.
ಇಂಡಿ: ಮಕ್ಕಳ ಅಭೀರುಚಿಗೆ ತಕ್ಕಂತೆ ಗುಣಾತ್ಮ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ನೀಡುವುದು ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಕರ ಮಾರ್ಗ ಮಾರ್ಗದರ್ಶನ ನೀಡಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿರುವು ಶಿಕ್ಷಕರ ಆಧ್ಯ ಕರ್ತವ್ಯವಾಗಿದೆ. ಉತ್ತಮ ಸಮಾಜ ನಿರ್ಮಾಣದ ಶಿಲ್ಪಿಗಳು ಯಾರಾದರು ಇದ್ದರೆ ಅದು ಶಿಕ್ಷಕರು ಎಂಬುದನ್ನು ಯಾರು ಅಲ್ಲಗಳೆಯುವಂತಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು
ಅವರು ಶುಕ್ರವಾರರಂದು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಗುರು ಭವನದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಂಡಿ ವತಿಯಿಂದ ಡಾ|| ಎಸ್.ರಾಧಾಕೃಷ್ಣನ್ ಅವರ ಜನ್ಮ ದಿನೋತ್ಸವದ ಅಂಗವಾಗಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲ ವೃತ್ತಿಗಳಲ್ಲಿ ಶ್ರೇಷ್ಟವಾದ ವೃತಿಯಾವುದಾದರು ಇದ್ದರೆ ಅದು ಶಿಕ್ಷಕ ವೃತ್ತಿಯಾಗಿದೆ. ಅಂತಹ ಗುರುವಿನ ಸ್ಥಾನದಲ್ಲಿರು ಶಿಕ್ಷಕರು ತಮ್ಮ ಘನತೆ ಗೌರವವನ್ನು ಉಳಿಸಿ ಬೆಳಸಿ ಕಾಪಾಡಿಕೊಂಡು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳಿಗೆ ಶಿಸ್ತು ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿ ಒಳ್ಳೆಯ ನೈತಿಕ ಮೌಲ್ಯಗಳನ್ನು ಬೊದಿಸುವುದು ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶಕರಾಗಿ ದೇಶದ ಒಬ್ಬ ಸತ್ಪ್ರಜೆ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಉಪವಿಭಾಗಾದಿಕಾರಿ ಚಿದಾನಂದ ಗುರುಸ್ವಾಮಿ, ವಾಯ್.ಟಿ.ಪಾಟೀಲ, ಪ್ರಸ್ತಾವಿಕವಾಗಿ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್.ನಡುಗಡ್ಡಿ ಮಾತನಾಡಿದರು. ನಿವೃತ್ತ ಶಿಕ್ಷಕರಾದ ಆರ್.ವಿ.ಪಾಟೀಲ ತಮ್ಮ ಅನಿಸಿಕೆ ಹಂಚಿಕೊಂಡರು. ಶಿಕ್ಷಕಣ ಸಂಯೋಜಕ ಎ.ಸಿ ಹುಣಸಗಿ ಸ್ವಾಗತಿಸಿದರು.ಸಾಲೋಟಗಿ ಶ್ರೀ ಸಿದ್ದೇಶ್ವರ ಗುರುದೆವಾಶ್ರಮದ ಪೂಜ್ಯ ಸಂಗನೇಶ್ವರ ಸ್ವಾಮಿಜಿಗಳು ದಿವ್ಯ ಸಾನಿದ್ಯ ವಹಿಸಿ ಆಶಿರ್ವಚನ ನೀಡಿದರು.ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಅಲ್ಲದೆ ನಿವೃತ್ತರಾದ ಶಿಕ್ಷಕರಿಗೂ ಗೌರವಿಸಿದರು.
ವೇದಿಕೆ ಮೇಲೆ ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಅಜೀತ ಧನಶೆಟ್ಟಿ, ತಹಸಿಲ್ದಾರ ನಾಗೇಂದ್ರ ಕೋಳಶೆಟ್ಟಿ, ಪೌರಾಯುಕ್ತ ಶಿವಾನಂದ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನಕುಮಾರ.ಪಿ, ಗ್ರಾಮಿಣ ಸಿಪಿಐ ಸುನೀಲ ಪಾಟೀಲ, ಹಣಮಂತ ಮಾಳಗೊಂಡ, ವಿವಿಧ ಸಂಘಗಳ ಅಧ್ಯಕ್ಷರಾದ ಎನ್.ಎಮ್.ಕಾಳೆ, ಬಸವರಾಜ ರಾವೂರ, ಸುಜಾತಾ ಪೂಜಾರಿ, ಎ.ಎಸ್.ಬಿರಾದಾರ, ಅಲ್ತಾಪ ಬೋರಾಮಣಿ, ಡಿ.ಸಿ.ಹರಿಜನ, ಶಂಕರ ಕೋಳೆಕರ, ತುಕಾರಾಮ ಹೊಸಮನಿ, ಪ್ರಕಾಶ ಐರೋಡಗಿ, ಬಿ.ಸಿ.ಭಗವಂತಗೌಡರ ಸೇರಿದಂತೆ ಅನೇಕರು ಇದ್ದರು.
ಎಸ್.ವಿ ಹರಳಯ್ಯ, ಜಯರಾಮ ಚವ್ಹಾಣ, ಪಿ.ಜಿ.ಕಲ್ಮನಿ ಸೇರಿದಂತೆ ಮುಖ್ಯಗುರುಗಳು, ಶಿಕ್ಷಕರು ಅನೇಕರು ಉಪಸ್ಥಿತರಿದ್ದರು.