LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.


ಮಹಾಲಿಂಗಪುರ: ಎರಡನೇ ಹಂತದ ಬರಗಾಲ ಪ್ರದೇಶಗಳ ಘೋ?ಣಾ ಪಟ್ಟಿಯಲ್ಲಿ ತೇರದಾಳ ಮತ್ತು ರಬಕವಿ/ ಬನಹಟ್ಟಿ ತಾಲೂಕುಗಳನ್ನು ಸೇರ್ಪಡೆಗೊಳಿಸಿ ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿರುವ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ತೇರದಾಳ ಮತ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ರೈತರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಗುರುವಾರ ಪತ್ರಿಕೆಗೆ ವಿ?ಯ ತಿಳಿಸಿ ಮಾತನಾಡಿದ ಅವರು, ನಾನು ಕೂಡ ರೈತನ ಮಗನಾಗಿ, ರೈತರ ಕ? ಕಾರ್ಪಣ್ಯಗಳನ್ನು ಬಲ್ಲವನಾಗಿದ್ದೇನೆ.ಪ್ರಸ್ತುತ ವ?ದಲ್ಲಿ ಮಳೆ ಅಭಾವ ೧೯೭೬ ರ ದಾಖಲೆಯನ್ನು ಮೀರಿ ರಾಜ್ಯದಲ್ಲಿ ಭೀಕರ ಬರಗಾಲವನ್ನು ಸೃಷ್ಟಿಸಿದೆ.ಇದರಿಂದ ಈ ಭಾಗದ ರೈತರು ಕೂಡ ಆರ್ಥಿಕವಾಗಿ ಸಾಕ? ತೊಂದರೆಗಿಡಾಗಿದ್ದಾರೆ.
ಇತ್ತಿಚೆಗೆ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ ಬರಗಾಲ ಘೋ?ಣಾ ಪಟ್ಟಿಯಲ್ಲಿ ತೇರದಾಳ ಮತ್ತು ರಬಕವಿ/ ಬನಹಟ್ಟಿ ತಾಲೂಕುಗಳು ಇಲ್ಲದೆ ಇರುವುದು ನನಗೂ ಕೂಡ ಬೇಸರ ತರಿಸಿತು.ಈ ನಿಟ್ಟಿನಲ್ಲಿ ಸದರಿ ವಿ?ಯದ ಕುರಿತು ಸಿಎಂ ಅವರಲ್ಲಿ ಮನವಿ ಮಾಡಿಕ್ಕೊಂಡಾಗ ತಕ್ಷಣ ಅವರು ಸ್ಪಂದಿಸಿ ರೈತರಿಗೆ ಆಸರೆಯಾಗಿದ್ದಾರೆ ಎಂದು ಮತ್ತೊಮ್ಮೆ ಸಿಎಂ ಅವರಿಗೆ ಕೃತಜ್ಞತೆಗಳನ್ನು ತಿಳಿಸಿದರು. 
ಅಗ? ೨೭ ರಂದು ರಾಜ್ಯ ಸರ್ಕಾರ ಘೋಷಿಸಿದ ೧೦೧ ತಾಲೂಕುಗಳ ಬರಗಾಲ (ಮೊದಲ ಹಂತದ) ಪಟ್ಟಿಯಲ್ಲಿ ರಬಕವಿ /ಬನಹಟ್ಟಿ ಮತ್ತು ತೇರದಾಳ ತಾಲೂಕುಗಳು ಇರದೆ ಇರುವುದನ್ನು ನಾವಿಲ್ಲಿ ಸ್ಮರಿಸಬಹುದು.ಎರಡನೇ ಹಂತದಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಉಳಿದ ೧೩೯ ತಾಲೂಕುಗಳಲ್ಲಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. 
ಈ ವರದಿ ಆಧರಿಸಿ ಸೆಪ್ಟೆಂಬರ್ ೧೭ ರಂದು ಇನ್ನೂ ಹೆಚ್ಚಿನ ೨೩ ತಾಲೂಕುಗಳ ಬರಗಾಲ ಪಟ್ಟಿಯನ್ನು ಸರ್ಕಾರ ಬಿಡುಗಡೆಗೊಳಿಸಿದೆ.ಅದರ ಜೊತೆಗೆ ತೇರದಾಳ ಮತ್ತು ರಬಕವಿ /ಬನಹಟ್ಟಿ ತಾಲೂಕುಗಳನ್ನು ಕೂಡ ಈ ಸಂದರ್ಭದಲ್ಲಿ ಬರಗಾಲ ಪೀಡಿತವೆಂದು ಪರಿಗಣಿಸಿರುವುದಲ್ಲದೆ, ರೈತರಿಗೆ ಬೆಳೆವಿಮೆಯ ಗಡುವು ಸಹ ವಿಸ್ತರಣೆಗೆ ಹಾಗೂ ಪರಿಹಾರಕ್ಕಾಗಿ ಶೀಘ್ರವೇ ಕೇಂದ್ರಕ್ಕೆ ನಮ್ಮ ಸರ್ಕಾರ ಮನವಿ ಸಲ್ಲಿಸಲು ಸಿದ್ಧತೆಯಲ್ಲಿರುವ ಕ್ರಮ ಸ್ವಾಗತಾರ್ಹ.ಒಟ್ಟಾರೆಯಾಗಿ ಈ ಸ್ಪಂದನೆ ನಿಜಕ್ಕೂ ರೈತರ ಜೊತೆಯಲ್ಲಿ ನನಗೂ ಹ?ವನ್ನು ತಂದಿದೆ ಎಂದು ಮುಖಂಡ ಕೊಣ್ಣೂರ ಪತ್ರಿಕೆಗೆ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಫಾರಂ-2 ಇ-ಖಾತಾ ಮಾಡಿಕೊಡಲು ಆಗ್ರಹಸೆ.20ರಂದು ಬಳ್ಳಾರಿಯಲ್ಲಿ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ಸಿಎಂ ಕನಸು; ಜನರಿಗೆ ತೊಂದರೆ ನೀಡಿದರೆ ಕ್ರಮ: ನಾರಾ ಭರತ್ ರೆಡ್ಡಿ