ಇಂಡಿ: ರಾಜ್ಯದಲ್ಲಿ ಎಂ.ಆರ್.ಎನ್ ಗ್ರೂಪ್ ವತಿಯಿಂದ ಬಯೋಪ್ಲಾಸ್ಟಿಕ್ ಕಾರ್ಖಾನೆ ಸ್ಥಾಪಿಸಲು ಯೋಜನೆ ರೂಪಿಸಲಾಗಿತ್ತು, ಆದರೆ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಅನುಮತಿ ನೀಡಲಿಲ್ಲ. ಆದರೆ ಮಹಾರಾ? ಆಂಧ್ರಪ್ರದೇಶ ರಾಜ್ಯಗಳು ತಾವಾಗಿಯೇ ಮುಂದೆ ಬಂದು ನಮಗೆ ಅನುಮತಿ ನೀಡಿವೆ. ಅಲ್ಲಿ ಸುಮಾರು ೬,೦೦೦ ಕೋಟಿ ರೂ. ಹೂಡಿಕೆ ಮಾಡಿ ಬಯೋ ಪ್ಲಾಸ್ಟಿಕ್ ಕಾರ್ಖಾನೆಗಳು ಸ್ಥಾಪಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದ ವಿಶಾಲ ಸೌಹಾರ್ದ ಪತ್ತಿನ ಸಹಕಾರ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಅನ್ಯ ರಾಜ್ಯದವರಿಗೆ ನಮ್ಮ ಸರ್ಕಾರಗಳು ಮಣೆ ಹಾಕುತ್ತವೆ. ಆದರೆ ಸ್ಥಲಿಯ ಕನ್ನಡಿಗರಿಗೆ ಅವಕಾಶ ನೀಡಲು ನೀರಾಕರಿಸುವುದು ಸರಿಯಲ್ಲ. ಕೇವಲ ಮಾರ್ವಾಡಿಗಳಿಗೆ ಅವಕಾಶ ನೀಡುವುದು ಎಷ್ಟು ಸಮಂಜಸ್ ಅವರಿಂದ ನಮ್ಮ ಜನರ ಸಹಾಯ ಹಸ್ತ ನೀಡಲು ಮುಂದೆ ಬರದೆ ಇರುವುದು ವಿಶಾದನಿಯ. ಇನ್ನೂ ಮುಂದೆಯಾದರು ಕನ್ನಡಿಗರಿಗೇ ಮೊದಲ ಆದ್ಯತೆ ಮತ್ತು ಅನುಕೂಲ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಲಾಭಕ್ಕಾಗಿ ಹೊಸ ದರ ನೀತಿಯನ್ನು ಪ್ರಸ್ತಾಪಿಸಿದ ನಿರಾಣಿ, ಸಾಮಾನ್ಯ ಜನರಿಗೆ ಒಂದು ದರ ಮತ್ತು ದೊಡ್ಡ ಕಂಪನಿಗಳಿಗೆ ಮತ್ತೊಂದು ದರ ನಿಗದಿ ಪಡಿಸಬೇಕು. ಸಾಮಾನ್ಯರಿಗೆ ಪ್ರತಿ ಕೆಜಿಗೆ ೪೦ ರೂ.ಹಾಗೂ ಶ್ರೀಮಂತ ಕಾರ್ಖಾನೆ/ಕಂಪನಿಗಳಿಗೆ ೬೦ ರೂ.ರಂತೆ ಸಕ್ಕರೆ ಖರೀದಿಗೆ ಸರ್ಕಾರ ಆದೇಶ ಹೊರಡಿಸಿದರೆ, ಕಬ್ಬು ಬೆಳೆಗಾರರಿಗೂ ಮತ್ತು ಸಕ್ಕರೆ ಉದ್ಯಮಕ್ಕೂ ಹೆಚ್ಚಿನ ಲಾಭ ತರಲು ಸಾಧ್ಯವಾಗುತ್ತದೆ. ಉದ್ಯಮ ರಂಗದಲ್ಲಿ ಸರ್ಕಾರಗಳು ರಾಜಕೀಯ ದ್ವೇ? ಸಾಧಿಸುವುದು ಸರಿಯಲ್ಲ ಉದ್ಯಮಗಳಿಗೆ ಬೆಂಬಲ ನೀಡಿದಾಗ ಮಾತ್ರ ರಾಜ್ಯದ ಅಭಿವೃದ್ದಿ ಸಾಧ್ಯ ಎಂದರು.
ತಮ್ಮ ಉದ್ಯಮದ ಯಶೋಗಾಥೆ ಹಂಚಿಕೊಂಡ ಅವರು, ಕೇವಲ ೧೦ ಲಕ್ಷ ರೂ. ಹೂಡಿಕೆಯೊಂದಿಗೆ ಪ್ರಾರಂಭವಾದ ಸಕ್ಕರೆ ಕಾರ್ಖಾನೆ, ಇಂದು ೨೫,೦೦೦ ಕೋಟಿ ರೂಪಾಯಿ ಬಂಡವಾಳದ ಬೃಹತ್ ಉದ್ಯಮವಾಗಿ ಬೆಳೆದಿದೆ. ಪ್ರಸ್ತುತ ನಮ್ಮ ಸಂಸ್ಥೆಯಲ್ಲಿ ೭೨,೦೦೦ಕ್ಕೂ ಹೆಚ್ಚು ಜನ ಉದ್ಯೋಗ ಮಾಡುತ್ತಿದ್ದಾರೆ. ಮುಂದಿನ ಎರಡು ವ?ಗಳಲ್ಲಿ ನಿರಾಣಿ ಗ್ರೂಪ್ ಒಟ್ಟು ಒಂದು ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಯುವಕರು ಕೈಗಾರಿಕೆಗಳ ಬಗ್ಗೆ ಜ್ಞಾನ ಬೆಳೆಸಿಕೊಳ್ಳಬೇಕು, ಪುಸ್ತಕಗಳನ್ನು ಓದಬೇಕು. ಸರ್ಕಾರದ ಸಹಾಯಧನ, ಸಾಲ ಸೌಲಭ್ಯಗಳ ಸದುಪಯೋಗ ಪಡಿಸಿಕೊಂಡು ಸ್ವಂತ ಉದ್ಯಮ ನಿರ್ಮಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.