Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನವಮನ್ವಂತರದ ಅನನ್ಯ ಸಾಧಕರು : ಪದ್ಮಶ್ರೀ ಡಾ. ಪ್ರಭಾಕರ ಕೋರೆ

(ಶಿಕ್ಷಣ, ಆರೋಗ್ಯ, ಸಂಶೋಧನೆ ಮತ್ತು ಸಮಾಜಸೇವೆಯ ಮೂಲಕ ನವಭಾರತದ ಕನಸಿಗೆ ಜೀವ ತುಂಬಿದ ದೂರದರ್ಶಿ ನಾಯಕ)

ವ್ಯಕ್ತಿಯ ಸಾಧನೆಯನ್ನು ಅಳೆಯಬೇಕಾದರೆ ಅವರು ಎಷ್ಟು ಎತ್ತರದ ಹುದ್ದೆಗಳನ್ನು ಅಲಂಕರಿಸಿದರು ಎಂಬುದಕ್ಕಿಂತ ಸಮಾಜದ ಬದುಕಿನಲ್ಲಿ ಎಷ್ಟು ಶಾಶ್ವತ ಬದಲಾವಣೆಯನ್ನು ತಂದರು ಎಂಬುದೇ ನಿಜವಾದ ಮಾನದಂಡ. ಈ ದೃಷ್ಟಿಯಿಂದ ನೋಡಿದರೆ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಶಿಕ್ಷಣ, ಆರೋಗ್ಯ, ಸಂಶೋಧನೆ ಮತ್ತು ಮಾನವೀಯ ಸೇವೆಗಳ ಮೂಲಕ ಒಂದು ಹೊಸ ಯುಗವನ್ನು ನಿರ್ಮಿಸಿದ ಅಪರೂಪದ ರಾಷ್ಟ್ರನಿರ್ಮಾತೃ.

ಅಮೃತ ಮಹೋತ್ಸವದ ಸಂಭ್ರಮದೊಂದಿಗೆ ೮೦ನೇ ವಸಂತದತ್ತ ದಾಪುಗಾಲಿಟ್ಟಿರುವ ಈ ಸಂದರ್ಭದಲ್ಲಿ ಅವರ ಜೀವನಪಥವನ್ನು ಕುರಿತು ಮಾತನಾಡಲು ನನಗೆ ಹೆಮ್ಮೆಯೆನಿಸುತ್ತದೆ. ಗ್ರಾಮೀಣ ಹಿನ್ನೆಲೆಯಿಂದ ಆರಂಭವಾದ ಕನಸು ಇಂದು ವಿಶ್ವದ ಜ್ಞಾನಸಾಮ್ರಾಜ್ಯವಾಗಿ ರೂಪುಗೊಂಡಿರುವುದು ಗೋಚರಿಸುತ್ತದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವ್ಯಕ್ತಿ ದೃಢ ಸಂಕಲ್ಪ, ಶ್ರಮ, ಶಿಸ್ತು ಮತ್ತು ದೂರದೃಷ್ಟಿ ಇದ್ದರೆ ಸಮಾಜದ ಭವಿಷವನ್ನೇ ರೂಪಿಸಬಹುದು ಎಂಬುದಕ್ಕೆ ಡಾ. ಪ್ರಭಾಕರ ಕೋರೆ ಅವರು ಜೀವಂತ ಸಾಕ್ಷಿಯಾಗಿದ್ದಾರೆ.

news_1785530243_0_344.webp

 

ದೂರದರ್ಶಿತ್ವವೇ ಯಶಸ್ಸಿನ ಮೂಲಮಂತ್ರ : ಡಾ. ಕೋರೆ ಅವರ ನಾಯಕತ್ವದ ಕೇಂದ್ರಬಿಂದು ದೂರದೃಷ್ಟಿ. ಇಂದಿನ ಅಗತ್ಯಗಳನ್ನು ಮಾತ್ರವಲ್ಲ, ಮುಂದಿನ ಹಲವು ದಶಕಗಳ ಅಗತ್ಯಗಳನ್ನು ಮುಂಚಿತವಾಗಿಯೇ ಅರ್ಥಮಾಡಿಕೊಂಡು ಸಂಸ್ಥೆಗಳನ್ನು ರೂಪಿಸಿದ ಅಪರೂಪದ ಶಿಕ್ಷಣ ಚಿಂತಕರು ಅವರು. "ಗುಣಮಟ್ಟವೇ ಅಭಿವೃದ್ಧಿಯ ಆತ್ಮ" ಎಂಬ ತತ್ವವನ್ನು ಕಾರ್ಯರೂಪಕ್ಕೆ ತಂದವರು. ಅವರು ಕೈಗೆತ್ತಿಕೊಂಡ ಪ್ರತಿಯೊಂದು ಯೋಜನೆಯಲ್ಲೂ ಶಿಸ್ತು, ಸಮಯಪಾಲನೆ, ಗುಣಮಟ್ಟ ಮತ್ತು ಸಮಾಜೋಪಯೋಗಿತ್ವ ಎಂಬ ನಾಲ್ಕು ಮೌಲ್ಯಗಳು ಸ್ಪ?ವಾಗಿ ಗೋಚರಿಸುತ್ತವೆ.

ಕೆಎಲ್‌ಇಗೆ ಜಾಗತಿಕ ಮೆರಗು ತಂದ ಶಿಲ್ಪಿ : ಕೆಎಲ್‌ಇ ಸಂಸ್ಥೆಯು ಇಂದು ೩೧೮ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬದುಕನ್ನು ರೂಪಿಸುತ್ತಿದೆ. ಈ ವಿಸ್ತಾರಕ್ಕೆ ಭದ್ರಬುನಾದಿ ಹಾಕಿದವರು ಡಾ. ಪ್ರಭಾಕರ ಕೋರೆ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ವೈದ್ಯಕೀಯ, ತಾಂತ್ರಿಕ, ಔಷಧೀಯ, ದಂತ ವೈದ್ಯಕೀಯ, ನರ್ಸಿಂಗ್, ಕಾನೂನು, ಕೃಷಿ, ನಿರ್ವಹಣೆ ಮತ್ತು ಸಂಶೋಧನೆವರೆಗೆ ಸಮಗ್ರ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸಿದ ಅವರ ಕೊಡುಗೆ ಭಾರತೀಯ ಶಿಕ್ಷಣ ಇತಿಹಾಸದಲ್ಲಿ ವಿಶಿಷ ಸ್ಥಾನ ಪಡೆದಿದೆ.

ಕೆಎಲ್‌ಇ ಕಾಹೆರ್ : ಜಾಗತಿಕ ವೈದ್ಯಕೀಯ ಶಿಕ್ಷಣದ ಕೇಂದ್ರ : ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ಏಂಊಇಖ) ಇಂದು ಭಾರತದ ಪ್ರತಿಷ್ಠಿತ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ವೈದ್ಯಕೀಯ ಶಿಕ್ಷಣ, ದಂತ ವೈದ್ಯಕೀಯ, ಔ?ಧ ವಿಜ್ಞಾನ, ನಸಿಂಗ್, ಫಿಸಿಯೋಥೆರಪಿ, ಸಾರ್ವಜನಿಕ ಆರೋಗ್ಯ ಹಾಗೂ ಅತ್ಯಾಧುನಿಕ ಸಂಶೋಧನೆಗಳ ಕ್ಷೇತ್ರದಲ್ಲಿ ಕಾಹೆರ್ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಈ ವಿಶ್ವವಿದ್ಯಾಲಯದ ಬೆಳವಣಿಗೆಯ ಹಿಂದೆ ಡಾ. ಪ್ರಭಾಕರ ಕೋರೆ ಅವರ ದೃಢಸಂಕಲ್ಪ ಅಡಗಿದೆ. ವಿಶ್ವದ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯಗಳೊಂದಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಭಾಗಿತ್ವಗಳನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಜಾಗತಿಕ ಅವಕಾಶಗಳನ್ನು ಒದಗಿಸಿದ್ದಾರೆ. ಜ್ಞಾನಕ್ಕೆ ಗಡಿಗಳಿಲ್ಲ ಎಂಬ ತತ್ವವನ್ನು ಕಾಹೆರ್ ಮೂಲಕ ಅವರು ಕಾರ್ಯರೂಪಕ್ಕೆ ತಂದಿದ್ದಾರೆ.

ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ : ಉನ್ನತ ತಾಂತ್ರಿಕ ಶಿಕ್ಷಣವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಡಾ. ಕೋರೆ ಅವರು ನೀಡಿದ ಮಾರ್ಗದರ್ಶನ ಅತ್ಯಂತ ಮಹತ್ವದ್ದಾಗಿದೆ. ಸಂಶೋಧನೆ, ನವೋದ್ಯಮ, ಸ್ಟಾರ್ಟ್‌ಅಪ್ ಸಂಸ್ಕೃತಿ, ಕೈಗಾರಿಕೆ-ವಿಶ್ವವಿದ್ಯಾಲಯ ಸಹಯೋಗ, ಕೌಶಲ್ಯಾಧಾರಿತ ಶಿಕ್ಷಣ ಮತ್ತು ಜಾಗತಿಕ ಉದ್ಯೋಗಾರ್ಹತೆಗಳನ್ನು ಕೇಂದ್ರವಾಗಿಟ್ಟುಕೊಂಡು ವಿಶ್ವವಿದ್ಯಾಲಯವನ್ನು ಬೆಳೆಸಲಾಗಿದೆ. ಇಂದು ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದೇಶ-ವಿದೇಶಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹಾಗೂ ಉದ್ಯಮಿಗಳಾಗಿ ಹೊರಹೊಮ್ಮುತ್ತಿರುವುದು ಅವರ ಶಿಕ್ಷಣದ ದೂರದೃಷ್ಟಿಗೆ ಸಾಕ್ಷಿಯಾಗಿದೆ.

ಕೆಎಲ್‌ಇ ಆರೋಗ್ಯ ಸೇವೆ : ಮಾನವೀಯತೆಯ ಜೀವಂತ ಪ್ರತೀಕ- ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವು ಕೇವಲ ಆಸ್ಪತ್ರೆಯಲ್ಲ; ಅದು ಆಶಾಕಿರಣ. ಲಕ್ಷಾಂತರ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆಯನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಮೂಲಕ ಆರೋಗ್ಯ ಸೇವೆಗೆ ಹೊಸ ಆಯಾಮ ನೀಡಲಾಗಿದೆ. ಬಡವರು, ಗ್ರಾಮೀಣರು ಮತ್ತು ಮಧ್ಯಮ ವರ್ಗದವರಿಗೆ ಗುಣಮಟ್ಟದ ಆರೋಗ್ಯ ಸೇವೆ ತಲುಪಬೇಕು ಎಂಬ ಅವರ ದೃಢ ಸಂಕಲ್ಪವೇ ಈ ಸಂಸ್ಥೆಗಳ ಯಶಸ್ಸಿನ ಮೂಲವಾಗಿದೆ.

ವೈದ್ಯಕೀಯ ಸೇವೆಯ ಜೊತೆಗೆ ಅಂಗಾಂಗ ಕಸಿ, ಕ್ಯಾನ್ಸರ್ ಚಿಕಿತ್ಸೆ, ಹೃದ್ರೋಗ, ನರರೋಗ, ತುರ್ತು ಚಿಕಿತ್ಸಾ ವ್ಯವಸ್ಥೆ, ತಾಯಂದಿರು ಮತ್ತು ಮಕ್ಕಳ ಆರೋಗ್ಯ, ಗ್ರಾಮೀಣ ಆರೋಗ್ಯ ಸೇವೆಗಳು ಹಾಗೂ ವೈದ್ಯಕೀಯ ಸಂಶೋಧನೆಗಳಲ್ಲಿ ಕೆಎಲ್‌ಇ ಇಂದು ರಾಷ್ಟ್ರಮಟ್ಟದಲ್ಲಿ ಗೌರವದ ಸ್ಥಾನ ಪಡೆದಿದೆ. ಕೋವಿಡ್ ಸಂಕಷ್ಟದಂತಹ ಸಂದರ್ಭದಲ್ಲಿಯೂ ಕೆಎಲ್‌ಇ ಸಂಸ್ಥೆ ಸಲ್ಲಿಸಿದ ಸೇವೆ ಸಮಾಜಮುಖಿ ವೈದ್ಯಕೀಯದ ಆದರ್ಶ ಮಾದರಿಯಾಗಿದೆ.

news_1785530289_0_800.webp

 

ಸಂಶೋಧನೆ ಮತ್ತು ನವೋದ್ಯಮಕ್ಕೆ ಪ್ರೋತ್ಸಾಹ : ವಿಶ್ವದ ಅಭಿವೃದ್ಧಿ ಸಂಶೋಧನೆಯ ಮೇಲೆ ನಿಂತಿದೆ ಎಂಬ ಅರಿವು ಡಾ. ಕೋರೆ ಅವರಿಗೆ ಬಹಳ ಹಿಂದೆಯೇ ಇತ್ತು. ಆದ್ದರಿಂದ ವೈದ್ಯಕೀಯ, ಔಷಧ ವಿಜ್ಞಾನ, ಜೈವಿಕ ವಿಜ್ಞಾನ ಹಾಗೂ ಸಾರ್ವಜನಿಕ ಆರೋಗ್ಯ ಕ್ಷೇತ್ರಗಳಲ್ಲಿ ಗುಣಮಟ್ಟದ ಸಂಶೋಧನೆಗೆ ಅವರು ಅಪಾರ ಉತ್ತೇಜನ ನೀಡಿದ್ದಾರೆ. ಇಂದು ಕೆಎಲ್‌ಇಯ ಅನೇಕ ಸಂಶೋಧನಾ ಕೇಂದ್ರಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ.

ಗ್ರಾಮೀಣ ಯುವಕರಿಗೆ ಸ್ಫೂರ್ತಿಯ ಶಿಖರ : ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ, ಸೀಮಿತ ಅವಕಾಶಗಳ ನಡುವೆ ಬೆಳೆದು, ವಿಶ್ವಮಟ್ಟದ ಶಿಕ್ಷಣ ಸಾಮ್ರಾಜ್ಯವನ್ನು ನಿರ್ಮಿಸಿರುವ ಡಾ. ಪ್ರಭಾಕರ ಕೋರೆ ಅವರ ಬದುಕು ಭಾರತೀಯ ಯುವಜನತೆಗೆ ಅಮೂಲ್ಯ ಸಂದೇಶವನ್ನು ನೀಡುತ್ತದೆ. ಸಾಧನೆಗೆ ಜನ್ಮಸ್ಥಳ ಅಡ್ಡಿಯಾಗುವುದಿಲ್ಲ; ದೃಷ್ಟಿ, ಶ್ರಮ, ಪ್ರಾಮಾಣಿಕತೆ ಮತ್ತು ಸಮಾಜದ ಮೇಲಿನ ಬದ್ಧತೆಯೇ ಯಶಸ್ಸಿನ ನಿಜವಾದ ಬಂಡವಾಳ ಎಂಬುದನ್ನು ಅವರ ಜೀವನ ಸ್ಪಷ್ಟಪಡಿಸುತ್ತದೆ. ಅವರ ಸಾಧನೆ ಗ್ರಾಮೀಣ ಪ್ರತಿಭೆಗೆ ಆತ್ಮವಿಶ್ವಾಸ ತುಂಬುವ ಶಕ್ತಿಯಾಗಿದೆ. ಶಿಕ್ಷಣದ ಮೂಲಕ ಸಮಾಜವನ್ನು ಪರಿವರ್ತಿಸಬಹುದು, ಸಂಸ್ಥೆಗಳ ಮೂಲಕ ರಾಷ್ಟ್ರವನ್ನು ಕಟ್ಟಬಹುದು ಮತ್ತು ಸೇವೆಯ ಮೂಲಕ ಜನಮನಗಳನ್ನು ಗೆಲ್ಲಬಹುದು ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ್ದಾರೆ.

ಸಮಾಜಮುಖಿ ಅಭಿವೃದ್ಧಿಯ ಶಾಶ್ವತ ಪರಂಪರೆ : ಶಿಕ್ಷಣದ ಜೊತೆಗೆ ಸಹಕಾರಿ ಕ್ಷೇತ್ರ, ಕೃಷಿ, ಬ್ಯಾಂಕಿಂಗ್, ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಬಲೀಕರಣ ಹಾಗೂ ಧಾರ್ಮಿಕ-ಸಾಮಾಜಿಕ ಸಂಘಟನೆಗಳ ಮೂಲಕ ಅವರು ಕೈಗೊಂಡಿರುವ ಕಾರ್ಯಗಳು ಸಮಾಜದ ಸರ್ವಾಂಗೀಣ ಅಭಿವೃದ್ಧಿಯತ್ತ ಕೇಂದ್ರೀಕೃತವಾಗಿವೆ. ಅಭಿವೃದ್ಧಿ ಎಂದರೆ ಕೇವಲ ಕಟ್ಟಡಗಳ ನಿರ್ಮಾಣವಲ್ಲ; ಮನುಷ್ಯನ ಜೀವನಮಟ್ಟವನ್ನು ಉನ್ನತೀಕರಿಸುವುದು ಎಂಬ ಅವರ ದೃಷ್ಟಿಕೋನವೇ ಅವರನ್ನು ವಿಶಿಷ್ಟ ನಾಯಕರನ್ನಾಗಿ ಮಾಡಿದೆ.

ನಾಲ್ಕು ದಶಕಗಳಿಗೂ ಅಧಿಕ ಕಾಲ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಸಲ್ಲಿಸಿರುವ ಸೇವೆ ಭಾರತೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಜರಾಮರ ಅಧ್ಯಾಯವಾಗಿದೆ. ಅವರು ನಿರ್ಮಿಸಿರುವುದು ಕೇವಲ ಸಂಸ್ಥೆಗಳಲ್ಲ; ವಿಶ್ವಾಸ, ಮೌಲ್ಯ, ಗುಣಮಟ್ಟ ಮತ್ತು ಮಾನವೀಯತೆಯ ಮೇಲೆ ನಿಂತಿರುವ ಶಾಶ್ವತ ಪರಂಪರೆ.

news_1785531313_0_401.webp

ಇಂದು ಅವರ ೮೦ನೇ ಜನ್ಮವರ್ಷವು ಕೇವಲ ಒಂದು ವ್ಯಕ್ತಿಯ ಜನ್ಮದಿನವಲ್ಲ; ಅದು ಶಿಕ್ಷಣ, ಆರೋಗ್ಯ ಮತ್ತು ಸಮಾಜಸೇವೆಯ ಮಹಾಯಾತ್ರೆಯ ಸಂಭ್ರಮ. ಗ್ರಾಮೀಣ ನೆಲದಿಂದ ಜಾಗತಿಕ ವೇದಿಕೆಯವರೆಗೆ ಸಾಗಿದ ಅವರ ಜೀವನಯಾನ, ಭಾರತದ ಪ್ರತಿಯೊಬ್ಬ ಯುವಕ-ಯುವತಿಗೂ "ಕನಸು ಕಾಣಿರಿ, ಶ್ರಮಿಸಿರಿ, ಸಮಾಜಕ್ಕಾಗಿ ಬದುಕಿರಿ" ಎಂಬ ಸ್ಫೂರ್ತಿದಾಯಕ ಸಂದೇಶವನ್ನು ಸಾರುತ್ತದೆ. ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ವ್ಯಕ್ತಿಯಲ್ಲ; ಅವರು ಶಿಕ್ಷಣದ ಮೂಲಕ ಸಮಾಜವನ್ನು ರೂಪಿಸಿದ ಯುಗಪುರುಷರು. ಅವರ ಜೀವನಗಾಥೆ ಮುಂದಿನ ಪೀಳಿಗೆಗೆ ದಾರಿದೀಪ, ಅವರ ಕಾರ್ಯಪಥ ಭಾರತೀಯ ಶಿಕ್ಷಣ ಇತಿಹಾಸದ ಸುವರ್ಣ ಅಧ್ಯಾಯ ಎಂಬುದನ್ನು ಮರೆಯಬಾರದು.

 

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್"ಮೂಡಲಗಿ ಕೋ-ಆಪರೇಟಿವ್ ಬ್ಯಾಂಕಿಗೆ ೮೦.೦೨ ಲಕ್ಷ ಲಾಭ"