ಮುಗಳಖೋಡ (೧೧) ಸಚಿವ ಸತೀಶ ಜಾರಕಿಹೊಳಿ ಅವರ ಮೇಲೆ ಇಡಿ ದಾಳಿ ಕಂಡಿಸಿ ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶುಕ್ರವಾರ ಪಟ್ಟಣದ ಜತ್ತ ಜಾಂಬೊಟಿ ರಾಜ್ಯ ಹೆದ್ದಾರಿ ಮಾರ್ಗದ ಮುಗಳಖೋಡ ವೃತ್ತದಲ್ಲಿ ವಾಹನಗಳನ್ನು ತಡೆದು ಟಾಯರ್ ಸುಟ್ಟು ಅರ್ಧ ಗಂಟೆಗಳ ಕಾಲ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಡಾ.ಚಂದ್ರು ಕುಲಿಗೋಡ ಮಾತನಾಡಿ ಸತೀಶ್ ಸಾವಕಾರ ಬಡವರ ಬಂಧು ದಿನ ದಲಿತರ ಹಾಗೂ ಹಿಂದುಳಿದವರ ನಾಯಕ, ಯಾವುದೇ ಅನ್ಯಾಯ ಮಾರ್ಗದಿಂದ ಹಣಗಳಿಸದೆ ನ್ಯಾಯಯುತ ಹಾಗೂ ಕಾನೂನು ಬದ್ಧವಾಗಿ ರಾಜಕೀಯದಲ್ಲಿ ಬೆಳೆದು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿತರಾಗಿರುವುದನ್ನು ಸಹಿಸದವರು ವಿನಾಕಾರಣದಿಂದ ಅವರ ಮೇಲೆ ಇಡಿ ದಾಳಿ ನಡೆದಿದೆ ಅದನ್ನು ಸಮರ್ಥವಾಗಿ ಎದುರಿಸಿ ಕಳಂಕ ರಹಿತರಾಗಿ ಜನನಾಯಕನಾಗಿ ಹೊರಹುಮ್ಮತ್ತಾರೆ ಎಂದು ಪ್ರತಿಭಟನೆಯ ಮುಂದಾತ್ವ ವಹಿಸಿ ಮಾತನಾಡಿದರು. ಪರಪ್ಪ ಖೆತಗೌಡರ ,ರಮೇಶ ಯಡವಣ್ಣವರ, ಪ್ರಕಾಶ್ ಆದಪ್ಪಗೊಳ, ನೇಮನ್ನಾ ಬಾಬಣ್ಣವರ ,ಲಕ್ಷ್ಮಣ್ಣ ಗೋಕಾಕ ,ಸುಖದೇವ ಕರಬಿಮಗೋಳ, ಅಶೋಕ ಬಾಗಿ, ರಾಜಕುಮಾರ ನಾಯಿಕ, ಶಿವಪ್ಪ ಹಳ್ಳೂರ, ಭೂಪಾಲ ಬಾಬಣ್ಣವರ, ಮುಪ್ಪಯ್ಯ ಹಿರೇಮಠ, ಪರಪ್ಪ ಕುಲಿಗೋಡ, ಚೇತನ ನಡುವಿನಕೆರಿ, ಶ್ರೀಶೈಲ ಕುಲಿಗೋಡ ಹಾಗೂ ನೂರಾರು ಕಾರ್ಯಕರ್ತರು ಅಭಿಮಾನಿಗಳು ಇದ್ದರು.
ಫೋಟೋ..ಮುಗಳಖೋಡ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.