ಮುಗಳಖೋಡ (11) 2018 -19 ಸಾಲಿನಲ್ಲಿ ಸ್ಥಾಪಿನೆ ಗೊಂಡ ಸಿದ್ದಶ್ರೀ ಸೌಹಾರ್ದ ಸಹಕಾರಿ ಸಂಘ ಇಂದು ಒಟ್ಟು 2561 ಸದಸ್ಯರನ್ನು ಹೊಂದಿ 23 ಕೋಟಿ ಠೇವು ಸಂಗ್ರಹಸಿ 2026 _27 ನೇ ಸಾಲಿಗೆ 100 ಕೋಟಿ ಠೇವು ಸಂಗ್ರಹಿಸಿ ನಿಮ್ಮ ಅತ್ಯುತ್ತಮ ಸಹಕಾರಿ ಸಂಘವಾಗಿ ಉತ್ತಮವಾದ ಸೇವೆ ಒದಗಿಸುತ್ತದೆ ಎಂದು ಪೂಜ್ಯ ಡಾ. ಮುರುಘರಾಜೇಂದ್ರ ಶ್ರೀ ಗಳು ಹೇಳಿದರು .
ಅವರು ಗುರುವಾರ ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ ಭೃಹನ್ಮಠದ ಭವ್ಯ ವೇದಿಕೆಯಲ್ಲಿ ಸಿದ್ದಶ್ರೀ ಸೌಹಾರ್ದ ಸಹಕಾರಿ ಸಂಘದ 2025-26 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ದಿವ್ಯ ಸಾನಿಧ್ಯವಹಿಸಿ ಇಂದು ಏಷ್ಟೋ ಬ್ಯಾಂಕ್ ಗಳು ಹುಟ್ಟಿ ಗ್ರಾಹಕರಿಗೆ ಏನೇನೋ ಆಸೆ ತೋರಿಸಿ ಕೆಲವೇ ದಿನಗಳಲ್ಲಿ ಕಾಣೆಯಾಗಿ ಹೋಗುತ್ತವೆ ಆದರೆ ಶಕ್ತಿ ಪಿಠದ ಭಕ್ತರ ಇಷ್ಠಾರ್ಥ ಇಡೆರೆಸುವದರ ಜೋತೆ ಅವರು ಆರ್ಥಿಕವಾಗಿ ಸದೃಢ ಹೊಂದಿ ಉತ್ತಮ ಜೀವನ ಕಳೆಯಲಿ ಎಂಬ ಮಹಾದಾಸೆ ಹೊತ್ತು ಸ್ಥಾಪಿನೆ ಹೊಂದಿರುವ ಈ ನಿಮ್ಮ ಬ್ಯಾಂಕ್ ಗುರುವಿನ ಮಾರ್ಗದರ್ಶನ ದಲ್ಲಿ ಸೇವೆ ನಮ್ಮದು ಸಹಕಾರ ನಿಮ್ಮದು ಎಂಬ ದೆಯ ವಾಕ್ಯದೊಂದಿಗೆ ದಿನದ 24 ಗಂಟೆ ಸೂರ್ಯ ಚಂದ್ರರಿರುವರೆಗೆ ಸೇವೆ ಒದಗಿಸುತ್ತದೆ, ಯಾರು ಬಯ ಪಡೆಯದೆ ಶೇರು, ಠೇವು, ಸಾಲದ ವ್ಯವಹಾರ ಮಾಡಿ ಸದೃಢರಾಗಿ, ಶ್ರೀಗುರುಗಳ ಆಶೀರ್ವಾದ ಸದಾ ಕಾಲ ನಿಮ್ಮ ಮೇಲೆ ಇದೆ ಎಂದು ಆರ್ಶೀವಚನ ನುಡಿ ನುಡಿದರು. ಅಧ್ಯಕ್ಷ ಬಸವರಾಜ ಜೋಪಾಟಿ ಅಧ್ಯಕ್ಷತೆ ವಹಿಸಿ ವರದಿ ವಾಚಿಸಿದರು. ಜಗದೀಶ ಬೂದಿಹಾಳ ವಿಷಯ ಮಂಡಿಸಿದರು ಸಂತೋಷಿ ಪಾಟೀಲ ಲೆಕ್ಕ ಪರಿಶೋಧನಾ ಓದಿದರು ಸಿದ್ದರಾಮೇಶ್ವರ ಸ್ವಾಮಿ ಕೆ ವಿ ಜಮಾ ಖರ್ಚು ಓದಿದರು , ಅರುಣಕುಮಾರ ನಲವತ್ತವಾಡ ಜಿಡಗಾ , ಹಾರೂಗೇರಿ ,ಬೈಲಹೊಂಗಲ,ಬೀದರ ನಗರಗಳಲ್ಲಿ ನೂತನ ಶಾಖೆಗಳಾ ಪ್ರಾರಂಭದ ಬಗ್ಗೆ ಮಾತನಾಡಿದರು .ನಿವೃತ್ ಪೋಲೀಸ್ ಅಧಿಕಾರಿ ಚಂದ್ರಶೇಖರ ಜನವಾಡ, ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಚೂನಪ್ಪಾ ಪೂಜೇರಿ, ಸದಾಶಿವ ದೆಶಿಂಗೆ ಶಕ್ತಿ ಪಿಠದ ಪವಾಡ ಪಠಣೆ ಮಾಡಿದರು.
ಪ್ರಭುದೇವ ಸ್ವಾಮಿಗಳು,ಬಸವರಾಜ ತಡಸನವರ, ಅಣ್ಣಾಸಾಹೇಬ ಪಾಟೀಲ ನ್ಯಾಯವಾದಿ ಕೆ ಪಿ ಮಗದುಮ್ಮ ,ವೈದ್ಯ ವಿವೇಕ ನಾರಗೊಂಡ, ವೈದ್ಯೆ ಒಡೆಯರ ,ಅತಿಥಿಸ್ಥಾನ ವಹಿಸಿದ್ದರು. ಪುರಸಭೆಯ ಸದಸ್ಯರು ಸಂಸ್ಥೆಯ ನಿರ್ದೇಶಕರು ಸದಸ್ಯರು ಸಿಬ್ಬಂದಿಗಳು ಭಕ್ತರು ಇದ್ದರು. ಸೋಮು ಹೊರಟ್ಟಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.