ತಾಳಿಕೋಟೆ, ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಇಂದು ದಿ. ೧೯ ಶನಿವಾರರಂದು ಮದ್ಯಾಹ್ನ ೪ ಗಂಟೆಗೆ ಚಾಲನೆ ನೀಡಲಿದ್ದಾರೆಂದು ಪುರಸಭೆ ಮುಖ್ಯಾಧಿಕಾರಿ ಸುನೀಲ್ ಪಾಟೀಲ ಅವರು ತಿಳಿಸಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿ ಎಸ್‌ಎಫ್‌ಸಿ ಅನುದಾನದಡಿ ಸಿಸಿ ರಸ್ತೆ ಚರಂಡಿ ಕಾಮಗಾರಿಗಳಿಗೆ ಒಟ್ಟು ೫.೨೫ ಕೋಟಿ ರೂ. ವೆಚ್ಚದಲ್ಲಿ ಮೈಲೇಶ್ವರ ಅಗಸಿಯಿಂದ ಭೋವಿಗಲ್ಲಿ ಬಡಾವಣೆವರೆಗೆ ಭೂಮಿ ಪೂಜೆ ನೇರವೇರಿಸಲಿದ್ದಾರೆ.
ಅದೇ ರೀತಿ ಲೋಕೋಪಯೋಗಿ ಇಲಾಖೆಯ ವತಿಯಿಂದ ೨ ಕೋಟಿ ಅನುದಾನದಲ್ಲಿ ವಾರ್ಡ್ ನಂ. ೨ರಿಂದ ೬ರವರೆಗೆ ಸಿಸಿ ರಸ್ತೆ ಚರಂಡಿ ಕಾಮಗಾರಿಗಳು ನಡೆಯಲಿವೆ. ಒಟ್ಟು ೭.೨೫ ಕೋಟಿ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಎಸ್.ನಾಡಗೌಡ ಅವರು ಚಾಲನೆ ನೀಡಲಿದ್ದಾರೆ, ನಂತರ ೨೪><೭ ಕುಡಿಯುವ ನೀರಿನ ಯೋಜನೆಯ ಟ್ರಂಚ್ ೧ ಆಂಡ್ ೨ ಇದರಡಿಯಲ್ಲಿ ಗಣೇಶ ನಗರ ಹಾಗೂ ಕೆಚ್‌ಬಿ ಕ್ವಾಲನಿ ಯೊಳಗೊಂಡು ವಿವಿಧಡೆ ಪ್ರಾಯೋಗಿಕವಾಗಿ ನೀರು ಸರಬರಾಜಿಗೆ ಚಾಲನೆ ನೀಡಲಿದ್ದಾರೆ. ಸದರಿ ಕಾಮಗಾರಿ ಚಾಲನೆಯ ನಂತರ ಸಮಾರಂಭವು ಶ್ರೀ ಶರಣಮುತ್ಯಾರ ದೇವಸ್ಥಾನದ ಆವರಣದಲ್ಲಿ ನಡೆಯಲಿದ್ದು ಕಾರಣ ಸಾರ್ವಜನಿಕರು ಈ ಸಮಾರಂಭದಲ್ಲಿ ಭಾಗವಹಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ಸುನೀಲ್ ಪಾಟೀಲ ತಿಳಿಸಿದ್ದಾರೆ.