LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆ

ಬಳ್ಳಾರಿ, ಸೆ.18: ಹಿಂದೂ ಮಹಾ ಗಣಪತಿ ಉತ್ಸವ-2026ರ ಅಂಗವಾಗಿ ಬಳ್ಳಾರಿ ನಗರದಲ್ಲಿ ಸೆ.20ರಂದು ಭವ್ಯ ಶೋಭಾಯಾತ್ರೆ ನಡೆಯಲಿದ್ದು, ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಉತ್ಸವದ ಕಾರ್ಯದರ್ಶಿ ಶರಣಪ್ಪ ಪಾಟೀಲ್ ತಿಳಿಸಿದರು.
ನಗರದ ಅನಂತಪುರ ರಸ್ತೆಯ ಸೆಂಟಿನರಿ ಹಾಲ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಭಜರಂಗದಳದ ವತಿಯಿಂದ ಸೆ.20ರ ಭಾನುವಾರ ಸಂಜೆ 4 ಗಂಟೆಗೆ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಸೆಂಟಿನರಿ ಹಾಲ್‌ನಿಂದ ಆರಂಭವಾಗುವ ಶೋಭಾಯಾತ್ರೆಯು ರಾಯಲ್ ಸರ್ಕಲ್, ಬ್ರೂಸ್‌ಪೇಟೆ, ಮೋತಿ ಸರ್ಕಲ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಬೆಂಗಳೂರು ರಸ್ತೆಯ ಕಾಲುವೆಗೆ ಸೇರಲಿದೆ, ಭವ್ಯ ಗಣೇಶ ಮೂರ್ತಿಯೊಂದಿಗೆ ನಡೆಯುವ ಶೋಭಾಯಾತ್ರೆ ಉತ್ಸವದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ತಿಳಿಸಿದರು.
ಹಿಂದೂ ಮಹಾ ಗಣಪತಿ ಉತ್ಸವದ ಅಂಗವಾಗಿ ಅದೃಷ್ಟ ಗಣೇಶ ಲಕ್ಕಿ ಡ್ರಾ ಆಯೋಜಿಸಲಾಗಿದೆ. ಚಂದನ ಸ್ವರ್ಣ ಮಂದಿರ್ ವತಿಯಿಂದ ಭಕ್ತರಿಗಾಗಿ 21 ಗೋಲ್ಡ್ ಕೋಟೆಡ್ ಗಣೇಶ ಮೂರ್ತಿಗಳನ್ನು ಪ್ರಾಯೋಜಿಸಲಾಗಿದ್ದು, ಲಕ್ಕಿ ಡ್ರಾ ಮೂಲಕ ಆಯ್ಕೆಯಾಗುವ ವಿಜೇತರಿಗೆ ಈ ಮೂರ್ತಿಗಳನ್ನು ನೀಡಲಾಗುವುದು ಎಂದು ಶರಣಪ್ಪ ಪಾಟೀಲ್ ಹೇಳಿದರು.
ಶೋಭಾಯಾತ್ರೆಯಲ್ಲಿ ಗಣೇಶ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವದ ಸಂಭ್ರಮವನ್ನು ಹೆಚ್ಚಿಸಬೇಕು. ಶಾಂತಿ, ಶಿಸ್ತು ಹಾಗೂ ಸೌಹಾರ್ದತೆಯಿಂದ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಮೇಶ್ ಬುಜ್ಜಿ, ಮಲ್ಲಿಕಾರ್ಜುನ, ಬಿ.ಕೆ. ಗಾದಿಲಿಂಗಗೌಡ, ಸಾಗರ್, ಮಲ್ಲಿಕಾರ್ಜುನ್, ಕಾಶಿರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೇಂದ್ರ ಸರ್ಕಾರ ಶೀಘ್ರ ಉದ್ಯೋಗ ಸೃಷ್ಟಿಗೆ ಮುಂದಾಗಲಿ: ಅಧ್ಯಕ್ಷ ಕಾರ್ತಿಕ ಪಾಟೀಲಪೌಷ್ಠಿಕ ಆಹಾರದಿಂದ ಆರೋಗ್ಯವಂತ ಸಮಾಜ ನಿರ್ಮಾಣ : ಡಿಸಿಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಯುವ ಮತದಾರರ ಮಿಂಚಿನ ನೋಂದಣಿ ಅಭಿಯಾನಕೋಟಿವೃಕ್ಷ ಅಭಿಯಾನದಿಂದ ಅರಣ್ಯ ಪ್ರದೇಶ ಹೆಚ್ಚಳ2026.27.ಸಾಲಿಗೆ 100 ಕೋಟಿ ಠೇವು ..ಪೂಜ್ಯ. ಮುರುಘರಾಜೇಂದ್ರ ಶ್ರೀ  ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲ