಭಾರತದ ಸ್ಥಾನವನ್ನು ಜಗತ್ತಿನ ಗುರುವನ್ನಾಗಿಸಲಾಗಿದೆ. ರಷ್ಯಾ-ಉಕ್ರೆನ್ ಯುದ್ಧವನ್ನು ನಿಲ್ಲಿಸಿ ಭಾರತೀಯರನ್ನು ದೇಶಕ್ಕೆ ಮರಳಿ ಕರೆದುಕೊಂಡ ಬಂದರು. ಅಮೆರಿಕ-ಇರಾನ-ಇರಾಕ ಯುದ್ಧದಿಂದ ಜಗತ್ತಿಗೆ ತೈಲ ಬಿಕ್ಕಟ್ಟು ಎದುರಾಗಿ ತೈಲ ಬೆಲೆ ಗಗನಕ್ಕೆರಿದರೇ, ಅಲ್ಪಏರಿಕೆ ದರದಲ್ಲಿ ದೇಶದ ಜನತೆಗೆ ತೊಂದರೆ ಇಲ್ಲದೆ ವ್ಯವಸ್ಥೆ ಮಾಡಿದ ದೂರದೃಷ್ಟಿ ನಾಯಕ ಮೋದಿಜೀ.
ಇದರೊಂದಿಗೆ ಆರ್ಥಿಕತೆ, ಉದ್ಯೋಗ, ಬೆಲೆ ಏರಿಕೆ, ಕೃಷಿ, ಸಾಮಾಜಿಕ ನೀತಿಗಳು ಮತ್ತು ವಿವಿಧ ಆಡಳಿತಾತ್ಮಕ ನಿರ್ಧಾರಗಳ ಕುರಿತು ಸರ್ಕಾರದ ಪರ-ವಿರೋಧವಾಗಿ ಸಾರ್ವಜನಿಕ ಹಾಗೂ ರಾಜಕೀಯ ಚರ್ಚೆಗಳು ಮುಂದುವರಿದಿವೆ. ಕೋಟ್ಯಂತರ ರೈತರಿಗೆ ವರ್ಷಕ್ಕೆ 6 ಸಾವಿರ ರುಪಾಯಿ ಕೃಷಿ ಸಮ್ಮಾನ್ ನೀಡುತ್ತಿದ್ದಾರೆ. ಜನಸಾಮಾನ್ಯರ ಅರೊಗ್ಯಕ್ಕಾಗಿ 5 ಲಕ್ಷ ರುಪಾಯಿಯವರೆಗೆ ಅಯುಷ್ಮಾನ್ ಕಾರ್ಡ್, ಉಜ್ವಲಾ ಯೋಜನೆಯಡಿ ಕೋಟ್ಯಂತರ ಕುಟುಂಬಕ್ಕೆ ಗ್ಯಾಸ್ ಯೋಜನೆ, ಅಲ್ಪಸಂಖ್ಯಾತ ಹೆಣ್ಮಕ್ಕಳ ಸ್ವಾಭಿಮಾನ ದಾಂಪತ್ಯ ಜೀವನಕ್ಕಾಗಿ ತ್ರೀ ತಲಾಕ್ ರದ್ಧತಿ, ಜಮ್ಮು ಕಾಶ್ಮೀರದಲ್ಲಿದ್ದ 370 ರದ್ಧತಿ ಮಾಡಿ ಭಾರತದಲ್ಲಿ ಎರಡು ಕಾನೂನಿಗೆ ಅವಕಾಶವಿಲ್ಲ ಎಂಬುವುದನ್ನು ಮಾಡಿ ತೊರಿಸಿದರು. ಹೀಗಾಗಿ 25 ವರ್ಷಗಳ ಈ ಪಯಣವನ್ನು ಕೇವಲ ಸಾವಿರಾರು ಸಾಧನೆಗಳ ದೃಷ್ಟಿಯಿಂದ ಮಾತ್ರವಲ್ಲದೇ, ಅದರ ನೀತಿಗಳು ಮತ್ತು ಪರಿಣಾಮಗಳ ಸಮಗ್ರ ಹಿನ್ನೆಲೆಯಲ್ಲಿ ನೋಡುವ ಅಗತ್ಯವೂ ಇದೆ.
25ನೇ ವರ್ಷದ ಸೇವೆಗೆ ಪ್ರವೇಶಿಸಿದ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಜನರಿಗೆ ಕೃತಜ್ಞತೆ ಸಲ್ಲಿಸಿ, ಸಂವಿಧಾನದ ಮೌಲ್ಯಗಳನ್ನು ಮಾರ್ಗದರ್ಶಕವಾಗಿಟ್ಟುಕೊಂಡು ವಿಕಸಿತ ಭಾರತದ ಗುರಿ ಸಾಧನೆಗಾಗಿ ಮುಂದೆಯೂ ಶ್ರಮಿಸುವುದಾಗಿ ಹೇಳಿದ್ದಾರೆ. ಜನರ ಜೀವನಮಟ್ಟ ಸುಧಾರಿಸುವುದು ಮತ್ತು ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದು ತಮ್ಮ ನಿರಂತರ ಪ್ರಯತ್ನವಾಗಿದೆ.
ಭಾರತದಲ್ಲಿ ರಾಜಕಾರಣಿಯೋರ್ವ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಅಳೆಯುವುದು ಕೇವಲ ಅಧಿಕಾರದಲ್ಲಿದ್ದ ಅವಧಿಯ ಲೆಕ್ಕಾಚಾರವಲ್ಲ. ಆ ಅವಧಿಯಲ್ಲಿ ಕೈಗೊಂಡ ನಿರ್ಧಾರಗಳು, ರೂಪಿಸಿದ ನೀತಿಗಳು, ಜಾರಿಗೆ ತಂದ ಯೋಜನೆಗಳು, ಎದುರಿಸಿದ ಸವಾಲುಗಳು ಮತ್ತು ಅವುಗಳ ಪರಿಣಾಮಗಳ ಒಟ್ಟಾರೆ ಚಿತ್ರಣವೇ ಆ ಪಯಣದ ನಿಜವಾದ ಅರ್ಥವನ್ನು ನೀಡುತ್ತದೆ.
ಗುಜರಾತ್‌ನ ಮುಖ್ಯಮಂತ್ರಿಯಾಗಿ ಆರಂಭವಾದ ಪಯಣವು ಭಾರತದ ಪ್ರಧಾನಮಂತ್ರಿಯ ಹುದ್ದೆಯವರೆಗೆ ವಿಸ್ತರಿಸಿರುವುದು ನರೇಂದ್ರ ಮೋದಿ ಅವರ ರಾಜಕೀಯ ಜೀವನದ ಪ್ರಮುಖ ಘಟ್ಟವಾಗಿದೆ. 25 ವರ್ಷಗಳ ಈ ಪಯಣವು ಭಾರತದ ಸಮಕಾಲೀನ ರಾಜಕೀಯ ಮತ್ತು ಆಡಳಿತದ ಬದಲಾವಣೆಗಳನ್ನು ದಾಖಲಿಸುವ ಮಹತ್ವದ ಅಧ್ಯಾಯವಾಗಿ ಉಳಿದಿದೆ.
ಜಗತ್ತಿನ ಬಲಾಢ್ಯ ರಾಷ್ಟ್ರಗಳ ಸಾಲಿಗೆ ಭಾರತ:
ಮುಂದಿನ ದಿನಗಳಲ್ಲಿ ವಿಕಸಿತ ಭಾರತದ ಗುರಿಯತ್ತ ಸಾಗುವ ಸಂದರ್ಭದಲ್ಲಿ ಕೈಗೊಳ್ಳುವ ನೀತಿಗಳು, ಅವುಗಳ ಅನುಷ್ಠಾನ ಮತ್ತು ಜನರ ಬದುಕಿನ ಮೇಲೆ ಬೀರುವ ಪರಿಣಾಮಗಳು ಈ ಪಯಣದ ಮುಂದಿನ ಅಧ್ಯಾಯವನ್ನು ರೂಪಿಸಲಿವೆ. ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿರುವ ಭಾರತೀಯರು, ಅನಿವಾಸಿ ಭಾರತೀಯರ ಗೌರವ 2014 ರಿಂದ ಬದಲಾಗಿದೆ. ಜಗತ್ತಿನ ಬಲಾಢ್ಯ ರಾಷ್ಟ್ರಗಳ ಸಾಲಿಗೆ ಭಾರತ ನಿಂತಿದೆ. ಅದಕ್ಕೆ ಭಾರತೀಯರು ಮತದಾನದ ಮೂಲಕ ಮೋದಿಯವರ ಮೇಲೆ ನಂಬಿಕೆಯಿಟ್ಟು 3 ಬಾರಿ ಮಾಡಿದ ಆಶೀರ್ವಾದವೇ ಇಂದು ದೇಶಕ್ಕೆ ಶ್ರೀರಕ್ಷೆಯಾಗಿದೆ.
-ಎಫ್.ಎಸ್.ಸಿದ್ದನಗೌಡರ (ಹೊಸೂರ)
ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯರು.