LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಇಂಡಿ ತಾಲೂಕಿನ ಹಡಲಸಂಗ ಗ್ರಾಮದಲ್ಲಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭ

ಇಂಡಿ :  ಸೊನಕನಳ್ಳಿ, ಹಡಲಸಂಗ, ಜಿಗಜಣಗಿ, ಸಾತಾಲಗಾಂವ ಹೀಗೆ ಹಲವಾರು ಗ್ರಾಮದ ರೈತರು ನೀರಿಗಾಗಿ, ವಿದ್ಯುತಗಾಗಿ, ಶಿಕ್ಷಣಕ್ಕಾಗಿ ವಂಚಿತರಾಗಿದ್ದು, ಇದನ್ನು ಗಮನದಲ್ಲಿಟ್ಟು ಇವತ್ತು ಪದವಿ ಕಾಲೇಜು, ೧೧೦/೧೧ ಕೆ. ವಿ ವಿದ್ಯುತ್ ವಿತರಣಾ ಕೇಂದ್ರ, ರಾಷ್ಟ್ರೀಯ ಹೆದ್ದಾರಿಯಿಂದ ಸಂಚರಿಸಲು ಸುಗಮ ದಾರಿ ಇದು ನನ್ನ ಜನರ ಅಸೆ ಅದನ್ನು ಈಡೇರಿಸುವದು ನನ್ನ ಕರ್ತವ್ಯ ಅದನ್ನು ಇವತ್ತು ಕಾರ್ಯ ರೂಪಕ್ಕೆ ದಂದಿದ್ದೇನೆ ಎಂದು ಇಂಡಿ ಶಾಸಕರು ಯಶವಂತರಾಯಗೌಡ ಪಾಟೀಲ ಮಾತನಾಡಿದರು. 
         ಇಂಡಿ ತಾಲೂಕಿನ ಹಡಲಸಂಗ ಗ್ರಾಮದಲ್ಲಿ ೧೧೦/೧೧ಕೆವಿ ವಿದ್ಯುತ್ ಉಪಕೇಂದ್ರ ಕಾಮಗಾರಿ ಚಾಲನಾ ಸಮಾರಂಭ, ಹಡಲಸಂಗದಿAದ ಸೊನಕನಹಳ್ಳಿ ರಸ್ತೆ ಸುಧಾರಣೆ ಲೋಕಾರ್ಪಣೆ ಸಮಾರಂಭ,  ಶ್ರೀ ಸಾಬರಭದ್ರ ದೇವಸ್ಥಾನದ ಹತ್ತಿರ ಸಭಾ ಭವನದ ನಿರ್ಮಾಣ  ಶಂಕುಸ್ಥಾಪನೆ ಸಮಾರಂಭ,  ಹಡಲಸಂಗ ಗ್ರಾಮದ ಶ್ರೀ ವಿಠಲ ದೇವಸ್ಥಾನ ಹತ್ತಿರ ಸಭಾ ಭವನದ ನಿರ್ಮಾಣ  ಶಂಕುಸ್ಥಾಪನೆ ಸಮಾರಂಭ, ನೂತನ ಸರಕಾರಿ ಪಿಯು ಕಾಲೇಜು - ಉದ್ಘಾಟನಾ ಸಮಾರಂಭ,  ಹಡಲಸಂಗ ಗ್ರಾಮದ ಜನುಗು ಕೆರೆ ದುರಸ್ತಿ/ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಸಮಾರಂಭ, ೧೧೦/೧೧ ಕೆ.ವಿ. ಹಡಲಸಂಗ ವಿದ್ಯುತ್ ವಿತರಣಾ ಕೇಂದ್ರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
          ರೈತರು ತಮ್ಮ ಜಮೀನಿನಲ್ಲಿ ಉಳುಮೆ ಮಾಡಿ, ಬಿತ್ತನೆ ಮಾಡೋದಕ್ಕೆ ಸಾಲ ಸೋಲ ಮಾಡುತ್ತೀರಿ, ಅದೇ ರೀತಿಯಾಗಿ ರೈತರು ಎಲ್ಲ ಕಾರ್ಯಗಳ ಜ್ಯೋತೆ ಇನ್ಶೂರೆನ್ಸ್ ತುಂಬುವದನ್ನು ರೂಢಿಸಿಕೊಳ್ಳಿ ಎಂದರು.
         ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ದಯಾನಂದ ಮಠ, ವಿದ್ಯುತ್ ಪ್ರಸಾರ ಅಧಿಕಾರಿಗಳು ರಮೇಶ ಪವಾರ, ಗ್ರಾಮದ ಹಿರಿಯರು ಮಾತನಾಡಿ ಎಲ್ಲ ಯೋಜನೆಗಳು ಇಲ್ಲಿನ ಜನರಿಗೆ ಹೊಸ ಜೀವನ ನೀಡಿದೆ, ಎಲ್ಲ ಮೂಲ ಭೂತ ಸೌಲಭ್ಯ ನೀಡಿದ್ದಕ್ಕೆ ಧನ್ಯವಾದಗಳು ಸಲ್ಲಿಸಿದರು.
          
       ಈ ಸಂದರ್ಭದಲ್ಲಿ ದಿವ್ಯ ಸನಿಧ್ಯ ವಿಜಯನಗರ ಪ್ರಕಾಶ ಮಹಾರಾಜ, ಧರ್ಮ ಮಹಾರಾಜ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಬ್ಯುಸಿ. ಎಸ್. ಕವಲಗಿ, ಗ್ಯಾರಂಟಿ ಯೋಜನೆ ಅಧ್ಯಕ್ಷರು ಪ್ರಶಾಂತ್ ಕಾಳೆ, ರಮೇಶ ಪವಾರ, ಬಿ. ಸಿ. ಸಾವಕಾರ, ಶಿವಯೋಗೇಪ್ಪ ಚನಗೊಂಡ, ಸಿದ್ದಪ್ಪ, ಎಸ್. ಎ. ಬಿರಾದಾರ, ಜಗದೀಶ ಜಾಧವ, ದಯಾನಂದ ಮಠ ಸರ, ಎಸ್. ಎಸ್. ಪಾಟೀಲ, ಎ. ಈ. ಈ. ಸಂದೀಪ, ಗುತ್ತಿಗೆದಾರ ಗಚ್ಚಿನಮಠ, ಭೀಮಣ್ಣ ಗಡ್ಡದ, ಕಾಂತಾ ರೀಸಲ್ದಾರ, ಸಂತೋಷಗೌಡ ಪಾಟೀಲ, ಮೆಲ್ಲೆಷ ದೋಣಗಿ, ರಾಜು ಗೂಗವಾಡ, ಭೀಮ ಪವಾರ, ಶೇಖರ ನಾಯಕ, ವಿನೋದ ಶಹಾಪುರ, ವಿದ್ಯುತ್ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
22, 23ಕ್ಕೆ ರಾಯಬಾಗ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಇಂಡಿ ತಾಲೂಕಿನ ಹಡಲಸಂಗ ಗ್ರಾಮದಲ್ಲಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭ ಇಂಡಿ ತಾಲುಕಿನ ಭತಗುಣಕಿ ಗ್ರಾಮದ ವಿವಿದ್ದೋದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರಿ ಸಂಘ ಮತ್ತು ಹಾಲು ಉತ್ಪಾದಕರ ಸಂಘದ ಆವರಣದಲ್ಲಿ ನೂತನವಾಗಿ ಸೋಲಾರ ಘಟಕ ವ್ಯವಸ್ಥೆಗೆ ಚಾಲನೆ ನೀಡಿದರು.ಪ್ರಧಾನಿ ನರೇಂದ್ರ ಮೋದಿ, ಈ ದೇಶಕ್ಕೆ ಮತ್ತಷ್ಟು ಭದ್ರ ಬುನಾದಿದಲಿತರ ಮೇಲಿನ ದೌರ್ಜನ್ಯ, ಹಲ್ಲೆ, ಕೊಲೆ, ಸಾಮಾಜಿಕ ಬಹಿಷ್ಕಾರಕ್ಕೆ ಕಡಿವಾಣ ಹಾಕಿ : ಶ್ರೀನಿವಾಸ್ ಕರ್ಚೇಡ್ ನಬಿ ರಸೂಲ್ ಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಆರಿಫಾ ಆಗ್ರಹರಂಜಿಸಿದ ಯಾರಿಗೆ ಬೇಕು ನಿನ್ನ ಕವಿತೆ ನಾಟಕಡಾ.ಬಿ.ಆರ್.ಅಂಬೇಡಕರ್ ಸಂಘಕ್ಕೆ 10 ಲಕ್ಷ ರೂ.ಗಳ ದೇಣಿಗೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿವಿಶೇಷ ನೋಂದಣಿ ಅಭಿಯಾನ ಪರಿಶೀಲಿಸಿದ ವೀಕ್ಷಕ ಕ್ಯಾಪ್ಟನ್ ಕೆ.ರಾಜೇಂದ್ರಕಾಗವಾಡ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಸೆ.28ರಂದು ಬಂದ್: ಜ್ಯೋತಿಕುಮಾರ ಪಾಟೀಲ